For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದರ್ಶನ್ ನಟನೆ: ಸಂಭಾವನೆಯಾಗಿ ಸಿಕ್ತು ದುಬಾರಿ ವಾಚ್!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಹಾಗೂ 'D56' ಸಿನಿಮಾಗಳಲ್ಲಿ ನಟಿಸ್ತಿರೋದು ಗೊತ್ತೇಯಿದೆ. ಆದರೆ ಸದ್ದಿಲ್ಲದೇ ಮತ್ತೊಂದು ಸಿನಿಮಾದಲ್ಲಿ ದರ್ಶನ್ ಬಣ್ಣ ಹಚ್ಚಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಅದು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ವಿಶೇಷ. ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿರುವ ದರ್ಶನ್ ಸಂಭಾವನೆಯಾಗಿ ದುಬಾರಿ ಉಡುಗೊರೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

  ನಟ ದರ್ಶನ್ ಸಿನಿಮಾಗಳಿಗಿರೋ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಅವರು ಸಿಲ್ವರ್‌ ಸ್ಕ್ರೀನ್‌ ಮೇಲೆ ಬಂದರೆ ಅಭಿಮಾನಿಗಳು ಥ್ರಿಲ್ಲಾಗುತ್ತಾರೆ. 'ಇನ್ಸ್‌ಪೆಕ್ಟರ್ ವಿಕ್ರಂ' ಸೇರಿದಂತೆ ಈಗಾಗಲೇ ಕೆಲ ಸಿನಿಮಾಗಳಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಬಿ. ಸಿ ಪಾಟೀಲ್ ನಿರ್ಮಿಸಿ ನಟಿಸುತ್ತಿರುವ 'ಗರಡಿ' ಚಿತ್ರದಲ್ಲೂ ಚಾಲೆಂಜಿಂಗ್ ಸ್ಟಾರ್ ವಿಶೇಷವಾದ ಪಾತ್ರದಲ್ಲಿ ನಟಿಸ್ತಿದ್ದಾರೆ. ಆದರೆ ಸದ್ದಿಲ್ಲದೇ ಮತ್ತೊಂದು ಚಿತ್ರದಲ್ಲಿ ದರ್ಶನ್ ನಟಿಸಿದ್ದು, ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

  'ಐ ಡೋಂಟ್ ಲೈಕ್ ವೈಲೆನ್ಸ್, ಹಂಗಂತ ಡೋಂಟ್ ಟೆಸ್ಟ್ ಮೈ ಪೇಷನ್ಸ್'; ಝೈದ್ ಖಾನ್ 'ಬನಾರಸ್' ಟ್ರೈಲರ್ ರಿಲೀಸ್'ಐ ಡೋಂಟ್ ಲೈಕ್ ವೈಲೆನ್ಸ್, ಹಂಗಂತ ಡೋಂಟ್ ಟೆಸ್ಟ್ ಮೈ ಪೇಷನ್ಸ್'; ಝೈದ್ ಖಾನ್ 'ಬನಾರಸ್' ಟ್ರೈಲರ್ ರಿಲೀಸ್

  ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಪ್ರಚಾರಕ್ಕೆ ಕೈ ಜೋಡಿಸಿದರೂ ಆ ಚಿತ್ರಕ್ಕೆ ಆನೆ ಬಲ ಬಂದಂತಾಗುತ್ತದೆ. ಅಂತಾದ್ರಲ್ಲಿ ಬಾಕ್ಸಾಫೀಸ್ ಸುಲ್ತಾನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಅಂದ್ಮೇಲೆ ಕೇಳ್ಬೇಕಾ?. ಇನ್ನು ಈ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಭರ್ಜರಿ ಸಂಭಾವನೆಯನ್ನು ಪಡೆದುಕೊಂಡಿದ್ದಾರಂತೆ.

  'ಬನಾರಸ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್

  'ಬನಾರಸ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್

  ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ನಟನೆಯ ಚೊಚ್ಚಲ ಸಿನಿಮಾ 'ಬನಾರಸ್'. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರದ ಟ್ರೈಲರ್ ಬಹಳ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಟ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದ್ದು, ಈ ವಿಚಾರವನ್ನು ಚಿತ್ರತಂಡ ಇನ್ನು ಗೌಪ್ಯವಾಗಿ ಇಟ್ಟಿದೆ. ಜಮೀರ್ ಅಹಮದ್ ಹಾಗೂ ದರ್ಶನ್ ಬಹಳ ಆತ್ಮೀಯರು. ಇದೇ ಸ್ನೇಹಕ್ಕಾಗಿ ದರ್ಶನ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗುತ್ತಿದೆ.

  'ಕ್ರಾಂತಿ' ಸಿನಿಮಾದ ಪೋಲೆಂಡ್ ಮೇಕಿಂಗ್ ವಿಡಿಯೋ ಲೀಕ್: ದರ್ಶನ್ ಸ್ಟೈಲ್‌ಗೆ ಫ್ಯಾನ್ಸ್ ಫಿದಾ!'ಕ್ರಾಂತಿ' ಸಿನಿಮಾದ ಪೋಲೆಂಡ್ ಮೇಕಿಂಗ್ ವಿಡಿಯೋ ಲೀಕ್: ದರ್ಶನ್ ಸ್ಟೈಲ್‌ಗೆ ಫ್ಯಾನ್ಸ್ ಫಿದಾ!

  ದರ್ಶನ್‌ಗೆ ಸಂಭಾವನೆಯಾಗಿ ದುಬಾರಿ ವಾಚ್

  ದರ್ಶನ್‌ಗೆ ಸಂಭಾವನೆಯಾಗಿ ದುಬಾರಿ ವಾಚ್

  ನಟ ದರ್ಶನ್ ಸರಳತೆ ಮತ್ತು ಸ್ನೇಹದ ಬಗ್ಗೆ ಹೊಸದಾಗಿ ಬಿಡಿಸಿ ಹೇಳುವುದು ಬೇಕಾಗಿಲ್ಲ. ಸ್ನೇಹಿತರ ನಡುವೆ ಹಣದ ವ್ಯವಹಾರ ಇರಬಾರದು ಎನ್ನುವುದು ದರ್ಶನ್ ನಿಯಮ. 'ಅರಸು' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದಾಗಲೂ ಸಂಭಾವನೆ ಬೇಡ ಎಂದೇ ಹೇಳಿದ್ದರಂತೆ. ಇದೀಗ 'ಬನಾರಸ್' ಚಿತ್ರದಲ್ಲಿ ನಟಿಸಿದ್ದಕ್ಕೂ ಸಂಭಾವನೆ ತಿರಸ್ಕರಿಸಿದ್ದಾರೆ. ಹಾಗಾಗಿ ನಿರ್ಮಾಪಕರು ದರ್ಶನ್‌ಗೆ ದುಬಾರಿ ವಾಚ್‌ ಅನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಗುಲ್ಲಾಗಿದೆ.

  5 ಭಾಷೆಗಳಲ್ಲಿ 'ಬನಾರಸ್' ಟ್ರೈಲರ್ ರಿಲೀಸ್

  5 ಭಾಷೆಗಳಲ್ಲಿ 'ಬನಾರಸ್' ಟ್ರೈಲರ್ ರಿಲೀಸ್

  ನಗರದ ಒರಾಯನ್ ಮಾಲ್‌ನಲ್ಲಿ 'ಬನಾರಸ್' ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್ ಆಯೋಜಿಸಲಾಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಸೇರಿದಂತೆ ಸಾಕಷ್ಟು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 5 ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಟೈಂ ಟ್ರಾವೆಲ್ ಕಥೆ ಹೇಳಲಾಗ್ತಿದೆ. ಝೈದ್ ಖಾನ್ ಜೋಡಿಯಾಗಿ ಸೋನಲ್ ಮಾಂಥಾರಿಯೋ ಬಣ್ಣ ಹಚ್ಚಿದ್ದಾರೆ. ವಾರಣಾಸಿ ಸುತ್ತಾಮುತ್ತಾ ಬಹುತೇಕ ಕಥೆ ನಡೆಯಲಿದೆ. ಈಗಾಗಲೇ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

  ನವೆಂಬರ್ 4ಕ್ಕೆ 'ಬನಾರಸ್' ರಿಲೀಸ್

  ನವೆಂಬರ್ 4ಕ್ಕೆ 'ಬನಾರಸ್' ರಿಲೀಸ್

  ಬಹಳ ಕುತೂಹಲಭರಿತವಾಗಿ ಈ ರೊಮ್ಯಾಂಟಿಕ್ ಚಿತ್ರವನ್ನು ಜಯತೀರ್ಥ ಕಟ್ಟಿಕೊಟ್ಟಿದ್ದಾರೆ. ಚಾಲೆಂಜಿಂಗ್ ದರ್ಶನ್ ಚಿತ್ರದ ಸ್ಪೆಷಲ್ ರೋಲ್‌ನಲ್ಲಿ ನಟಿಸಿರುವುದರಿಂದ ಕುತೂಹಲ ಹೆಚ್ಚಾಗಿದೆ. ನವೆಂಬರ್ 4ರಂದು ವಿಶ್ವದಾದ್ಯಂತ 'ಬನಾರಸ್' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

  English summary
  Is challenging star darshan a part of Zaid Khan Starrer Banaras movie. Producers Gifts Costly Watch To Actor Darshan.
  Tuesday, September 27, 2022, 17:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X