»   » ಜಿರಲೆ ಕದ್ದು ನೊಣ ಮಾಡಿಲ್ಲ: ರಾಜಮೌಳಿ

ಜಿರಲೆ ಕದ್ದು ನೊಣ ಮಾಡಿಲ್ಲ: ರಾಜಮೌಳಿ

Posted By:
Subscribe to Filmibeat Kannada
ಸೋಲನ್ನೇ ಕಾಣದ ಅಜೇಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಮೇಲೆ ಕಥೆ ಕದ್ದ ಆರೋಪ ಕೇಳಿ ಬಂದಿದೆ. ಅದು ಸುದೀಪ್ ಅಭಿನಯದ 'ಈಗ' ಬಾಲಿವುಡ್ ಅಂಗಳದಲ್ಲಿ 'ಮಕ್ಕಿ' ಯಾಗಿ ಹಾರಾಡಲು ಸಿದ್ಧವಾದ ಸಂದರ್ಭದಲ್ಲಿ ಈ ಅಪಸ್ವರ ಕೇಳಿ ಬರುತ್ತಿದೆ.

ಆಸ್ಕರ್ ಗೆ ಕಳಿಸಿದ 'ಬರ್ಫಿ' ಚಿತ್ರವೇ ಹತ್ತು ಹಲವು ಕ್ಲಾಸಿಕ್ ಚಿತ್ರಗಳ ಚಿತ್ರಾನ್ನ ಎಂಬುದು ಜಗಜ್ಜಾಹೀರಾದ ಮೇಲೆ ಬಾಲಿವುಡ್ ಮಂದಿ ದಕ್ಷಿಣದ ನಿರ್ದೇಶಕನ ಚಿತ್ರ ಮೇಲೆ ಕಣ್ಣು ಹಾಕಿದ್ದಾರೆ.

'2010ರಲ್ಲಿ ತೆರೆ ಕಂಡ ಕಾಕ್ರೋಚ್ (Cockroach) ಚಿತ್ರವನ್ನು ನಕಲು ಮಾಡಿಲ್ಲ. 'ಈಗ' ಚಿತ್ರಕಥೆ ಸಂಪೂರ್ಣವಾಗಿ ನೈಜತೆಯಿಂದ ಕೂಡಿದೆ. ಇದಕ್ಕೆ ಜನರೇ ಸಾಕ್ಷಿ ಬೇರೆ ಪುರಾವೆ ಬೇಕಿಲ್ಲ ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

ಉತ್ತರ ಭಾರತದಲ್ಲಿ 'ಈಗ' ಚಿತ್ರದ ಹಿಂದಿ ಅವತರಣಿಕೆಯ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ರಾಜಮೌಳಿ ಅವರ ಮುಂದೆ ಜಿರಲೆ ಬಿಟ್ಟು ಪತ್ರಕರ್ತರು ಪ್ರಶ್ನೆ ಹಾಕಿದ್ದಾರೆ.

'ಈಗ' ಹಾಗೂ ಕಾಕ್ರೋಚ್ ಎರಡು ಚಿತ್ರಗಳ ಕಥೆಯಲ್ಲಿ ಸಾಮ್ಯತೆ ಇದೆ ನಿಜ. ಆದರೆ, ಈಗ ಕಥೆಯನ್ನು ಕಾಕ್ರೋಚ್ ಗೂ ಮೊದಲೇ ಬರೆಯಲಾಗಿತ್ತು. ಸದ್ಯಕ್ಕೆ ನನ್ನ ಬಳಿ ಪ್ರೂಫ್ ಇಲ್ಲ ಎಂದಿದ್ದಾರೆ.

ಈಗ ಚಿತ್ರದಲ್ಲಿ ನಾಯಕ ಸಾವನ್ನಪ್ಪಿದ ಮೇಲೆ ಪ್ರೀತಿಯನ್ನು ಉಳಿಸಿಕೊಳ್ಳಲು ಹಾಗೂ ವಿಲನ್ ಸಂಹರಿಸಲು ನೊಣ ರೂಪದಲ್ಲಿ ಜನ್ಮತಾಳುತ್ತಾನೆ. ಕಾಕ್ರೋಚ್ ಚಿತ್ರದಲ್ಲೂ ಇದೇ ರೀತಿ ಕಥೆ ಇದ್ದು, ನಾಯಕ ಪ್ರೀತಿಗಾಗಿ ಜಿರಲೆ ರೂಪಧರಿಸುತ್ತಾನೆ. ಎರಡು ಚಿತ್ರಗಳಲ್ಲಿ ವಿಲನ್ ಮೇಲೆ ಅಟ್ಯಾಕ್ ಮಾಡುವ ತಂತ್ರಗಳು ಬಹುತೇಕ ಒಂದೇ ರೀತಿ ಇದೆ ಎಂದು ಹೇಳಲಾಗಿದೆ.

ಈಗ ಚಿತ್ರ ಜನ್ಮ ತಾಳುವ ಮುನ್ನ ಹಲವಾರು ಹಾಲಿವುಡ್ ಅನಿಮೇಷನ್ ಚಿತ್ರಗಳನ್ನು ನೋಡಿದ್ದೆ. ಇದೇ ರೀತಿ 'ರಿವೇಂಜ್ 'ಕಥೆಯುಳ್ಳ ಫ್ಲೂಕ್ ಚಿತ್ರ ಇಷ್ಟವಾಗಿತ್ತು. ಆ ಚಿತ್ರದಲ್ಲಿ ನಾಯಿಯೊಂದು ದ್ವೇಷ ಸಾಧಿಸುವ ಕತೆ ಇದೆ.

ಅಸಲಿಗೆ ಕಾಕ್ರೋಚ್ ಚಿತ್ರವೇ 1995ರಲ್ಲಿ ತೆರೆಕಂಡ ಕಾರ್ಲೊ ಕಾರ್ಲೈ ನಿರ್ದೇಶನದ 'ಫ್ಲೂಕ್' ಚಿತ್ರದ ಕಾಪಿ. 'ಈಗ' ಹಾಗೂ ಕಾಕ್ರೋಚ್ ರಿಮೇಕ್ ಅಥವಾ ನಕಲು ಎನ್ನುವುದು ಸರಿ ಕಾಣುವುದಿಲ್ಲ ಎಂದು ರಾಜಮೌಳಿ ಗರಂ ಆಗಿ ಹೇಳಿದ್ದಾರೆ.

ಈಗ ಚಿತ್ರ ತೆಲುಗು, ತಮಿಳು ಭಾಷೆಯಲ್ಲಿ ಡಬ್ ಆಗಿ ಭರ್ಜರಿ ಯಶಸ್ಸು ತಂದಿದೆ. ಕನ್ನಡದ ಕಿಚ್ಚ ಸುದೀಪ್ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿಸಿದೆ. ಬಾಲಿವುಡ್ ನಲ್ಲಿ ಮಾತ್ರ ಕೆಲವರು ಕೊಂಕು ಮಾತನಾಡಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ 'ಮಕ್ಕಿ' ಚಿತ್ರವನ್ನು ಶಾರುಖ್ ಖಾನ್, ಚಿತ್ರ ನಿರ್ಮಾತ ರಾಜು ಹಿರಾನಿ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಕರ್ ರೇಸ್ ನಲ್ಲಿದ್ದ 'ಈಗ' ಬರ್ಫಿ ಹಿಂದಿಕ್ಕುವಲ್ಲಿ ಸೋತಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
Director SS Rajamouli, who is busy promoting Makkhi, the Hindi version of his recent blockbuster movie Eega, has denied the charges of copying 2010 Australian flick Cockroach. The Tollywood filmmaker says that Eega is completely an original story and he has no substantial proof to prove it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada