Don't Miss!
- Sports
U-19 Women's T20 World Cup 2023: ಇಂಗ್ಲೆಂಡ್ ಮಣಿಸಿದರೆ ಭಾರತದ ವನಿತೆಯರೇ ವಿಶ್ವ ಚಾಂಪಿಯನ್
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
400 ಕೋಟಿ ಗಳಿಸಿದ 'ಕಾಂತಾರ': ರಿಷಬ್ ಶೆಟ್ಟಿಗೆ ಸಿಕ್ಕ ಸಂಭಾವನೆ ಎಷ್ಟು?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿದೆ. ಸೀಮಿತ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಹಲವು ದಾಖಲೆಗಳನ್ನು ಚಿಂದಿ ಉಡಾಯಿಸಿರುವ 'ಕಾಂತಾರ' ಕರ್ನಾಟಕದಲ್ಲಿ ಅತಿ ಹೆಚ್ಚು ಮಂದಿ ನೋಡಿದ ಸಿನಿಮಾ ಎಂಬ ದಾಖಲೆ ಬರೆದಿದೆ. ಮಾತ್ರವಲ್ಲ ಹಿಂದಿ ಬೆಲ್ಟ್‌ನಲ್ಲಿ ಸಹ ಹಲವು ದಾಖಲೆಗಳನ್ನು ಬರೆದಿದೆ.
ವೀರೇಂದ್ರ
ಹೆಗ್ಡೆ
ಒಪ್ಪಿದರೆ
'ಕಾಂತಾರ
2
ಗುಟ್ಟು
ಬಿಚ್ಚಿಟ್ಟ
ದೈವನರ್ತಕ
ಉಮೇಶ್?
'ಕಾಂತಾರ' ಸಿನಿಮಾ ರಿಷಬ್ ಶೆಟ್ಟಿಯ ಕನಸಿನ ಕೂಸು. ಈ ಸಿನಿಮಾದ ಕತೆ, ನಿರ್ದೇಶನ ರಿಷಬ್ ಶೆಟ್ಟಿಯವರದ್ದೇ. ಅದರ ಜೊತೆಗೆ ನಾಯಕ ನಟನಾಗಿ ನಟಿಸಿದ್ದಾರೆ ಸಹ. ತಮ್ಮ ಅದ್ಭುತ ಕ್ರಿಯಾಶೀಲತೆ, ಸೃಜನಶೀಲತೆಯಿಂದ 400 ಕೋಟಿ ಗಳಿಸಿದ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಆದರೆ ಈ ಸಿನಿಮಾಕ್ಕೆ ರಿಷಬ್ ಶೆಟ್ಟಿಗೆ ದೊರೆತ ಸಂಭಾವನೆ ಎಷ್ಟು ಎಂಬ ಬಗ್ಗೆ ಕೆಲವು ಜನಪ್ರಿಯ ಕನ್ನಡ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಈ ಸುದ್ದಿ ಹರಿದಾಡುತ್ತಿದೆ.

