For Quick Alerts
  ALLOW NOTIFICATIONS  
  For Daily Alerts

  ಮತ್ತೆ 'ಚಿರು' ನಿರ್ದೇಶಕರ ಜೊತೆ ಕೈ ಜೋಡಿಸುತ್ತಾರಾ ಕೃತಿ ಖರಬಂದ?

  By Suneetha
  |

  ಗ್ಲಾಮರ್ ಬೊಂಬೆ ಕೃತಿ ಖರಬಂದ ಅವರು 'ಚಿರು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು. ಚಿರಂಜೀವಿ ಸರ್ಜಾ ಅವರ ಜೊತೆ 'ಇಲ್ಲೆ ಇಲ್ಲಿ ಎಲ್ಲೋ ನನ್ನ ಮನಸು ಕಾಣೆಯಾಗಿದೆ' ಡ್ಯುಯೆಟ್ ಹಾಡಿ, ಎಲ್ಲರ ಮೆಚ್ಚುಗೆ ಗಳಿಸಿದರು.

  ಅಂದಹಾಗೆ ಕೃತಿ ಅವರನ್ನು ಕನ್ನಡಕ್ಕೆ ಕರೆತಂದಿದ್ದು, ಖ್ಯಾತ ನಿರ್ದೇಶಕ ಮಹೇಶ್ ಬಾಬು ಅವರು. ಸದಾ ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯ ಮಾಡುವ ಮಹೇಶ್ ಬಾಬು ಅವರು ಇತ್ತೀಚೆಗಷ್ಟೇ 'ಕ್ರೇಜಿ ಬಾಯ್' ಎಂಬ ಚಿತ್ರದ ಮೂಲಕ ನಟ ದಿಲೀಪ್ ಪ್ರಕಾಶ್ ಮತ್ತು ಅಶಿಕಾ ರಂಗನಾಥ್ ಅವರನ್ನು ಪರಿಚಯ ಮಾಡಿದರು.[ಮುದ್ದು ಬೆಡಗಿ ಕೃತಿ ಅವರ 'ರಾಝ್-ರಿಬೂಟ್' ಟ್ರೈಲರ್ ನೋಡಿ...]

  'ಗೂಗ್ಲಿ' ಸಿನಿಮಾ ಕೃತಿ ಖರಬಂದ ಅವರ ವೃತ್ತಿ ಬದುಕಿಗೆ ಅತ್ಯಂತ ದೊಡ್ಡ ಬ್ರೇಕ್ ನೀಡಿತ್ತು. ತದನಂತರ ಇಡೀ ಕನ್ನಡ ಚಿತ್ರರಂಗದಲ್ಲಿ ಕೃತಿ ಅವರು ಫೇಮಸ್ ಆದರು. ಇದೀಗ ಮತ್ತೆ ಮಹೇಶ್ ಬಾಬು ಅವರು ಕೃತಿ ಅವರ ಜೊತೆ ಹೊಸ ಚಿತ್ರದಲ್ಲಿ ಕೈ ಜೋಡಿಸಲಿದ್ದಾರಂತೆ.[ಗರತಿ 'ಗಂಗಮ್ಮ' ಹೋಗಿ 'ಬಿಚ್ಚಮ್ಮ' ಆದ್ರಾ 'ಗೂಗ್ಲಿ' ಬೆಡಗಿ ಕೃತಿ]

  Director Mahesh Babu to direct Actress Kriti Kharbanda yet again

  ನಿರ್ದೇಶಕ ಮಹೇಶ್ ಬಾಬು ಅವರು 'ಕ್ರೇಜಿ ಬಾಯ್' ಚಿತ್ರದ ನಂತರ 'ಆ ದಿನಗಳು' ಖ್ಯಾತಿಯ ನಟ ಚೇತನ್ ಅವರ ಜೊತೆ ಹೊಸ ಪ್ರಾಜೆಕ್ಟ್ ನ ಕೆಲಸಗಳಲ್ಲಿ ಬಿಜಿಯಾಗಿದ್ದು, ಅದಾದ ಮೇಲೆ ಕೃತಿ ಖರಬಂದ ಅವರ ಜೊತೆ ಹೊಸ ಚಿತ್ರ ಮಾಡಲಿದ್ದಾರಂತೆ. ಈಗಾಗಲೇ ಕೃತಿ ಖರಬಂದ ಅವರ ಭೇಟಿ ಕಾರ್ಯಕ್ರಮ ಮುಗಿದಿದ್ದು, ಅವರ ಡೇಟ್ ಸಿಕ್ಕ ತಕ್ಷಣ ಸಿನಿಮಾ ಶುರುವಾಗಲಿದೆ ಎನ್ನಲಾಗುತ್ತಿದೆ.[ಕೃತಿ ಖರಬಂದ ಆಹಾ ನಿನ್ನ ಧ್ವನಿ ಏನ್ ಚೆಂದಾ......]

  ಜನವರಿ ತಿಂಗಳಿನಲ್ಲಿ ಹೊಸ ಪ್ರಾಜೆಕ್ಟ್ ಶುರುವಾಗಲಿದ್ದು, ನಾಯಕಿ ಕೇಂದ್ರಿತ ಹಾರರ್-ಥ್ರಿಲ್ಲರ್ ಕಥೆಯನ್ನು ಮಹೇಶ್ ಬಾಬು ಅವರು ಕೃತಿ ಖರಬಂದ ಅವರಿಗಾಗಿ ಅಂತಾನೇ ಸಿದ್ಧಪಡಿಸಿದ್ದಾರಂತೆ.

  ಇನ್ನು ಕೃತಿ ಅವರು ಕೂಡ 'ರಾಝ್-ರಿಬೂಟ್' ಮೂಲಕ ಹಾರರ್ ಸಿನಿಮಾದಲ್ಲಿ, ಬಾಲಿವುಡ್ ನಲ್ಲಿ ಕಮಾಲ್ ಮಾಡಿದ್ದು, ಸದ್ಯಕ್ಕೆ ದುನಿಯಾ ವಿಜಯ್ ಅವರ 'ಮಾಸ್ತಿ ಗುಡಿ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಅದಾದ ನಂತರ ಮಹೇಶ್ ಬಾಬು ಅವರ ಸಿನಿಮಾದ ಮೂಲಕ ಮಗದೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.[ವಿಜಿ 'ಮಾಸ್ತಿ ಗುಡಿ'ಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್]

  ಅಂತೂ-ಇಂತೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಿಜಿ ಇದ್ದರೂ ಕೂಡ, ಕನ್ನಡ ನಂಟನ್ನು ಬಿಡದ ಕೃತಿ ಖರಬಂದ ಅವರು ಮತ್ತೆ-ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Kannada Director Mahesh Babu, after 'Crazy Boy', he is currently busy with the preparation work of his next venture with Actor Chetan of 'Aa Dinagalu' fame. In the meantime, he is also gearing up for another project, which he will be helming for Actress Kriti Kharbanda. Mahesh, who introduced Kriti to the tinsel town with Chiru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X