»   » ತಮನ್ನಾ ತಕಧಿಮಿತಕ್ಕೆ, ನಖಶಿಖಾಂತ ಉರಿದ ಪ್ರೇಮ್

ತಮನ್ನಾ ತಕಧಿಮಿತಕ್ಕೆ, ನಖಶಿಖಾಂತ ಉರಿದ ಪ್ರೇಮ್

Posted By: ಸೋನು
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಹಾಕಿಕೊಂಡು 'ಜೋಗಿ' ಪ್ರೇಮ್ ಅವರು ಮೊದಲು 'ಕಲಿ' ಸಿನಿಮಾ ಮಾಡ್ತೀನಿ ಅಂತ ಭಾರಿ ಬಿಲ್ಡಪ್ ಕೊಟ್ರು. ಅದು ಅಲ್ಲಿಗೆ ನಿಂತ ನೀರಾಯ್ತು.

ಆಮೇಲೆ ಅದನ್ನು ಪಕ್ಕಕ್ಕಿಟ್ಟ ಪ್ರೇಮ್ ಮತ್ತೆ ಹೊಸದಾಗಿ ಕಿಚ್ಚ-ಶಿವಣ್ಣರ ಜೊತೆ 'ದಿ ವಿಲನ್' ಚಿತ್ರಕ್ಕೆ ಕೈ ಹಾಕಿದ್ರು. ಆ ಚಿತ್ರಕ್ಕೆ ಖ್ಯಾತ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಅವರನ್ನು ಪ್ರೇಮ್ ಕರೆ ತರುತ್ತಾರೆ ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು.['ಕಲಿ' ಹಾಗೆ ಇದು ಕಾಗೆ ಹಾರಿಸೋ ಪ್ರೋಗ್ರಾಂ ಆಗ್ಲಿಲ್ಲಾಂದ್ರೆ ಸಾಕು.!]

'ಡಿ.ಕೆ' ಚಿತ್ರಕ್ಕೆ ಹಾಟ್ ಬೆಡಗಿ ಸನ್ನಿ ಲಿಯೋನ್ ಅವರನ್ನೇ ಕರೆತಂದ ಪ್ರೇಮ್ ಗೆ, ತಮನ್ನಾರನ್ನು ಕರೆ ತರೋದು, ದೊಡ್ಡ ಕೆಲ್ಸ ಅಲ್ಲ ಬಿಡಿ ಅಂತ ಕೆಲವರು ಮಾತಾಡಿಕೊಂಡರು.

ಈಗ ಮಿಲ್ಕಿ ಬ್ಯೂಟಿ ಕನ್ನಡಕ್ಕೆ ಬಂದ್ರು, ಆದ್ರೆ ಕರ್ಕೊಂಡು ಬಂದಿದ್ದು ಪ್ರೇಮ್ ಅವರಲ್ಲ, 'ಜಾಗ್ವಾರ್' ನಲ್ಲಿ ನಿಖಿಲ್ ಜೊತೆ ಸೊಂಟ ಕುಣಿಸೋಕೆ ತಮನ್ನಾ ಬಂದ್ರು. ಇನ್ನು ಪ್ರೇಮ್ ಈ ಬಗ್ಗೆ ಏನು ಹೇಳ್ತಾರೆ ಅನ್ನೋವಷ್ಟರಲ್ಲಿ, ಖುದ್ದು ಪ್ರೇಮ್ ಅವರೇ, ತಮನ್ನಾ ಭಾಟಿಯಾ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರಂತೆ. ಯಾಕಿರಬಹುದು ಮುಂದೆ ಓದಿ....

'ದಿ ವಿಲನ್'ಗೆ ತಮನ್ನಾ ಬೇಡ್ವಂತೆ

'ನಾನು ತಮನ್ನಾ ಅವರನ್ನು ನನ್ನ 'ದಿ ವಿಲನ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯ ಮಾಡೋಣ ಅಂದುಕೊಂಡಿದ್ದೆ. ಆದರೆ ಅವರು ಒಂದು ವಿಶೇಷ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಆದ್ದರಿಂದ ಇದೀಗ ನಾನು ತಮನ್ನಾ ಅವರನ್ನು ನನ್ನ ಚಿತ್ರಕ್ಕೆ ಹಾಕಿಕೊಳ್ಳುವ ಯೋಜನೆಯನ್ನು ಕೈ ಬಿಟ್ಟಿದ್ದೇನೆ' ಎಂದು 'ಜೋಗಿ' ಪ್ರೇಮ್ ಅವರು ಹೇಳಿದ್ದಾರೆ.[ಕಿಚ್ಚ ಸುದೀಪ್ ಇದಕ್ಕೆ ಒಪ್ಪಿದ್ದಾರಾ? ಪ್ರೇಮ್ ಪ್ಲಾನ್ ಠುಸ್ ಪಟಾಕಿ ಆಗ್ಬಿಟ್ರೆ?]

ಬೇರೆ ನಾಯಕಿಯನ್ನು ಕರೆ ತರುತ್ತಾರಂತೆ ಪ್ರೇಮ್

'ಇದೀಗ ನನ್ನ ಲಿಸ್ಟ್ ನಲ್ಲಿ ತಮನ್ನಾ ಅವರಷ್ಟೇ ಫೇಮಸ್ ಆಗಿರುವ ಇಬ್ಬರು ಖ್ಯಾತ ನಟಿಯರಿದ್ದಾರೆ. ಅವರು ನನ್ನ ನಿರ್ದೇಶನದ 'ದಿ ವಿಲನ್' ಚಿತ್ರದ ಭಾಗವಾಗಲು ತುಂಬಾ ಆಸಕ್ತಿ ತೋರಿದ್ದಾರೆ, ಆದ್ದರಿಂದ ನಾನು ಅವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ' ಅಂತ ಪ್ರೇಮ್ ತಮನ್ನಾಗೆ ಓಪನ್ ಚಾಲೆಂಜ್ ಮಾಡುವಂತೆ, ಮಾತನಾಡಿದ್ದಾರೆ.[ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

ನಾಯಕಿ ಆಧಾರಿತ ಸಿನಿಮಾ

ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ದಿ ವಿಲನ್' ಸಿನಿಮಾದಲ್ಲಿ, ನಾಯಕರಿಗಿಂತ ನಾಯಕಿಯೇ ಪ್ರಮುಖ ಭಾಗವಂತೆ. ಆದ್ದರಿಂದ ಪ್ರೇಮ್ ಅವರು ನಾಯಕಿಯ ಆಯ್ಕೆ ವಿಚಾರದಲ್ಲಿ ತುಂಬಾನೇ ಜಾಗರೂಕರಾಗಿದ್ದಾರಂತೆ.

'ಜಾಗ್ವಾರ್' ಹಾಡಿನ ಬಗ್ಗೆ ಪ್ರಶ್ನಿಸಿದ ಪ್ರೇಮ್

'ಜಾಗ್ವಾರ್' ಹಾಡಿನ ಬಗ್ಗೆ ಪ್ರೇಮ್ ಅವರು ನಟಿ ತಮನ್ನಾ ಭಾಟಿಯಾ ಅವರನ್ನು ವಿಚಾರಿಸಿದರಂತೆ. ಆದರೆ ಹಾಡಿನಲ್ಲಿ ತೊಡಗಿಸಿಕೊಂಡಿದ್ದು ತಮನ್ನಾ ಅವರ ಇಷ್ಟ. ಇನ್ನು ಅವರು ನನ್ನ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುವುದಿಲ್ಲ ಎಂದು ಪ್ರೇಮ್ ಅವರು ಖಡಾ-ಖಂಡಿತವಾಗಿ ತಿಳಿಸಿದ್ದಾರೆ.

ಲಂಡನ್ ಗೆ ಹೋಗ್ತಾರಂತೆ ಪ್ರೇಮ್

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜೊತೆ 'ಗಾಂಧಿಗಿರಿ' ಚಿತ್ರದ ಹಾಡಿನ ರೆಕಾರ್ಡಿಂಗ್ ನಲ್ಲಿ ತೊಡಗಿಸಿಕೊಂಡಿರುವ ಪ್ರೇಮ್ ಅವರು, ಸದ್ಯದಲ್ಲಿಯೇ 'ದಿ ವಿಲನ್'ಗೆ ಲೊಕೇಶನ್ ನೋಡಲು ನಿರ್ಮಾಪಕ ಸಿ.ಆರ್ ಮನೋಹರ್ ಅವರ ಜೊತೆ ಲಂಡನ್ ಗೆ ಹಾರಲಿದ್ದಾರಂತೆ. ಲೊಕೇಶನ್ ಹಂಟಿಂಗ್ ಮುಗಿದ ನಂತರ ನಾಯಕಿಯ ಆಯ್ಕೆ ವಿಚಾರದ ಕಡೆ ಪ್ರೇಮ್ ಗಮನ ಹರಿಸುತ್ತಾರಂತೆ.

'ಗಾಂಧಿಗಿರಿ' ಶೂಟಿಂಗ್ ಮುಗಿದಿದೆ

ರಘು ಹಾಸನ್ ನಿರ್ದೇಶನ ಮಾಡುತ್ತಿರುವ 'ಗಾಂಧಿಗಿರಿ' ಚಿತ್ರದಲ್ಲಿ 'ಜೋಗಿ' ಪ್ರೇಮ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರ ಭಾಗದ ಚಿತ್ರೀಕರಣವನ್ನು ಪ್ರೇಮ್ ಈಗಾಗಲೇ ಪೂರ್ತಿಗೊಳಿಸಿದ್ದಾರೆ.

English summary
Actor-Director 'Jogi' Prem, who was all set to bring in Actress Tamannaah Bhatia to Kannada with his next directorial 'The Villain', alongside Actor Shiva Rajkumar and Actor Sudeep, is having second thoughts. The reason being the actress is part of the special song in the Kannada and Telugu bilingual Jaguar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada