»   » ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?

ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?

Posted By: ಹರಾ
Subscribe to Filmibeat Kannada

2015, ಹೊಸ ವರ್ಷವನ್ನ ನಟಿ ರಾಧಿಕಾ ಪಂಡಿತ್ 'ಗೋವಾ'ದಲ್ಲಿ ಸೆಲೆಬ್ರೇಟ್ ಮಾಡುವ ಮೂಲಕ ಬರಮಾಡಿಕೊಳ್ಳುತ್ತೀನಿ ಅಂದಿದ್ರು. ಈ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ.

ಅದ್ರಲ್ಲಿ ಅಂತ ವಿಶೇಷತೆ ಏನೂ ಇರ್ಲಿಲ್ಲ. ಯಾಕಂದ್ರೆ, ಪ್ರತಿ ವರ್ಷ ನಟಿ ರಾಧಿಕಾ ಪಂಡಿತ್ ಗೋವಾದಲ್ಲೇ ನ್ಯೂ ಇಯರ್ ಪಾರ್ಟಿ ಮಾಡುವುದು. ರಾಧಿಕಾ ಅಜ್ಜಿ ಮನೆ ಗೋವಾದಲ್ಲಿರುವುದರಿಂದ ವರ್ಷದ ಕೊನೆಯಲ್ಲಿ ಪಂಡಿತರ ಇಡೀ ಕುಟುಂಬ ಅಲ್ಲೇ ಸೇರುವುದು ವಾಡಿಕೆ.

ಆದ್ರೆ, ಇಲ್ಲಿವರೆಗೂ ಒಂದು ವರ್ಷವೂ ಸುದ್ದಿಯಾಗದ ರಾಧಿಕಾ ನ್ಯೂ ಇಯರ್ ಸೆಲೆಬ್ರೇಷನ್ ಈ ವರ್ಷ ಇಡೀ ಕರ್ನಾಟಕದ ಜನತೆಯ ಕಣ್ಣರಳಿಸಿದೆ. ಅದಕ್ಕೆ ಕಾರಣ, ಗೋವಾದಲ್ಲಿ ರಾಧಿಕಾ ಪಂಡಿತ್ ಜೊತೆ ರಾಕಿಂಗ್ ಸ್ಟಾರ್ ಯಶ್ 'ರೋಮ್ಯಾಂಟಿಕ್ ಮೂಡ್'ನಲ್ಲಿ ಕಾಣಿಸಿಕೊಂಡಿರುವುದು. [ಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿ]

ನ್ಯೂ ಇಯರ್ ಮಸ್ತಿಯಲ್ಲಿ ಪಂಡಿತರ ಕುಟುಂಬದಲ್ಲಿ ಒಬ್ಬರಾಗಿ ನಟ ಯಶ್, ರಾಧಿಕಾ ಜೊತೆ ಬಿಂದಾಸ್ ಆಗಿರುವ ಫೋಟೋಗಳು ಲೀಕ್ ಆಗಿವೆ. ಅದೆಲ್ಲವನ್ನ ನೋಡ್ಬೇಕು ಅಂದ್ರೆ ಈ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ರಾಧಿಕಾ-ಯಶ್ 'ರಿಯಲ್' ಕೆಮಿಸ್ಟ್ರಿ

ಗೋವಾದ ಕಡಲತೀರದಲ್ಲಿ..ಕೊರೆಯುವ ಚಳಿಯಲ್ಲಿ...ಕೊಂಚ ಬೆಚ್ಚಗಾಗುವುದಕ್ಕೆ ಬಾನ್ ಫೈಯರ್ ಹಾಕುವುದು ಸಾಮಾನ್ಯ. ಅದೇ ಬಾನ್ ಫೈಯರ್ ಸುತ್ತ ಇಡೀ ರಾಧಿಕಾ ಪಂಡಿತ್ ಕುಟುಂಬ ಮಸ್ತಿ ಮಾಡ್ತಿದ್ರೆ, ರಾಧಿಕಾ ಮಾತ್ರ ಯಶ್ ತೋಳಲ್ಲಿ ಬಂಧಿಯಾಗಿದ್ರು. ಇಬ್ಬರ ರಿಯಲ್ ಲೈಫ್ ಕೆಮಿಸ್ಟ್ರಿಯನ್ನ ಒಮ್ಮೆ ನೀವೇ ನಿಮ್ಮ ಕಣ್ಣಾರೆ ನೋಡಿಬಿಡಿ....

ಯಶ್ 'ಕೋಟೆ'ಯಲ್ಲಿ ರಾಧಿಕಾ ಕುಟುಂಬ

ಸೆಲೆಬ್ರೇಷನ್ ಜೊತೆಗೆ ಇಡೀ ಗೋವಾ ಸುತ್ತ, ಒಂದು ಸುತ್ತು ಹಾಕಿ ಬಂದಿರುವ ಪಂಡಿತರ ಕುಟುಂಬ, 'ನವ ಜೋಡಿ'ಗಳ ಜೊತೆ ಕಾಣಿಸಿಕೊಂಡಿರುವುದು ಹೀಗೆ. ರಾಧಿಕಾ ಪಂಡಿತ್ ತಂದೆ ಮತ್ತು ತಾಯಿಯನ್ನ ಚಿತ್ರದಲ್ಲಿ ಕಾಣಬಹುದು.

