»   » ರೀಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ 'ರಿಯಲ್' ಲೈಫ್ ಸ್ಟೋರಿ.?

ರೀಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ 'ರಿಯಲ್' ಲೈಫ್ ಸ್ಟೋರಿ.?

Posted By:
Subscribe to Filmibeat Kannada

ನಟಿ ರಾಧಿಕಾ ಕುಮಾರಸ್ವಾಮಿ ಜೀವನ ಚರಿತ್ರೆ ಸಿನಿಮಾ ಆಗ್ತಿದ್ಯಾ? ಹೀಗೊಂದು ಗಾಸಿಪ್ ಈಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಮದುವೆ-ಮಗು ನಂತರ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ಮೇಲೆ ನಟಿ ರಾಧಿಕಾ ಕುಮಾರಸ್ವಾಮಿ ಗಾಂಧಿನಗರದಲ್ಲಿ ಸಖತ್ ಸುದ್ದಿ ಮಾಡುತ್ತಿದ್ದಾರೆ.

Is 'Namagaagi' based on Radhika Kumaraswamy's real life story?

'ಸ್ವೀಟಿ' ಮತ್ತು 'ರುದ್ರತಾಂಡವ' ಚಿತ್ರಗಳ ಮೂಲಕ ಮತ್ತೆ ಹರೆಯದ ಹುಡುಗರ ಹಾಟ್ ಫೇವರಿಟ್ ಆದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ 'ನಮಗಾಗಿ' ಚಿತ್ರದಲ್ಲಿ ನಟಿಸುತ್ತಿರುವ ಚಿತ್ರದ ಬಗ್ಗೆ ನಾವೇ ನಿಮಗೆ ಹೇಳಿದ್ವಿ. [ನಟಿ ರಾಧಿಕಾ ಕೆಣಕಿದ್ದಕ್ಕೆ ವಿಜಯ್ ರಾಘವೇಂದ್ರ ಗರಂ]

ಇವಾಗ ಗುಲ್ಲೆದ್ದಿರುವ ಪ್ರಕಾರ, 'ನಮಗಾಗಿ' ಚಿತ್ರದ ಕಥೆ ನಟಿ ರಾಧಿಕಾ ಕುಮಾರಸ್ವಾಮಿ ರವರ ಜೀವನಕ್ಕೆ ತುಂಬಾ ಹತ್ತಿರವಾಗಿದ್ಯಂತೆ. ಹಾಗಂತ ಇಡೀ ಸಿನಿಮಾ ರಾಧಿಕಾ ರವರ ರಿಯಲ್ ಲೈಫ್ ಸ್ಟೋರಿ ಅಲ್ಲ. ಮದುವೆಯಾಗಿ ದೂರವಾಗಿರುವ ಸತಿ-ಪತಿಗಳ ಸ್ಟೋರಿ 'ನಮಗಾಗಿ'. ಅಹಂ, ಕೋಪ, ಸಿಟ್ಟಿನಿಂದ ದೂರವಾದ ದಂಪತಿ ಕೊನೆಗೆ ಒಂದಾಗುವ ಕಥೆ 'ನಮಗಾಗಿ'.

Is 'Namagaagi' based on Radhika Kumaraswamy's real life story?

'ನಮಗಾಗಿ' ಕಥೆ ಕೇಳಿದ ಕೂಡಲೆ ನಟಿ ರಾಧಿಕಾ ಕುಮಾರಸ್ವಾಮಿ ಕಣ್ಣಾಲಿಗಳು ಒದ್ದೆಯಾದವಂತೆ. ಅವರನ್ನ ಸಮಾಧಾನ ಮಾಡುವುದಕ್ಕೆ ನಿರ್ದೇಶಕ ರಘುರಾಮ್ ಹರಸಾಹಸ ಪಟ್ಟರಂತೆ. ಹೀಗಾಗಿ 'ನಮಗಾಗಿ' ಚಿತ್ರದ ಕೆಲ ಸನ್ನಿವೇಶಗಳು ರಾಧಿಕಾ ಕುಮಾರಸ್ವಾಮಿ ರವರ ನಿಜ ಜೀವನಕ್ಕೆ ಸಂಬಂಧಿಸಿದೆ ಅಂತಲೇ ಹೇಳಲಾಗುತ್ತಿದೆ. [ವಿಜಯ್ ರಾಘವೇಂದ್ರ ಸಂಸಾರದಲ್ಲಿ ಹುಳಿ ಹಿಂಡುವ ದುನಿಯಾ ರಶ್ಮಿ.!]

ಅಂದ್ಹಾಗೆ, ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಈ ಚಿತ್ರಕ್ಕೆ ಬಂಡವಾಳ ಹಾಕುವುದಕ್ಕೆ ರಾಧಿಕಾ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರಂತೆ. ರಾಧಿಕಾ ಕುಮಾರಸ್ವಾಮಿ ಜೊತೆ ವರ್ಷಗಳ ಗ್ಯಾಪ್ ನಂತರ ವಿಜಯ್ ರಾಘವೇಂದ್ರ 'ನಮಗಾಗಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

English summary
The closed sources from Gandhinagara have speculated that, Vijay Raghavendra and Radhika Kumarswamy starrer 'Namagaagi' is based on Radhika Kumaraswamy's personal life.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada