For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಬಗ್ಗೆ ಹೀಗೊಂದು ಸುದ್ದಿ.!

  |
  Rocking Star Yash family has performed Shatru Samhara yaga | Yash | Shatrusamharayaga | Rituals

  ರಾಕಿಂಗ್ ಸ್ಟಾರ್ ಯಶ್ ಸದ್ಯ 'ಕೆ.ಜಿ.ಎಫ್-2' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಹೀಗಿರುವಾಗಲೇ, ನಟ ಯಶ್ ಮತ್ತು ಕುಟುಂಬದ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಅದೇನಪ್ಪಾ ಅಂದ್ರೆ, 'ಕೆ.ಜಿ.ಎಫ್-2' ಚಿತ್ರದ ಶೂಟಿಂಗ್ ನಿಂದ ಕೊಂಚ ಗ್ಯಾಪ್ ಪಡೆದ ಯಶ್ ಶತ್ರು ಸಂಹಾರ ಯಾಗ ಮಾಡಿಸಿದ್ದಾರಂತೆ.

  ನಿನ್ನೆ ಮಲ್ಲೇಶ್ವರಂನಲ್ಲಿರುವ ಶ್ರೀ ದುರ್ಗಾ ರಾಧಾ-ಕೃಷ್ಣ ದೇವಸ್ಥಾನದಲ್ಲಿ ನಡೆದ ಮಾರ್ಕಂಡೇಯ ಹೋಮದಲ್ಲಿ ಯಶ್ ಮತ್ತು ಕುಟುಂಬ ಪಾಲ್ಗೊಂಡಿದ್ದರಂತೆ. ಶತ್ರು ನಾಶ ಮತ್ತು ಕಂಟಕವನ್ನು ನಿಗ್ರಹಿಸಲು ಮಾರ್ಕಂಡೇಯ ಹೋಮ ಮಾಡಿಸಲಾಗಿದ್ದು, ಇದರಲ್ಲಿ ಯಶ್, ರಾಧಿಕಾ ಪಂಡಿತ್, ಯಶ್ ತಂದೆ ಮತ್ತು ತಾಯಿ ಭಾಗಿಯಾಗಿದ್ದರಂತೆ ಎಂಬ ಅಂತೆ-ಕಂತೆ ಹರಿದಾಡುತ್ತಿದೆ. ಈ ಬಗ್ಗೆ ಯಶ್ ಕುಟುಂಬ ಸ್ಪಷ್ಟನೆ ನೀಡಿಲ್ಲ.

  ಕೊನೆಯ ಹಂತಕ್ಕೆ ತಲುಪಿದ 'ಕೆಜಿಎಫ್-2' ಚಿತ್ರೀಕರಣ: ಹೈದರಾಬಾದ್ ಗೆ ಹೊರಡಲಿದೆ ಚಿತ್ರತಂಡಕೊನೆಯ ಹಂತಕ್ಕೆ ತಲುಪಿದ 'ಕೆಜಿಎಫ್-2' ಚಿತ್ರೀಕರಣ: ಹೈದರಾಬಾದ್ ಗೆ ಹೊರಡಲಿದೆ ಚಿತ್ರತಂಡ

  ಇನ್ನೂ, ಇದೇ ವೇಳೆ ದೇವಸ್ಥಾನದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೇ ಕೂಸಿಗೆ ನಾಮಕರಣ ಮಾಡಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.

  ಕಳೆದ ವರ್ಷದ ಅಕ್ಟೋಬರ್ 30 ರಂದು ಯಶ್ ಪತ್ನಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಶ್ ದಂಪತಿಯ ಮುದ್ದು ಮಗನಿಗೆ ಇದೀಗ ಮೂರು ತಿಂಗಳು ತುಂಬಿದ್ದು, ನಾಮಕರಣ ನೆರವೇರಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆಯೂ ಯಶ್ ಆಗಲಿ ರಾಧಿಕಾ ಪಂಡಿತ್ ಆಗಲಿ ಖಚಿತ ಪಡಿಸಿಲ್ಲ.

  English summary
  According to the latest Grapevine, Rocking Star Yash family has performed Shatru Samhara Yaga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X