»   » ಜನಪ್ರಿಯ ಕನ್ನಡ ಟಿವಿ ವಾಹಿನಿಗಳಿಗೆ ಧಮ್ಕಿ ಹಾಕಿದ ಹುಚ್ಚ ವೆಂಕಟ್

ಜನಪ್ರಿಯ ಕನ್ನಡ ಟಿವಿ ವಾಹಿನಿಗಳಿಗೆ ಧಮ್ಕಿ ಹಾಕಿದ ಹುಚ್ಚ ವೆಂಕಟ್

By: ಹರಾ
Subscribe to Filmibeat Kannada

ಯಾವುದೋ ಮೂಲೆಯಲ್ಲಿದ್ದ 'ಹುಚ್ಚ ವೆಂಕಟ್' ಬಾಯಿಗೆ ಬಂದ್ಹಂಗೆ ಮಾತಾಡಿ ಯೂಟ್ಯೂಬ್ ನಲ್ಲಿ ವರ್ಲ್ಡ್ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದು ಬಿಲ್ಡಪ್ ತೆಗೆದುಕೊಳ್ಳುತ್ತಿರುವ ಹುಚ್ಚು ವೆಂಕಟನ ಬಗ್ಗೆ ನಾವು ಇಂಟ್ರೊಡಕ್ಷನ್ ಕೊಡಬೇಕಾಗಿಲ್ಲ.

ಟಿವಿಯಲ್ಲಿ 'ಹುಚ್ಚ ವೆಂಕಟ್'ನ ಅಬ್ಬರವನ್ನ ನೀವೆಲ್ಲಾ ನೋಡಿ ಹಲ್ಲು ಬಿಟ್ಟಿರುತ್ತೀರಾ. ಆದ್ರೆ, ಅದೇ ಚಾನೆಲ್ ಗಳಲ್ಲಿ ಹುಚ್ಚ ವೆಂಕಟ್ ಮಾಡಿರುವ ಎಡವಟ್ಟುಗಳ ಬಗ್ಗೆ ನಿಮ್ಗೆ ಗೊತ್ತಿಲ್ಲ. ಅಂತಹ ಒಂದು ಪುರಾಣ ಹೇಳ್ತೀವಿ ಕೇಳಿ.

ಯ್ಯೂಟ್ಯೂಬ್ ನಲ್ಲಿ ಹುಚ್ಚ ವೆಂಕಟ್ ಗೆ ಲೈಕ್ಸ್ ಜಾಸ್ತಿಯಾಗ್ತಿದ್ದಂತೆ, ಟಾಪ್ ಗೇರ್ ನಲ್ಲಿ ಆಕಾಶದಲ್ಲಿ ಹಾರಾಡುತ್ತಿದ್ದ ವೆಂಕಟ್, ಕನ್ನಡದ ಎಲ್ಲಾ ವಾಹಿನಿಗಳಿಗೂ ಫೋನ್ ಮಾಡಿ - ''ನನ್ನ 'ಹುಚ್ಚ ವೆಂಕಟ್' ಚಿತ್ರದ ಸ್ಯಾಟೆಲೈಟ್ ರೈಟ್ಸ್ ಇನ್ನೂ ಸೇಲ್ ಆಗಿಲ್ಲ. ನಾನು ಸ್ಕ್ರೀನ್ ಮೇಲೆ ಬಂದರೆ ಸಾಕು. ನಿಮ್ಮ ಚಾನೆಲ್ ಟಿ.ಆರ್.ಪಿ ಕಿತ್ಕೊಂಡು ಹೋಗುತ್ತೆ. ಸಿನಿಮಾ ಕೊಂಡುಕೊಳ್ಳಿ'' ಅಂತ ಕೇಳಿದ್ದಾರೆ.

Huccha Venkat's mad act scares Kannada Entertainment Channels

ಇದಕ್ಕೆ ಸ್ಪಂದಿಸಿದ ಕನ್ನಡದ ಜನಪ್ರಿಯ ವಾಹಿನಿಯೊಂದು 'ಹುಚ್ಚ ವೆಂಕಟ್' ಚಿತ್ರದ ಬೆಲೆಯನ್ನ ಕೇಳಿದೆ. ಇದಕ್ಕೆ ಹುಚ್ಚ ವೆಂಕಟ್ ಕೋಟಿಗೂ ಅಧಿಕ ಮೊತ್ತವನ್ನ ಕೋಟ್ ಮಾಡಿದ್ದಾರೆ. ಥಿಯೇಟರ್ ನಲ್ಲೇ ಕೇಳೋರೂ ಇಲ್ಲದ ಈ ಚಿತ್ರಕ್ಕೆ ಕೋಟಿ+ ಕೊಟ್ಟರೆ ಕಮರ್ಶಿಯಲ್ ಕೂಡ ಬರಲ್ಲ ಅಂತ ವಾಹಿನಿ ಆಫರ್ ನ ಅಲ್ಲೇ ಕೈಬಿಟ್ಟಿದೆ. [ನಾಯಕಿಯನ್ನೇ ಕಿಡ್ನಾಪ್ ಮಾಡ್ತವ್ನಂತೆ ಹುಚ್ಚ ವೆಂಕಟ!]

ಆದ್ರೆ, ಹುಚ್ಚ ವೆಂಕಟ್ ಮಾತ್ರ ಸುಮ್ಮನೆ ಕೂತಿಲ್ಲ. ''ಹುಚ್ಚ ವೆಂಕಟ್ ಸಿನಿಮಾನ ಕೊಂಡುಕೊಳ್ಳಲೇಬೇಕು'' ಅಂತ ದುಂಬಾಲು ಬಿದ್ದಿದ್ದಾರಂತೆ. ದಿನಬೆಳಗಾದರೆ, ''ಚಿತ್ರವನ್ನ ಕೊಂಡುಕೊಳ್ಳಲ್ಲ ಅಂದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ'' ಅಂತ ಪೇಜ್ ಲೆಕ್ಕದಲ್ಲಿ ಮೆಸೇಜ್ ಮಾಡುತ್ತಿದ್ದಾರಂತೆ. [ಫೇಸ್ ಬುಕ್ ನಲ್ಲಿ ''ಹುಚ್ಚು'' ವೆಂಕಟನಿಗೆ ಮಹಾ ಮಂಗಳಾರತಿ]

'ಹುಚ್ಚ ವೆಂಕಟ್'ನ ಈ ರೂಪ ನೋಡಿ, ಪಾಪ ಚಾನೆಲ್ ನವರು ದಿಗಿಲು ಬಿದ್ದಿದ್ದಾರೆ. ಏನು ಮಾಡೋದು ಅಂತ ಗೊತ್ತಾಗದೆ ಸೈಲೆಂಟ್ ಆಗಿದ್ದಾರೆ.

English summary
Huccha Venkat is in news again. After being popular on Youtube, Huccha Venkat is forcing Leading Kannada Entertainment Channels to purchase satellite rights of his movie 'Huccha Venkat' for a fancy price.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada