»   » ನನ್ನ ಸಿನಿಮಾಗಳು ಸೋತಿರಬಹುದು, ಆದರೆ ನಾನಲ್ಲ

ನನ್ನ ಸಿನಿಮಾಗಳು ಸೋತಿರಬಹುದು, ಆದರೆ ನಾನಲ್ಲ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ 'ರೋಮಿಯೋ' ಚಿತ್ರ ನಾಳೆ, ಅಂದರೆ ಜುಲೈ 06, 2012 ರಂದು ರಾಜ್ಯಾದ್ಯಂತ ಮಾತ್ರವಲ್ಲದೇ 'ಯುಎಸ್ಎ'ದಲ್ಲೂ ಬಿಡುಗಡೆಯಾಗಲಿದೆ. ಸದ್ಯಕ್ಕೆ ಸೋಲಿನ ಸರಪಳಿಯಲ್ಲಿ ಬಂಧಿಯಾಗಿರುವ ಗಣೇಶ್ ಅವರಿಗೆ ಈ ರೋಮಿಯೋ ಚಿತ್ರವಾದರೂ ಯಶಸ್ಸನ್ನು ತಂದುಕೊಡಲಿದೆಯೇ ಎಂದು ಗಾಂಧೀನಗರದ ಚರ್ಚಿಸುತ್ತಿದೆ.

ಈ ಸಂದರ್ಭದಲ್ಲಿ ಗಣೇಶ್ ಆಡಿರುವ ಮಾತೊಂದು ಅವರಿಗಿಂತಲೂ ಹೆಚ್ಚಾಗಿ ಸುದ್ದಿಯಲ್ಲಿದೆ. "ನನ್ನ ಸಿನಿಮಾಗಳು ಸೋತಿರಬಹುದು, ಆದರೆ ನಾನು ಸೋತಿಲ್ಲ" ಇದು ಗೋಲ್ಡನ್ ಸ್ಟಾರ್ ಗಣೇಶ್ ಬೆಂಗಳೂರು ಮಿರರ್ ಕೇಳಿದ ಪ್ರಶ್ನೆಗೆ ಹೇಳಿರುವ ಉತ್ತರ. ಇದನ್ನು ಯಾವ ಅರ್ಥದಲ್ಲಿ ಗಣೇಶ್ ಹೇಳಿದ್ದಾರೋ ಗೊತ್ತಿಲ್ಲ, ಆದರೆ ಗಾಂಧಿನಗರವಂತೂ ಈ ಮಾತನ್ನು ವಿಪರೀತ ಅರ್ಥಕ್ಕೆ ಕೊಂಡೊಯ್ದು ಅದರ ಬಗ್ಗೆಯೇ ಚರ್ಚಿಸುತ್ತಿರುವುದಂತೂ ಹೌದು.

'ಅಡಿಗೆ ಬಿದ್ದರೂ ಮೂಗು ಮೇಲು' ಎಂಬಂತೆ ಮಾತನಾಡುತ್ತಿದ್ದಾರೆ ಗಣೇಶ್ ಎಂಬುದು ಕೆಲವರ ಆರೋಪವಾದರೆ ಇನ್ನೂ ಕೆಲವರು ಸೋಲಿನಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಅಪ್ಪಟ ಚಿನ್ನ ಎನ್ನುತ್ತಿದ್ದಾರಂತೆ. ಇತ್ತೀಚಿನ ನಿಮ್ಮ ಚಿತ್ರದ ಸೋಲುಗಳು ನಿಮ್ಮಲ್ಲಿ ಆತಂಕ ತಂದಿವೆಯೇ? ಹೀಗಂತ 'ಬೆಂಗಳೂರು ಮಿರರ್' ಪ್ರಶ್ನಿಸಿದಾಗ, ಗಣೇಶ್ ಮೇಲಿನಂತೆ ಉತ್ತರಿಸಿದ್ದಾರೆ.

ಗಣೇಶ್ ಅಷ್ಟನ್ನು ಮಾತ್ರ ಹೇಳಿಲ್ಲ. "ಚಿತ್ರವೊಂದರ ಸೋಲಿಗೆ ಅಥವಾ ಗೆಲುವಿಗೆ ನಾಯಕನೊಬ್ಬನೇ ಕಾರಣನಾಗುವುದಿಲ್ಲ. ಅದರಲ್ಲಿ ಹಲವು ಸಂಗತಿಗಳಿರುತ್ತವೆ. ನಟನೆಯನ್ನಷ್ಟೇ ಪರಿಗಣಿಸಿ ಹೇಳಿರುವುದಾದರೆ, ನನಗೆ ಕೊಟ್ಟಿರುವ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ ಎಂದು ಗಟ್ಟಿಯಾಗಿ ಹೇಳಬಲ್ಲೆ. ಒಂದು ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ ಎಂದಾಗ ಮಾತ್ರ ನನಗೆ ಕಳವಳ ಉಂಟಾಗುತ್ತದೆ. ಆದರೆ ಹಾಗಾಗಿಲ್ಲ" ಎಂದಿದ್ದಾರೆ ಗಣೇಶ್.

ನಾಳೆ ಬಿಡುಗಡೆಯಾಗಲಿರುವ ಪಿಸಿ ಶೇಖರ್ ನಿರ್ದೇಶನದ 'ರೋಮಿಯೋ' ಚಿತ್ರದ ಯಶಸ್ಸಿನ ಮೇಲೆ ಗಣೇಶ್ ಅವರ ಮುಂದಿನ ಚಿತ್ರಜೀವನ ನಿಂತಿದೆ ಎಂಬುದು ಬಹಳಷ್ಟು ಜನರ ವಾದ. ರೋಮಿಯೋ, ಗಣೇಶ್ ಅವರ 20 ನೇ ಚಿತ್ರ. ಈ ಚಿತ್ರಕ್ಕೆ ಭಾವನಾ (ಜಾಕಿ ಖ್ಯಾತಿ) ನಾಯಕಿ. ಈ ವೇಳೆ, "ನನ್ನ 25ನೇ ಚಿತ್ರ ಹೋಮ್ ಬ್ಯಾನರ್ ನಿಂದ ಬರಲಿದೆ" ಎಂದು ಘೋಷಿಸಿದ್ದಾರೆ ಗಣೇಶ್. (ಒನ್ ಇಂಡಿಯಾ ಕನ್ನಡ)

English summary
Golden Star Ganesh told that his movies are flopped but not he. He answered that his movie failure in Box Office is not because of him only. It is the total package of a team and not any single person. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada