»   » 'ವಿಷ್ಣು' ದಾದಾ ಮತ್ತು 'ಜಗ್ಗು ದಾದಾ' ದರ್ಶನ್ ಕುರಿತು ಈಗಷ್ಟೇ ಬಂದ ಬಿಗ್ ನ್ಯೂಸ್

'ವಿಷ್ಣು' ದಾದಾ ಮತ್ತು 'ಜಗ್ಗು ದಾದಾ' ದರ್ಶನ್ ಕುರಿತು ಈಗಷ್ಟೇ ಬಂದ ಬಿಗ್ ನ್ಯೂಸ್

Posted By:
Subscribe to Filmibeat Kannada

ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ ಅಂತ ಹೇಳಲಾಗಿರುವ 'ನಾಗರಹಾವು' ಚಿತ್ರ ಹಲವು ವಿಶೇಷತೆಗಳಿಂದ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸುತ್ತಿದೆ.

ಬಡ ರೋಗಿಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ 'ನಾಗರಹಾವು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ಅರ್ಥಪೂರ್ಣವಾಗಿ ಜರುಗಿತ್ತು.

ನಿರ್ಮಾಪಕ ಸಾಜಿದ್ ಖರೇಶಿ ಪ್ಲಾನ್ ಮಾಡಿರುವ ಪ್ರಕಾರ, ಗ್ರಾಫಿಕ್ಸ್ ಕೆಲಸಗಳು ಬಹು ಬೇಗ ಕಂಪ್ಲೀಟ್ ಆದರೆ, ವಿಷ್ಣುದಾದಾ ರವರ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ ನಲ್ಲಿ 'ನಾಗರಹಾವು' ತೆರೆಮೇಲೆ ಬುಸುಗುಡುವುದು ಖಂಡಿತ.

ಈಗ ವಿಷಯ ಅದಲ್ಲ. 'ನಾಗರಹಾವು' ಅಡ್ಡದಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ. ಅದನ್ನ ಕೇಳಿದರೆ, ವಿಷ್ಣುದಾದಾ ಮತ್ತು 'ಜಗ್ಗುದಾದಾ' ದರ್ಶನ್ ಫ್ಯಾನ್ಸ್ ಕುಣಿದು ಕುಪ್ಪಳಿಸುವುದು ಗ್ಯಾರೆಂಟಿ. ಮುಂದೆ ಓದಿ....

ದರ್ಶನ್ ಗೂ 'ನಾಗರಹಾವು' ಚಿತ್ರಕ್ಕೂ ಏನು ಲಿಂಕು?

'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ (ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ), ರಮ್ಯಾ, ದಿಗಂತ್ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಹೀಗಿರುವಾಗ ಈ ಚಿತ್ರಕ್ಕೂ ದರ್ಶನ್ ಗೂ ಏನು ಸಂಬಂಧ ಅಂತ ಯೋಚನೆ ಮಾಡ್ತಿದ್ದೀರಾ.? ನಿಮ್ಮ ಡೌಟ್ ಕ್ಲಿಯರ್ ಆಗ್ಬೇಕು ಅಂದ್ರೆ ಮುಂದಿನ ಫೋಟೋ ಸ್ಲೈಡ್ ನೋಡಿ....

'ನಾಗರಹಾವು' ಚಿತ್ರದಲ್ಲಿ ದರ್ಶನ್.!

ಸ್ಯಾಂಡಲ್ ವುಡ್ ಅಂಗಳದಲ್ಲಿ ಈಗಷ್ಟೇ ಬ್ರೇಕ್ ಆಗಿರುವ ಬಿಗ್ ಬ್ರೇಕಿಂಗ್ ನ್ಯೂಸ್ ಅಂದ್ರೆ ಇದೇ. 'ನಾಗರಹಾವು' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್, 'ಜಗ್ಗು ದಾದಾ' ದರ್ಶನ್ ಕೂಡ ಇದ್ದಾರಂತೆ.

ದರ್ಶನ್ ಪಾತ್ರ ಏನು.?

ಬಹು ನಿರೀಕ್ಷಿತ 'ನಾಗರಹಾವು' ಚಿತ್ರದ ಸ್ಪೆಷಲ್ ಸಾಂಗ್ ಒಂದರಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರಂತೆ.

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

'ವಿಷ್ಣು ದಾದಾ'ನ ಚಿತ್ರದಲ್ಲಿ 'ಜಗ್ಗು ದಾದಾ' ಎಂಬ ಸಂದೇಶ ಸಾರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.

ಇದು ಗಾಸಿಪ್ಪೋ.? ನಿಜವೋ.?

ಅಸಲಿಗೆ ಇದು ಗಾಸಿಪ್ಪೋ.? ನಿಜವೋ.? ಇನ್ನೂ ಕನ್ಫರ್ಮ್ ಆಗಿಲ್ಲ.

ನಿಜವಾಗಿದ್ದರೆ ಖುಷಿ ವಿಚಾರ.!

ಒಂದ್ವೇಳೆ ಈ ಸುದ್ದಿ ನಿಜವೇ ಆಗಿದ್ದರೆ, ದರ್ಶನ್ ಮತ್ತು ವಿಷ್ಣುವರ್ಧನ್ ಫ್ಯಾನ್ಸ್ ಸಂಭ್ರಮಾಚರಣೆ ಮಾಡೋದ್ರಲ್ಲಿ ಅನುಮಾನ ಇಲ್ಲ.

'ನಾಗರಹಾವು' ವಿಷ್ಣುವರ್ಧನ್

'ನಾಗರಹಾವು' ಚಿತ್ರದಲ್ಲಿ ಹೆಡ್ ರೀಪ್ಲೇಸ್ಮೆಂಟ್ ತಂತ್ರಜ್ಞಾನದ ಮುಖಾಂತರ ಸಾಹಸಸಿಂಹ ವಿಷ್ಣುವರ್ಧನ್ ರವರು ತೆರೆಮೇಲೆ ಕಾಣಿಸಿಕೊಳ್ಳುವುದು ಹತ್ತು ನಿಮಿಷಗಳು ಮಾತ್ರ.[ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]

ನಾಗಿಣಿ ರಮ್ಯಾ

ಇನ್ನು ಇದೇ ಚಿತ್ರದಲ್ಲಿ ನಟಿ ರಮ್ಯಾ 'ನಾಗಿಣಿ' ಆಗಿ ಮಿಂಚಲಿದ್ದಾರೆ.[ಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..]

ಫ್ಯಾಂಟಸಿ ಸಿನಿಮಾ

ತೆಲುಗಿನಲ್ಲಿ 'ಅರಂಧತಿ' ಸೇರಿದಂತೆ ಅನೇಕ ಫ್ಯಾಂಟಸಿ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಖ್ಯಾತಿ ಗಳಿಸಿರುವ ನಿರ್ದೇಶಕ ಕೋಡಿ ರಾಮಕೃಷ್ಣ 'ನಾಗರಹಾವು' ಚಿತ್ರದ ನಿರ್ದೇಶಕ.

ನಿಮ್ಮ ಅಭಿಪ್ರಾಯ ತಿಳಿಸಿ....

'ನಾಗರಹಾವು' ಚಿತ್ರದ ಆಡಿಯೋ ಆಲ್ಬಂ ಬಿಡುಗಡೆ ಆಗಿದೆ. ಗುರುಕಿರಣ್ ಸಂಗೀತ ನಿರ್ದೇಶನದ 'ನಾಗರಹಾವು' ಹಾಡುಗಳು ಹೇಗಿವೆ ಎಂಬ ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
According to the Latest Buzz, Challenging Star Darshan will be seen in a special song in Dr.Vishnuvardhan's 201st movie 'Nagarahavu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada