»   » 'ಭಜರಂಗಿ' ನಿರ್ದೇಶಕ ಹರ್ಷ ರವರ ಇದೆಂಥ 'ಕಪಿಚೇಷ್ಟೆ'?

'ಭಜರಂಗಿ' ನಿರ್ದೇಶಕ ಹರ್ಷ ರವರ ಇದೆಂಥ 'ಕಪಿಚೇಷ್ಟೆ'?

Posted By:
Subscribe to Filmibeat Kannada

ಶೀರ್ಷಿಕೆ ಓದಿ ತಲೆಗೆ ಹುಳ ಬಿಟ್ಟುಕೊಳ್ಳುವ ಮುನ್ನ ಪೂರ ಮ್ಯಾಟರ್ ಹೇಳ್ತೀವಿ ಕೇಳಿ.

'ಜೈ ಮಾರುತಿ 800' ಸಿನಿಮಾದ ಚಿತ್ರೀಕರಣದಲ್ಲಿ ಸದ್ಯಕ್ಕೆ ಬಿಜಿಯಾಗಿರುವ ನಿರ್ದೇಶಕ ಎ.ಹರ್ಷ, ಆಗಲೇ ಹೊಸ ಚಿತ್ರದ ಬಗ್ಗೆ ಪ್ಲಾನ್ ಮಾಡಿದ್ದಾರೆ. ಆ ಚಿತ್ರದ ಶೀರ್ಷಿಕೆ 'ಕಪಿಚೇಷ್ಟೆ'.

Director A.Harsha's next movie titled 'Kapicheshte'

ಶ್ರೀ ಆಂಜನೇಯನ ಅಪ್ಪಟ ಭಕ್ತನಾಗಿರುವ ನೃತ್ಯ ಸಂಯೋಜಕ ಕಮ್ ನಿರ್ದೇಶಕ ಎ.ಹರ್ಷ ವಾಯುಪುತ್ರನ ಹೆಸರಲ್ಲೇ 'ಭಜರಂಗಿ', 'ವಜ್ರಕಾಯ', 'ಜೈ ಮಾರುತಿ 800' ಸಿನಿಮಾ ಮಾಡಿದ್ದಾರೆ. ['ಜೈ ಮಾರುತಿ 800' ಫುಲ್ ಕಾಮಿಡಿ ಸಿನಿಮಾ: ಎ ಹರ್ಷ]

ಇದೀಗ ಅದೇ ಮಾರುತಿ ಕೃಪಾ ಕಟಾಕ್ಷದಿಂದ 'ಕಪಿಚೇಷ್ಟೆ' ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. 'ಜೈ ಮಾರುತಿ 800' ಚಿತ್ರದ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ರವರಿಗೆ ಆಗಲೇ ಕಥೆ ಹೇಳಿ ಒಪ್ಪಿಸಿರುವುದರಿಂದ ಜಯಣ್ಣ ಕಂಬೈನ್ಸ್ ನಲ್ಲೇ 'ಕಪಿಚೇಷ್ಟೆ' ಸೆಟ್ಟೇರುವ ಸಾಧ್ಯತೆ ಇದೆ.

'ಕಪಿಚೇಷ್ಟೆ' ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಹರ್ಷ ಅಧಿಕೃತ ಮಾಹಿತಿ ಹೊರ ಹಾಕಲಿದ್ದಾರೆ.

English summary
According to the latest buzz, Director A.Harsha's next movie is titled as 'Kapicheshte'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada