For Quick Alerts
  ALLOW NOTIFICATIONS  
  For Daily Alerts

  ವೆಂಕಟ್ ಜೊತೆ 'ಡಿಕ್ಟೇಟರ್' ಬಿಟ್ಟ ಎಸ್ ನಾರಾಯಣ್ ಮಾಡಿದ್ದೇನು?

  By ಸೋನು
  |

  ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತು ನಿರ್ದೇಶಕ ಎಸ್ ನಾರಾಯಣ್ ಅವರ 'ಡಿಕ್ಟೇಟರ್' ಸಿನಿಮಾ ಏನಾಗಿದೆ ಅಂತ ಯಾರಿಗೂ ಗೊತ್ತಿಲ್ಲ. ವೆಂಕಟ್ ಅವರು 'ಡಿಕ್ಟೇಟರ್' ಬೇಡ ಅಂತ ಎದ್ದು ಹೋದ ಮೇಲೆ ಎಸ್ ನಾರಾಯಣ್ ಏನು ಮಾಡುತ್ತಿದ್ದಾರೆ ಅಂತ ಹುಡುಕುತ್ತಾ ಹೋದರೆ, ಅವರು ಸದ್ದಿಲ್ಲದೆ ಮತ್ತೊಂದು ಸಿನಿಮಾದ ತಯಾರಿಯಲ್ಲಿ ತೊಡಗಿದ್ದಾರೆ.

  ಅಂದಹಾಗೆ ಕಲಾಸಾಮ್ರಾಟ್ ಎಸ್ ನಾರಾಯಣ್ ಅವರು ಈ ಬಾರಿ ಸಿನಿಮಾ ಮಾಡುತ್ತಿರೋದು ಮಾತ್ರ 'ಲಕ್ಷ್ಮಣ' ಸಿನಿಮಾ ಖ್ಯಾತಿಯ ನಟ ಅನೂಪ್ ರೇವಣ್ಣ ಅವರ ಜೊತೆಯಂತೆ.[ವೆಂಕಟ್ ವಿರುದ್ಧ ಚಾಟಿ ಬೀಸಿದ ನಿರ್ದೇಶಕ ಎಸ್ ನಾರಾಯಣ್]

  ಈಗಾಗಲೇ 'ಲಕ್ಷ್ಮಣ' ಸಿನಿಮಾ ಪೂರ್ತಿಗೊಳಿಸಿ ಬಿಡುಗಡೆಗಾಗಿ ಕಾದು ಕುಳಿತಿರುವ ನಟ ಅನೂಪ್ ರೇವಣ್ಣ ಅವರು ಎಸ್ ನಾರಾಯಣ್ ಅವರ ಜೊತೆ ಕೈ ಜೋಡಿಸಿದರು ಅಚ್ಚರಿ ಇಲ್ಲ.

  ಇನ್ನು ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ಜೂನ್ 9 ರಿಂದ ಚಿತ್ರ ಸೆಟ್ಟೇರಿದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ. ಪಕ್ಕಾ ಮಾಸ್ ಚಿತ್ರ ಎಂದು ಹೇಳಲಾಗುತ್ತಿರುವ ಚಿತ್ರಕ್ಕೆ ಕೊಂಚ ಫ್ಯಾಮಿಲಿ ಸೆಂಟಿಮೆಂಟ್ ಅಂಶಗಳನ್ನು ಸೇರಿಸಿ ಫ್ಯಾಮಿಲಿ ಮನರಂಜನಾತ್ಮಕ ಸಿನಿಮಾ ಮಾಡಲು ಎಸ್ ನಾರಾಯಣ್ ಪ್ಲ್ಯಾನ್ ಮಾಡುತ್ತಿದ್ದಾರೆ ಅಂತ ಅಲ್ಲಲ್ಲಿ ಸುದ್ದಿಯಾಗಿದೆ.[ಆರ್.ಚಂದ್ರು ನಿರ್ದೇಶನದಲ್ಲಿ ಎಚ್.ಎಂ.ರೇವಣ್ಣ ಪುತ್ರ ಅನೂಪ್ ಎಂಟ್ರಿ]

  ತಮಿಳಿನ ಹಮೀದ್ ಎಂಬುವವರು ಹೆಣೆದಿರುವ ಕಥೆಗೆ ಎಸ್ ನಾರಾಯಣ್ ಅವರು ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಿರ್ಮಾಪಕ ಕಡಿಯಾಲ ಸುಬ್ರಮಣ್ಯಮ್ ಎಂಬುವವರು ಬಂಡವಾಳ ಹೂಡಲಿದ್ದಾರಂತೆ. ಎಸ್ ನಾರಾಯಣ್ ಸಿನಿಮಾ ಮಾಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ ಆದರೆ ಸುದ್ದಿಯಾಗಿರೋದು ಮಾತ್ರ ಸತ್ಯ.

  English summary
  Kannada Director S.Narayan ready to make new kannada film with 'Lakshmana' fame actor Anoop Revanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X