»   » ತಮಿಳಿನಲ್ಲಿ ಅಮಲಾ ಪೌಲ್ ಬ್ಯಾನ್ ಹಿಂದೆ 'ಸೂಪರ್ ಸ್ಟಾರ್' ಕೈವಾಡ?

ತಮಿಳಿನಲ್ಲಿ ಅಮಲಾ ಪೌಲ್ ಬ್ಯಾನ್ ಹಿಂದೆ 'ಸೂಪರ್ ಸ್ಟಾರ್' ಕೈವಾಡ?

Posted By:
Subscribe to Filmibeat Kannada

ಖ್ಯಾತ ತಮಿಳು ನಿರ್ದೇಶಕ ಎ.ಎಲ್.ವಿಜಯ್ ರವರಿಗೆ ವಿಚ್ಚೇದನ ನೀಡಲು (ಪರಸ್ಪರ ಒಪ್ಪಿಗೆ ಮೇರೆಗೆ) ಕೋರ್ಟ್ ಮೆಟ್ಟಿಲೇರಿರುವ ನಟಿ ಅಮಲಾ ಪೌಲ್ ಪ್ರತಿ ದಿನ ಗಾಸಿಪ್ ಕಾಲಂನಲ್ಲಿ ಸದ್ದು ಮಾಡುತ್ತಿದ್ದಾರೆ.

ನಟಿ ಅಮಲಾ ಪೌಲ್ ಬಗ್ಗೆ ಅಂತೆ-ಕಂತೆ ಸುದ್ದಿಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹರಿದಾಡುತ್ತಿವೆ. ಆ ಅಂತೆ-ಕಂತೆಗಳ ಗಂಟಿನಲ್ಲಿ ಈಗ 'ಸೂಪರ್ ಸ್ಟಾರ್' ಹೆಸರೂ ಕೂಡ ಕೇಳಿ ಬಂದಿದೆ! [ನಟಿ ಅಮಲಾ ಪೌಲ್ - ವಿಜಯ್ ಗಲಾಟೆ ಸಂಸಾರದ ಗುಟ್ಟು ರಟ್ಟು.!]

ಎರಡು ವರ್ಷಗಳ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಟ್ಟು ಸಿನಿಮಾ ರಂಗದಲ್ಲಿ ಮುಂದುವರಿಯಲು ನಿರ್ಧಾರ ಮಾಡಿರುವ ನಟಿ ಅಮಲಾ ಪೌಲ್, ಕಾಲಿವುಡ್ ನಲ್ಲಿ ಅನಧಿಕೃತ (Unofficial) ಬ್ಯಾನ್ ಎದುರಿಸುತ್ತಿದ್ದಾರೆ. ಆ ಬ್ಯಾನ್ ಹಿಂದೆ 'ಸೂಪರ್ ಸ್ಟಾರ್' ಕೈವಾಡ ಇದೆ ಎನ್ನಲಾಗಿದೆ! ಮುಂದೆ ಓದಿ....

Unofficial Ban ಆಗಲು 'ಸೂಪರ್ ಸ್ಟಾರ್' ಕಾರಣ!

ತಮಿಳು ಸಿನಿ ಅಂಗಳದಲ್ಲಿ ನಟಿ ಅಮಲಾ ಪೌಲ್ ಅನ್ ಆಫೀಶಿಯಲ್ ಬ್ಯಾನ್ ಆಗಲು ಸೂಪರ್ ಸ್ಟಾರ್ ಕಾರಣ ಅಂತ ಕೆಲ ತಮಿಳು ಆನ್ ಲೈನ್ ವೆಬ್ ತಾಣಗಳು ವರದಿ ಮಾಡಿವೆ. [ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?]

ಸೂಪರ್ ಸ್ಟಾರ್ ಗೂ ಅಮಲಾ ಗೂ ಏನ್ ಲಿಂಕು?

ನಟಿ ಅಮಲಾ ಪೌಲ್ ಹಾಗೂ ಕಾಲಿವುಡ್ 'ಸೂಪರ್ ಸ್ಟಾರ್' ರವರ ಅಳಿಯ (ಹೆಸರು ಕೇಳ್ಬೇಡಿ) ಕ್ಲೋಸ್ ಫ್ರೆಂಡ್ಸ್ ಅಂತೆ. ತಮ್ಮ ಅಳಿಯನ ಜೊತೆ ಅಮಲಾ ಪೌಲ್ 'ಆತ್ಮೀಯತೆ' ನೋಡಿ ಸೂಪರ್ ಸ್ಟಾರ್ ಕೆಂಡಾಮಂಡಲವಾಗಿದ್ದಾರೆ. ಅದರ ಪರಿಣಾಮವಾಗಿ, ಕಾಲಿವುಡ್ ನಲ್ಲಿ ಅಮಲಾ ಪೌಲ್ ಅನಧಿಕೃತ ಬ್ಯಾನ್ ಆಗಿದ್ದಾರೆ ಎಂಬುದು ಸದ್ಯದ ಖಬರ್.

ಅಳಿಯನಿಗೆ ವಾರ್ನ್ ಮಾಡಿದ್ರು.!

ಇದೇ ವಿಚಾರದ ಕುರಿತಾಗಿ ಅಪ್ ಸೆಟ್ ಆಗಿದ್ದ 'ಸೂಪರ್ ಸ್ಟಾರ್' ತಮ್ಮ ಅಳಿಯನನ್ನು ಕರೆದು ಅಮಲಾ ಪೌಲ್ ರಿಂದ ದೂರ ಇರುವಂತೆ ವಾರ್ನ್ ಮಾಡಿದ್ರು ಅಂತ ಕೂಡ ಸುದ್ದಿ ಆಗಿದೆ. [ಅಮಲಾ ಪೌಲ್ ವಿಚ್ಛೇದನ: ಆಕೆಯ ತಾಯಿಯೇ ಮೇನ್ ವಿಲನ್?]

ಮಗಳ ಸಂಸಾರ ಉಳಿಯಬೇಕು.!

ನಟಿ ಅಮಲಾ ಪೌಲ್ ಜೊತೆಗಿನ 'ಆತ್ಮೀಯ' ಸ್ನೇಹದಿಂದಾಗಿ ತಮ್ಮ ಮಗಳು-ಅಳಿಯನ ಸಂಸಾರ ಹಳಿ ತಪ್ಪಬಾರದು ಎಂಬ ಕಳಕಳಿ ಸೂಪರ್ ಸ್ಟಾರ್ ರದ್ದು.

ಕಡೆ ಕ್ಷಣದಲ್ಲಿ ಚಿತ್ರದಿಂದ ಔಟ್

ಸೂಪರ್ ಸ್ಟಾರ್ ಅಳಿಯನ ಮುಂದಿನ ಚಿತ್ರಕ್ಕೆ ನಾಯಕಿ ಆಗಿ ನಟಿ ಅಮಲಾ ಪೌಲ್ ರನ್ನ ಆಯ್ಕೆ ಮಾಡಲಾಗಿತ್ತು. ಆದ್ರೆ, ಕಡೆ ಕ್ಷಣದಲ್ಲಿ ಆ ಚಿತ್ರದಿಂದ ಅಮಲಾ ಪೌಲ್ ರವರನ್ನ ಕೈಬಿಡಲಾಗಿದೆ ಎಂಬುದು ಮತ್ತೊಂದು ಗುಲ್ಲು.

ಮಾಸ್ಟರ್ ಮೈಂಡ್ ಅವರಲ್ಲ, ಇವರು.!

ಕಾಲಿವುಡ್ ನಲ್ಲಿ ನಟಿ ಅಮಲಾ ಪೌಲ್ ಅನ್ ಅಫೀಶಿಯಲ್ ಬ್ಯಾನ್ ಆಗಲು ಮಾವ (ನಿರ್ಮಾಪಕ ಅಳಗಪ್ಪನ್) ಕಾರಣ ಅಂತ ಈ ಹಿಂದೆ ಸುದ್ದಿ ಆಗಿತ್ತು. ಆದ್ರೀಗ ಬ್ಯಾನ್ ಹಿಂದಿನ ಮಾಸ್ಟರ್ ಮೈಂಡ್ ಅವರಲ್ಲ, ಬದಲಾಗಿ 'ಸೂಪರ್ ಸ್ಟಾರ್' ಎನ್ನಲಾಗಿದೆ. [ವಿಚ್ಛೇದನ ಪಡೆದ್ರೆ ಏನಂತೆ, ಅಮಲಾ ಪೌಲ್ ಗೆ ಸಿನಿಮಾಗಳು ಸಿಗ್ಬೇಕಲ್ಲ.!]

ಯಾರು 'ಸೂಪರ್ ಸ್ಟಾರ್'? ಮತ್ತವರ ಅಳಿಯ?

ಕಾಲಿವುಡ್ ನ ಆ ಸೂಪರ್ ಸ್ಟಾರ್ ಯಾರು? ಮತ್ತವರ ಅಳಿಯನ ಹೆಸರೇನು? ಎಂಬುದು ಓಪನ್ ಸೀಕ್ರೆಟ್. ಅದನ್ನ ನೀವು ಕೇಳುವ ಹಾಗಿಲ್ಲ. ನಾವು ಹೇಳುವ ಹಾಗಿಲ್ಲ.

ಯಾವುದು ಸತ್ಯ? ಯಾವುದು ಸುಳ್ಳು?

ಇದರಲ್ಲಿ ಯಾವುದು ಸತ್ಯ ಅಂತ ನಟಿ ಅಮಲಾ ಪೌಲ್ ರವರೇ ಬಾಯ್ಬಿಟ್ಟು ಹೇಳ್ಬೇಕು.

English summary
According to the Grapevine, A Kollywood Superstar, who is extremely irked with Amala Paul's over-friendliness with his son-in-law, a leading hero of the industry, is the mastermind behind the ban.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada