India
  For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಅಪ್ಪನಾಗಿ ಡೈಲಾಗ್ ಕಿಂಗ್ ಕಾಣಿಸಿಕೊಳ್ತಾರಾ?

  By Suneetha
  |

  ಸ್ಯಾಂಡಲ್ ವುಡ್ ನಲ್ಲಿ ಡೈಲಾಗ್ ಕಿಂಗ್ ಅಂತಾನೇ ಫೇಮಸ್ ಆಗಿರುವ ಸಾಯಿಕುಮಾರ್ ಅವರು ಅನುಪ್ ಭಂಡಾರಿ ಅವರ 'ರಂಗಿತರಂಗ' ಚಿತ್ರದಲ್ಲಿ ಪೋಸ್ಟ್ ಮಾಸ್ಟರ್ ಕಾಳಿಂಗ ಭಟ್ಟರ ಪಾತ್ರದಲ್ಲಿ ಪ್ರೇಕ್ಷಕರಿಗೆ ರಂಗು-ರಂಗಿನ ಆಟ ತೋರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

  ಇದೀಗ ಮತ್ತೆ ಗಾಂಧಿನಗರಕ್ಕೆ ವಾಪಸಾಗಿರುವ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ನಿರ್ಮಾಪಕ ಕೆ.ಮಂಜು ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಯಶ್ ಅಪ್ಪನಾಗಿ ಕಾಣಿಸಿಕೊಳ್ಳಲಿದ್ದಾರೆ.['ಯಶ'ಸ್ಸು ಸಿಕ್ಕ ಮೇಲೆ ಎಲ್ಲರೂ ಅಷ್ಟೇ ಅಂತೀರಾ?]

  ಇದಕ್ಕಾಗಿ ಖುದ್ದು ರಾಕಿಂಗ್ ಸ್ಟಾರ್ ಯಶ್ ಅವರೇ ಕಥೆಯ ಡಿಸ್ಕಷನ್ ನಲ್ಲಿ ತೊಡಗಿರುವುದು ಯಶ್ ಹಾಗೂ ಸಾಯಿಕುಮಾರ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

  ಇದೇ ಮೊದಲ ಬಾರಿಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಒಟ್ಟಿಗೆ ಅಭಿನಯಿಸುತ್ತಿರುವುದರಿಂದ ಪ್ರೇಕ್ಷಕರಲ್ಲಿ ಸಾಮಾನ್ಯವಾಗಿ ಕುತೂಹಲ ಮನೆ ಮಾಡಿದೆ.['ಮಾಸ್ಟರ್ ಪೀಸ್' ಯಶ್ ಗೆ ಡೆಡ್ಲಿ ಆದಿತ್ಯ ವಿಲನ್.?]

  ಸದ್ಯಕ್ಕೆ ಯಶ್ ನಟಿಸಿರುವ 'ಮಾಸ್ಟರ್ ಪೀಸ್' ಚಿತ್ರದ ಶೂಟಿಂಗ್ ಫೈನಲ್ ಹಂತದಲ್ಲಿದ್ದು. ಇದು ಮುಗಿದ ತಕ್ಷಣ ನವೆಂಬರ್ ತಿಂಗಳಿನಿಂದ ಸಾಯಿಕುಮಾರ್ ಯಶ್ ಜುಗಲ್ ಬಂದಿಯ ಸಿನಿಮಾ ಸೆಟ್ಟೇರಲಿದೆ.

  ಇನ್ನು ಇದೇ ಚಿತ್ರಕ್ಕೆ ಯಶ್ ಜೋಡಿಯಾಗಿ ರಾಧಿಕಾ ಪಂಡಿತ್ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ಬಲ್ಲ ಮಾಹಿತಿಗಳು ತಿಳಿಸಿವೆ, ಆದರೆ ಇದಕ್ಕೆ ರಾಧಿಕಾ ಪಂಡಿತ್ ಕಡೆಯಿಂದ ಇನ್ನೂ ಹಸಿರು ನಿಶಾನೆ ದೊರಕದ ಕಾರಣ ಇದು ಪಕ್ಕಾ ಆಗಿಲ್ಲ.

  'ಮೊಗ್ಗಿನ ಮನಸು', 'ಡ್ರಾಮಾ' ಹಾಗೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲೂ ಒಂದಾಗಿದ್ದ ಈ ಜೋಡಿ ಮತ್ತೊಮ್ಮೆ ಒಂದಾದರೆ ಅಭಿಮಾನಿಗಳಂತೂ ಫುಲ್ ಖುಷ್ ಆಗೋದು ಗ್ಯಾರಂಟಿ.

  English summary
  Saikumar, popularly known as Dialogue King turns Yash's reel father! The latest reports says that, Yash and producer K Manju who collaborated for Raja Huli has once again teamed up to give yet another blockbuster for Kannada audiences and Saikumar has been chosen to play Yash's father.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X