ರಿಷಬ್ ಶೆಟ್ಟಿಗೆ ಕೊಟ್ಟ ಸಂಭಾವನೆ ಎಷ್ಟು?
ಸಿನಿಮಾದ ಕತೆ ಹೆಣೆದು, ನಿರ್ದೇಶನ ಮಾಡಿ, ನಟಿಸಿರುವ ರಿಷಬ್ ಶೆಟ್ಟಿಗೆ 'ಕಾಂತಾರ' ಸಿನಿಮಾಕ್ಕೆ ನಾಲ್ಕು ಕೋಟಿ ಸಂಭಾವನೆ ದೊರೆತಿದೆ ಎನ್ನಲಾಗುತ್ತಿದೆ. ರಿಷಬ್‌ರ ಸಂಭಾವನೆ ಹಾಗೂ ಇತರ ವಿಷಯಗಳ ಬಗ್ಗೆ ನಿರ್ಮಾಣ ಸಂಸ್ಥೆಯೊಂದಿಗೆ ಮೊದಲೇ ಒಪ್ಪಂದ ಆಗಿದ್ದು, ಅದರಂತೆಯೇ ರಿಷಬ್‌ಗೆ ಸಂಭಾವನೆ ನೀಡಲಾಗಿದೆ. ಸಿನಿಮಾ ದೊಡ್ಡ ಹಿಟ್ ಆದ ಬಳಿಕ ಮೊತ್ತ ಹೆಚ್ಚಿಸಲಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಪ್ರಮೋದ್, ಅಚ್ಯುತ್, ಕಿಶೋರ್‌ಗೆ ಎಷ್ಟು ಸಂಭಾವನೆ?
ಇನ್ನು ಸಿನಿಮಾದಲ್ಲಿ ಪೋಷಕ ನಟನಾಗಿ ನಟಿಸಿರುವ ಪ್ರಮೋದ್ ಶೆಟ್ಟಿಗೆ ಈ ಸಿನಿಮಾಕ್ಕೆ 60 ಲಕ್ಷ ಹಣ ಸಿಕ್ಕಿದೆಯಂತೆ. ಈ ಸಿನಿಮಾದಲ್ಲಿ ನಟಿಸಿರುವ ಮತ್ತಿಬ್ಬರು ಪ್ರಮುಖ ನಟರಾದ ಅಚ್ಯುತ್ ಕುಮಾರ್ ಹಾಗೂ ನಟ ಕಿಶೋರ್‌ಗೂ ಸಹ ಬಹುತೇಕ ಇಷ್ಟೇ ಮೊತ್ತದ ಸಂಭಾವನೆ ದೊರೆತಿದೆ ಎನ್ನಲಾಗುತ್ತಿದೆ.

ನಾಯಕಿ ಸಪ್ತಮಿ ಗೌಡಗೆ ಸಿಕ್ಕ ಸಂಭಾವನೆ ಎಷ್ಟು?
ಸಿನಿಮಾದ ನಾಯಕಿ ಸಪ್ತಮಿ ಗೌಡಗೆ ಈ ಸಿನಿಮಾಕ್ಕೆ ಒಂದು ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಸಪ್ತಮಿ ಗೌಡ ಹೊಸ ನಾಯಕಿಯಾಗಿದ್ದರೂ ಸಹ ಅವರಿಗೆ ಸಿನಿಮಾದಲ್ಲಿ ಹೆಚ್ಚು ದೃಶ್ಯಗಳು, ಹಾಡುಗಳು ಇರುವ ಕಾರಣ ಅವರಿಗೆ ಪ್ರಮುಖ ಪೋಷಕ ನಟರಿಗಿಂತಲೂ ತುಸು ಹೆಚ್ಚು ಸಂಭಾವನೆ ನೀಡಿರುವ ಸಾಧ್ಯತೆ ಇದೆ.

'ಕಾಂತಾರ' ಸಿನಿಮಾದ ಬಜೆಟ್ ಎಷ್ಟು?
'ಕಾಂತಾರ' ಸಿನಿಮಾ ಕ್ಕೆ ಖರ್ಚಾಗಿರುವ ಬಜೆಟ್ ಸುಮಾರು ಹದಿನೈದು ಕೋಟಿ ಅಷ್ಟೆ ಆದರೆ ಸಿನಿಮಾ ಗಳಿಸಿರುವುದು 400 ಕೋಟಿಗೂ ಹೆಚ್ಚು. ಈ 400 ಕೋಟಿ ಹಣವನ್ನು ಕೇವಲ ಚಿತ್ರಮಂದಿರಗಳಲ್ಲಿ ಅಷ್ಟೆ ಗಳಿಸಿದೆ. ಇನ್ನು ಒಟಿಟಿ, ಟಿವಿ ರೈಟ್ಸ್, ಆಡಿಯೋ ಹಕ್ಕುಗಳು ಇನ್ನಿತರೆಗಳಿಂದ ಇನ್ನೂ ದೊಡ್ಡ ಮೊತ್ತದ ಹಣ 'ಕಾಂತಾರ'ದ ಪಾಲಾಗಿದೆ. ಒಟ್ಟಿನಲ್ಲಿ ಹೊಂಬಾಳೆ ಪಾಲಿಗೆ ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ 'ಕಾಂತಾರ'.