»   » ಹೇ..ರಾಮ್..! ಮತ್ತೊಮ್ಮೆ ವಿವಾದ ಭುಗಿಲೇಳುತ್ತಾ.?

ಹೇ..ರಾಮ್..! ಮತ್ತೊಮ್ಮೆ ವಿವಾದ ಭುಗಿಲೇಳುತ್ತಾ.?

Posted By:
Subscribe to Filmibeat Kannada

ಇಷ್ಟು ದಿನ ಸೈಲೆಂಟ್ ಆಗಿದ್ದ ಶ್ರೀನಗರ ಕಿಟ್ಟಿ ಇದೀಗ ಫಾರ್ಮ್ ಗೆ ಮರಳಿದ್ದಾರೆ. ಮತ್ತೊಮ್ಮೆ ಸಿಕ್ಕಾಪಟ್ಟೆ ಸೌಂಡ್ ಮಾಡುವ ಎಲ್ಲಾ ಸೂಚನೆ ನೀಡಿದ್ದಾರೆ. ಅಂದ್ಹಾಗೆ, ಶ್ರೀನಗರ ಕಿಟ್ಟಿ ಹೆಡ್ ಲೈನ್ಸ್ ಮಾಡೋಕೆ ಹೊರಟಿರುವುದು 'ಏ ರಾಮ್' ಚಿತ್ರದ ಮೂಲಕ.

ನೀವು ಓದಿದ್ದು ಅಕ್ಷರಶಃ ನಿಜ. ಸಿನಿಮಾದ ಹೆಸರು 'ಹೇ..ರಾಮ್' ಅಲ್ಲ, 'ಏ ರಾಮ್'. ಶೀರ್ಷಿಕೆ ಸೂಚಿಸುವಂತೆ ಇದು ಅಪ್ಪಟ ಹಿಂದುವಾದಿ ಚಿತ್ರ. ವಿವಾದಾತ್ಮಕ ಅಂಶ ಅಂದ್ರೆ 'ಏ ರಾಮ್' ಹಿಂದು-ಮುಸ್ಲಿಂ ನಡುವಿನ ಸೆನ್ಸಿಟೀವ್ ಕಥೆ.

In pic : Srinagar Kitty starrer 'Eh Ram' to provoke Hindu-Muslim sentiments

ಈಗಾಗಲೇ ತಾವರೆಕೆರೆ ಭೂತ ಬಂಗಲೆ ಬಳಿ ನಡೆದಿರುವ ಚಿತ್ರದ ಪ್ರೊಮೋ ಶೂಟ್ ನಲ್ಲಿ ಹಿಂದುವಾದಿ ರಾಮ್ ಆಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ರೆ, ಮುಸ್ಲಿಂ ಪಾತ್ರಧಾರಿ ರಹೀಮ್ ಆಗಿ ಯತಿರಾಜ್ ಮಿಂಚಿದ್ದಾರೆ. [ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಬೇಸರಕ್ಕೆ ಕಾರಣವೇನು?]

ಇಬ್ಬರ ಮಧ್ಯೆ ಕಾದಾಟ ನಡೆಯುವಂತೆ ಚಿತ್ರೀಕರಿಸಲಾಗಿರುವ ಪ್ರೊಮೋ ಶಾಟ್ಸ್ ಮತ್ತು ಸ್ಟಿಲ್ಸ್ ವಿವಾದಕ್ಕೆ ನಾಂದಿ ಹಾಡುವ ಎಲ್ಲಾ ಸೂಚನೆ ನೀಡಿದೆ. 'ಏ ರಾಮ್' ಚಿತ್ರತಂಡದಿಂದ ಬಿಡುಗಡೆ ಆಗಿರುವ ಫೋಟೋಗಳಲ್ಲಿ ಕಿಟ್ಟಿ ಮತ್ತು ಯತಿರಾಜ್ ನಡುವೆ ಅಸಮಾಧಾನ ಭುಗಿಲೆದ್ದಿರುವುದು ಸ್ಪಷ್ಟ.

ಇನ್ನೂ ನಾಯಕಿಯಾಗಿ 'ಬೆತ್ತನಗೆರೆ' ಚಿತ್ರದ ಹೀರೋಯಿನ್ ನಯನಾ ಸೆಲೆಕ್ಟ್ ಆಗಿದ್ದಾರೆ. ಆಕೆ ಕೂಡ ಮುಸ್ಲಿಂ ಯುವತಿಯಾಗಿ ಅಭಿನಯಿಸಲಿದ್ದಾರೆ. ಸಮಾಜದ ಸೆನ್ಸಿಟಿವ್ ವಿಷಯಗಳನ್ನಿಟ್ಟುಕೊಂಡು ಮಹೇಶ್ 'ಏ ರಾಮ್' ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾದಲ್ಲಿನ ಸೆನ್ಸಿಟಿವ್ ವಿಷಯಗಳು ಸಮಾಜದ ಸೆಂಟಿಮೆಂಟ್ ಗೆ ಧಕ್ಕೆ ಮಾಡದಿರಲಿ ಅನ್ನೋದು ಸಿನಿ ಪ್ರೇಮಿಗಳ ಬಯಕೆ. ಆದ್ರೆ, ಶೀರ್ಷಿಕೆ ಮತ್ತು ಪ್ರೊಮೋ ಶೂಟ್ ನಲ್ಲೇ 'ಏ ರಾಮ್' ನೀಡಿರುವ ಝಲಕ್ ಗೆ ಇಡೀ ಗಾಂಧಿನಗರ ಬಾಯಿ ಮೇಲೆ ಬೆರಳಿಡುವಂತೆ ಮಾಡಿದೆ.

English summary
Kannada Actor Srinagar Kitty starrer 'Eh Ram' promo shoot was held near Tavarekere Bhoot Bunglow recently. The stills of the movie seems to provoke the sentiments of Hindu-Muslim, as the movie is based on Hindu-Muslim love story. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada