For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ ದಾಂಪತ್ಯದಲ್ಲಿ ಮತ್ತೆ ಬಿರುಕು: ಎರಡನೇ ಪತ್ನಿಗೂ ವಿಚ್ಛೇದನ.?

  By ಫಿಲ್ಮಿಬೀಟ್ ಪ್ರತಿನಿಧಿ
  |

  'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂದೇ ಬಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುತ್ತಿರುವಾಗಲೇ, ಅಮೀರ್ ಖಾನ್ 'ಗಾಸಿಪ್' ಕಾಲಂನಲ್ಲೂ ಸದ್ದು ಮಾಡುತ್ತಿದ್ದಾರೆ.['ಥಗ್ಸ್ ಆಫ್ ಹಿಂದೂಸ್ತಾನ್' ನಾಯಕಿ ಯಾರು? ಉತ್ತರಿಸಿದ ಅಮೀರ್ ಖಾನ್]

  ಅಮೀರ್ ಖಾನ್ ದಾಂಪತ್ಯದಲ್ಲಿ ಮತ್ತೆ ಬಿರುಗಾಳಿ ಎದ್ದಿರುವ ಕುರಿತು ಬಾಲಿವುಡ್ ನಲ್ಲಿ ಗುಸು ಗುಸು ಆರಂಭವಾಗಿದೆ. ಎರಡನೇ ಪತ್ನಿ ಕಿರಣ್ ರಾವ್ ರವರಿಗೆ ವಿಚ್ಛೇದನ ನೀಡಿ, ಅಮೀರ್ ಖಾನ್ ಮೂರನೇ ಮದುವೆ ಆಗಲಿದ್ದಾರಂತೆ ಎಂಬ ಅಂತೆ-ಕಂತೆಗಳು ರೆಕ್ಕೆ-ಪುಕ್ಕ ಕಟ್ಟಿಕೊಂಡು ಹಾರಾಡತೊಡಗಿದೆ. ಮುಂದೆ ಓದಿ....

  ಅಮೀರ್ ಖಾನ್ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ 'ದಂಗಲ್' ಬೆಡಗಿ.?

  ಅಮೀರ್ ಖಾನ್ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ 'ದಂಗಲ್' ಬೆಡಗಿ.?

  ಅಮೀರ್ ಖಾನ್ ಸಂಸಾರ ಸಾಗರದಲ್ಲಿ ಸುನಾಮಿ ಏಳಲು 'ದಂಗಲ್' ಬೆಡಗಿ ಫಾತಿಮಾ ಸನಾ ಶೇಕ್ ಕಾರಣವಂತೆ. 'ದಂಗಲ್' ಚಿತ್ರದಲ್ಲಿ ಅಮೀರ್ ಜೊತೆ ನಟಿಸಿದ ಫಾತಿಮಾ ಸನಾ ಶೇಕ್, ಸಿನಿಮಾ ಮುಗಿದ ಬಳಿಕವೂ ಅಮೀರ್ ಜೊತೆ ಕ್ಲೋಸ್ ಆಗಿದ್ದಾರಂತೆ. ಅಮೀರ್ ಮತ್ತು ಫಾತಿಮಾ ರಿಲೇಷನ್ಶಿಪ್ 'ಎಕ್ಸ್ ಟ್ರಾ ಸ್ಪೆಷಲ್' ಎಂದು ಗಾಸಿಪ್ ಪಂಡಿತರು ಬಣ್ಣಿಸುತ್ತಿದ್ದಾರೆ.

  ಅಮೀರ್-ಕಿರಣ್ ಮಧ್ಯೆ 'ಆಲ್ ಈಸ್ ನಾಟ್ ವೆಲ್'.?

  ಅಮೀರ್-ಕಿರಣ್ ಮಧ್ಯೆ 'ಆಲ್ ಈಸ್ ನಾಟ್ ವೆಲ್'.?

  ಫಾತಿಮಾ ವಿಚಾರದಿಂದಾಗಿ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ಮಧ್ಯೆ ಮನಸ್ತಾಪ ಮೂಡಿದ್ಯಂತೆ. ಎರಡನೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ನೀಡಿ, ಫಾತಿಮಾ ಸನಾ ಶೇಕ್ ರವರನ್ನ ವರಿಸುವ ಮಟ್ಟಕ್ಕೆ ಬಂದಿದ್ದಾರಂತೆ ನಟ ಅಮೀರ್ ಖಾನ್.[ಅಯ್ಯೋ ಅಮೀರ್ ಖಾನ್ ಬಗ್ಗೆ ಹಬ್ಬಿದ್ದ ಸುದ್ದಿ ಸುಳ್ಳಾ?]

  ಅಮೀರ್ ಖಾನ್ ಮುಂದಿನ ಚಿತ್ರಕ್ಕೆ ಫಾತಿಮಾ ನಾಯಕಿ

  ಅಮೀರ್ ಖಾನ್ ಮುಂದಿನ ಚಿತ್ರಕ್ಕೆ ಫಾತಿಮಾ ನಾಯಕಿ

  ಇದಿಷ್ಟೇ ಅಲ್ಲದೇ, ತಮ್ಮ ಮುಂದಿನ ಚಿತ್ರ 'ಥಗ್ಸ್ ಆಫ್ ಹಿಂದುಸ್ತಾನ್'ನಲ್ಲಿನ ಪ್ರಮುಖ ಪಾತ್ರಕ್ಕೂ ಫಾತಿಮಾ ಸನಾ ಶೇಕ್ ಹೆಸರನ್ನ ಸೂಚಿಸಿದ್ದು ಸ್ವತಃ ನಟ ಅಮೀರ್ ಖಾನ್ ಅಂತೆ.

  ಹನ್ನೊಂದು ವರ್ಷದ ದಾಂಪತ್ಯ ಕೊನೆ.?

  ಹನ್ನೊಂದು ವರ್ಷದ ದಾಂಪತ್ಯ ಕೊನೆ.?

  2005 ಡಿಸೆಂಬರ್ 28 ರಂದು ಕಿರಣ್ ರಾವ್ ರವರನ್ನ ಅಮೀರ್ ಖಾನ್ ಮದುವೆ ಆದರು. ಬಾಡಿಗೆ ತಾಯಿಯಿಂದ ಈ ದಂಪತಿಗೆ ಆಜಾದ್ ರಾವ್ ಖಾನ್ ಎಂಬ ಪುತ್ರನಿದ್ದಾನೆ. ಕಿರಣ್ ರಾವ್ ರವರಿಂದ ಪ್ರೇರಿತರಾಗಿ ಮಾಂಸಾಹಾರ ಸೇವನೆಗೆ ಗುಡ್ ಬೈ ಹೇಳಿದ್ದ ಅಮೀರ್, ಈಗ ಅದೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ.

  ಮುರಿದು ಬಿದ್ದ ಮೊದಲನೇ ಮದುವೆ

  ಮುರಿದು ಬಿದ್ದ ಮೊದಲನೇ ಮದುವೆ

  1986, ಏಪ್ರಿಲ್ 18 ರಂದು ರೀನಾ ರವರನ್ನ ಅಮೀರ್ ಖಾನ್ ಮದುವೆ ಆದರು. ಆದ್ರೆ, ಕಾರಣಾಂತರಗಳಿಂದ 2002 ರಲ್ಲಿ ರೀನಾಗೆ ಅಮೀರ್ ಖಾನ್ ವಿಚ್ಛೇದನ ನೀಡಿದರು. ಬಳಿಕ 2005 ರಲ್ಲಿ ಎರಡನೇ ಮದುವೆ ಆದ ಅಮೀರ್ ಖಾನ್ ದಾಂಪತ್ಯ ಈಗ ಮತ್ತೆ ಸುದ್ದಿಯಲ್ಲಿದೆ.

  ಇದೆಲ್ಲ ಸತ್ಯವೋ.? ಸುಳ್ಳೋ.?

  ಇದೆಲ್ಲ ಸತ್ಯವೋ.? ಸುಳ್ಳೋ.?

  ಅಮೀರ್ ಖಾನ್ ಸಂಸಾರದ ಬಗ್ಗೆ ತಲೆಗೊಂದು ಮಾತು ಕೇಳಿಬರುತ್ತಿದೆ. ಆದ್ರೆ, ಯಾವುದು ಸತ್ಯ ಯಾವುದು ಸುಳ್ಳು ಎಂದು ಸ್ವತಃ ಅಮೀರ್ ಖಾನ್ ರವರೇ ಬಾಯ್ಬಿಟ್ಟು ಹೇಳುವವರೆಗೂ ಗಾಸಿಪ್ ಪಂಡಿತರ ಬಾಯಿ ಸುಮ್ನಿರೋಲ್ಲ.

  English summary
  Is Aamir Khan all set to divorce wife Kiran Rao and marry for the third time.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X