ಯಶ್ 'ಜೊತೆ ಜೊತೆಯಲಿ' ರಾಧಿಕಾ

ಸೆಲೆಬ್ರೇಷನ್ ಅಂದ್ಮೇಲೆ ಪಾರ್ಟಿ ಜೋರಾಗೇ ಇರಬೇಕು. ಅಂತಹ ಪಾರ್ಟಿ ಮಾಡುವ ಸಂದರ್ಭದಲ್ಲಿ ಕ್ಲಿಕ್ ಮಾಡಿರುವ ಫೋಟೋ ಇದು. ಈ ಎಲ್ಲಾ ಫೋಟೋಗಳಲ್ಲೂ ಯಶ್-ರಾಧಿಕಾ 'ಫೆವಿಕಾಲ್' ಜೋಡಿ ಅಂತ ನಾವು ಬಾಯಿ ಬಿಟ್ಟು ಹೇಳ್ಬೇಕಾ..?

'ಸೂರ್ಯ'ನನ್ನ ಚುಂಬಿಸಿದ 'ರಾಧಿಕಾ'

ಬಹುಕಾಲದ ನಂತ್ರ, ಬಣ್ಣ ಹಚ್ಚುವುದರಿಂದ ಕೊಂಚ ಬ್ರೇಕ್ ಪಡೆದಿರುವ ರಾಧಿಕಾ ಪಂಡಿತ್, ಗೋವಾದಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಕಡಲ ತೀರದಲ್ಲಿ ಸೂರ್ಯೋದಯವನ್ನ ನೋಡುವುದೆಂದರೆ ಇಷ್ಟ ಅಂತ ಹೇಳಿಕೊಳ್ಳುವ ರಾಧಿಕಾ, ಸೂರ್ಯನನ್ನೇ ಚುಂಬಿಸುತ್ತಿರುವ ಫೋಟೋ ಇದು.

'ಮಿಸ್ಟರ್ ಅಂಡ್ ಮಿಸಸ್' ಆಗುವುದು ಯಾವಾಗ..?

ಯಶ್ ಮತ್ತು ರಾಧಿಕಾ ಪಂಡಿತ್ ನಡುವೆ ಸಂಥಿಂಗ್ ಸಂಥಿಂಗ್ ಇದೆ ಅನ್ನುವ ಗುಸುಗುಸು ವರ್ಷಗಳಷ್ಟು ಹಳೆಯದ್ದು. ಆದ್ರೆ, ಎಂದೂ ಈ ಬಗ್ಗೆ ತುಟಿಕ್ ಪಿಟಿಕ್ ಅನ್ನದ ಈ ಜೋಡಿ, ಇದೀಗ ಕುಟುಂಬದೊಂದಿಗೆ ಬಿಂದಾಸ್ ಪಯಣ ಆರಂಭಿಸಿದೆ. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿರುವ ಕುಟುಂಬದವರು ವಾಲಗ ಊದಿಸಿವುದು ಅದ್ಯಾವಾಗಲೋ...?

ಇನ್ನೆರಡೇ ವರ್ಷದಲ್ಲಿ ಮದುವೆ ಗ್ಯಾರೆಂಟಿ..!

ಕಾಕತಾಳೀಯ ಅನ್ನುವಂತೆ ನಿನ್ನೆಯಷ್ಟೇ (ಜನವರಿ 8) ಹುಟ್ಟುಹಬ್ಬವನ್ನ ಆಚರಿಸಿಕೊಂಡಿರುವ ಯಶ್, ಇನ್ನೆರಡು ವರ್ಷದಲ್ಲಿ ಮದುವೆಯಾಗುತ್ತೀನಿ ಅಂತ ಬಾಯಿಬಿಟ್ಟಿದ್ದಾರೆ. ಆದ್ರೆ, ರಾಧಿಕಾ ಬಗ್ಗೆ ಉಸಿರು ಬಿಟ್ಟಿಲ್ಲ. ಬಹುಶಃ ಲಗ್ನಪತ್ರಿಕೆ ಪ್ರಿಂಟ್ ಆದ್ಮೇಲೆ ಹೇಳಬಹುದೇನೋ..!? ['ರಾಜಾಹುಲಿ' ಯಶ್ ಕೈಹಿಡಿಯಲಿರುವ ರಾಣಿ ಯಾರು?]

English summary
Sandalwood's Successful Couple Yash-Radhika Pandit snapped celebrating New Year in Goa. The Romantic pictures of the couple are leaked, take a look at the pictures here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada