»   » 'ಕತ್ತಿ' ರೀಮೇಕ್ ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ?

'ಕತ್ತಿ' ರೀಮೇಕ್ ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ?

Posted By:
Subscribe to Filmibeat Kannada

ಮೆಗಾ ಸ್ಟಾರ್ ಚಿರಂಜೀವಿ ಅವರ 150ನೇ ಚಿತ್ರದ ಬಗ್ಗೆ ತೆಲುಗು ಸಿನಿ ಪ್ರಿಯರಲ್ಲಿ ಕುತೂಹಲ ಕೊಂಚ ಜಾಸ್ತಿ ಇದೆ. 'ಮಗಧೀರ' ಚಿತ್ರದಲ್ಲಿನ ಸ್ಪೆಷಲ್ ಅಪಿಯರೆನ್ಸ್ ಬಳಿಕ ಬೆಳ್ಳಿತೆರೆಯಿಂದ ದೂರ ಉಳಿದಿದ್ದ ಚಿರಂಜೀವಿ, ತಮ್ಮ 150ನೇ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಚ್ಯೂಸಿಯಾಗಿದ್ದಾರೆ.

ಇದೀಗ ಬಂದಿರುವ ಮಾಹಿತಿ ಪ್ರಕಾರ, ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 150ನೇ ಚಿತ್ರ ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾ 'ಕತ್ತಿ' ರೀಮೇಕ್ ಆಗಿರಲಿದ್ಯಂತೆ. ಚಿರಂಜೀವಿ ಕ್ಯಾಂಪಿನ ಖ್ಯಾತ ನಿರ್ದೇಶಕ ವಿ.ವಿ.ವಿನಾಯಕ್ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ. [ಚಿರು ಅಭಿಮಾನಿಗಳಿಗೆ ಶಾಕ್ ನೀಡಿದ ನಿರ್ದೇಶಕ ಪುರಿ]

chiranjeevi

ಕಳೆದ ವರ್ಷವಷ್ಟೆ ತೆರೆಕಂಡಿದ್ದ ಎ.ಆರ್.ಮುರುಗದಾಸ್ ನಿರ್ದೇಶನದ, ವಿಜಯ್ ಅಭಿನಯದ 'ಕತ್ತಿ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ರೈತರ ಸಂಕಷ್ಟ, ನೀರಿನ ಅಭಾವ, ಕಾರ್ಪೊರೇಟ್ ಸಂಸ್ಥೆಗಳ ದಬ್ಬಾಳಿಕೆ ಕುರಿತು ರೆಡಿಯಾಗಿದ್ದ 'ಕತ್ತಿ' ಸಾಮಾಜಿಕ ಸಂದೇಶ ಸಾರುವ ಸಿನಿಮಾ.

ಚಿರಂಜೀವಿ ಕೂಡ 'ಜನನಾಯಕ'ನ ಪಾತ್ರಗಳಲ್ಲಿ ಹೆಸರುವಾಸಿ. ಹೀಗಾಗಿ 'ಕತ್ತಿ' ರೀಮೇಕ್ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರಂತೆ. ಮೂಲಗಳ ಪ್ರಕಾರ ಈಗಾಗಲೇ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ಸಿಕ್ಕಿದೆ. ['ದೇವರನಾಡ'ಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಬೀಡು ಬಿಟ್ಟಿರುವುದೇಕೆ?]

ಈ ಹಿಂದೆ, ಚಿರಂಜೀವಿ ಅವರ 150ನೇ ಚಿತ್ರಕ್ಕೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳ್ತಾರೆ ಅಂತ ಸುದ್ದಿಯಾಗಿತ್ತು. ಆದ್ರೀಗ, ಅದಕ್ಕೆ ಬ್ರೇಕ್ ಬಿದ್ದಿದೆ. ಸದ್ಯದಲ್ಲೇ 'ಕತ್ತಿ' ಚಿತ್ರದ ತೆಲುಗು ವರ್ಷನ್ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ.

English summary
Chiranjeevi has finally settled on Tamil super hit, 'Kaththi' remake for his 150th film and has offered the direction responsibilities to V V Vinayak.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada