For Quick Alerts
  ALLOW NOTIFICATIONS  
  For Daily Alerts

  ಹೈದರಾಬಾದ್ ಹೋಟೆಲ್ ನಲ್ಲಿ ನಯನತಾರಾ ರಂಪ-ರಾಮಾಯಣ

  By Harshitha
  |

  ಎತ್ತರೆತ್ತರಕ್ಕೆ ಏರುವಾಗ ದುರಹಂಕಾರ, ಕೋಪ, ಪ್ರತಿಷ್ಠೆ, ಅಹಂ...ಇವೆಲ್ಲವನ್ನ ಮೂಟೆ ಕಟ್ಟಿ ಬಿಸಾಡಿದರೆ ಒಳಿತು. ಇಲ್ಲಾಂದ್ರೆ, ನಯನತಾರಾಗೆ ಎದುರಾಗಿರುವ ಪರಿಸ್ಥಿತಿ ಯಾರಿಗೆ ಬೇಕಾದರೂ ಬರಬಹುದು.!

  ಅಷ್ಟಕ್ಕೂ, ನಯನತಾರಾ ಮುಂಗೋಪಿ, ದುರಹಂಕಾರಿ ಅಂತ ಬೆಟ್ಟು ಮಾಡಿ ತೋರಿಸುತ್ತಿರುವವರು ಹೈದರಾಬಾದ್ ನ 5 ಸ್ಟಾರ್ ಹೋಟೆಲ್ ಮ್ಯಾನೇಜರ್ ಗಳು.! [ಗುಟ್ಟಾಗಿ ಬಿಯರ್ ಖರೀದಿಸಿ ಸಿಕ್ಕಿಬಿದ್ದ ನಯನತಾರಾ!]

  ದುಡ್ಡು ಇದೆ ಎನ್ನುವ ದುರಹಂಕಾರದಿಂದ ಸ್ಟಾರ್ ಹೋಟೆಲ್ ಗಳಲ್ಲಿ ನಯನತಾರಾ ದೊಡ್ಡ ಅವಾಂತರ ಸೃಷ್ಟಿಸಿದ್ದಾರೆ. ಮುಂದೆ ಓದಿ.....

  ಆಗಾಗ ಟೆಂಪರ್ ರೈಸ್ ಮಾಡಿಕೊಳ್ಳುವ ನಯನತಾರಾ.!

  ಆಗಾಗ ಟೆಂಪರ್ ರೈಸ್ ಮಾಡಿಕೊಳ್ಳುವ ನಯನತಾರಾ.!

  ನಯನತಾರಾ ತುಂಬಾ ಶಾರ್ಟ್ ಟೆಂಪರ್ಡ್ ಅಂತೆ. ಪಿತ್ತ ನೆತ್ತಿಗೇರಿದ್ರೆ, ನಯನತಾರಾ ಏನು ಮಾಡ್ತಾರೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. [ಅಯ್ಯೋ ಪಾಪ ಬೆಡಗಿ ನಯನತಾರಾಗೆ ಕಿವಿ ಕೆಪ್ಪಾಯ್ತಾ?]

  ನಯನತಾರಾ ಕೋಪಕ್ಕೆ ಬಲಿಯಾಗಿದ್ದು....

  ನಯನತಾರಾ ಕೋಪಕ್ಕೆ ಬಲಿಯಾಗಿದ್ದು....

  ಶೂಟಿಂಗ್ ಗೆ ಅಂತ ಹೈದರಾಬಾದ್ ಗೆ ಬಂದಾಗೆಲ್ಲಾ ನಯನತಾರಾ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ತಂಗುತ್ತಾರೆ. ನಯನತಾರಾಗೆ ಸಡನ್ ಆಗಿ ಕೋಪ ಯಾಕ್ ಬರುತ್ತೋ ಗೊತ್ತಿಲ್ಲ. ಒಟ್ನಲ್ಲಿ, ಆಕೆಯ ಉಗ್ರ ರೂಪಕ್ಕೆ ಹೋಟೆಲ್ ರೂಮ್ ನ ಪೀಠೋಪಕರಣಗಳು ಬಲಿಯಾಗುತ್ತವೆ.

  ಒಂದ್ಸಲಿ ಅಲ್ಲ, ಪ್ರತಿ ಬಾರಿ ಹೀಗೆ...

  ಒಂದ್ಸಲಿ ಅಲ್ಲ, ಪ್ರತಿ ಬಾರಿ ಹೀಗೆ...

  ಏನೋ ಒಮ್ಮೆ...ಕೋಪದಲ್ಲಿ ಹೀಗೆ ಆಗುವುದು ಸಹಜ ಅಂತ ಸುಮ್ಮನಾಗಬಹುದು. ಆದ್ರೆ, ಪ್ರತಿ ಬಾರಿ ಹೀಗೆ ಆದರೆ ಹೇಗೆ ಎಂಬುದು ಫೈವ್ ಸ್ಟಾರ್ ಹೋಟೆಲ್ ಮ್ಯಾನೇಜರ್ ಗಳ ಪ್ರಶ್ನೆ.

  ಮುಖ ಮೂತಿ ನೋಡಲ್ಲ.!

  ಮುಖ ಮೂತಿ ನೋಡಲ್ಲ.!

  ನಯನತಾರಾಗೆ ಸಿಟ್ಟು ಬಂದ್ರೆ, ಹೋಟೆಲ್ ನ ಓಪನ್ ಪ್ಲೇಸ್ ನಲ್ಲೇ ಕ್ಲಾಸ್ ತೆಗೆದುಕೊಳ್ಳುತ್ತಾರಂತೆ. ಕೈಗೆ ಸಿಕ್ಕ ವಸ್ತುಗಳನ್ನ ಪೀಸ್-ಪೀಸ್ ಮಾಡುತ್ತಾರಂತೆ.

  ತಪ್ಪಿಗೆ ದಂಡ ಕಟ್ಟುತ್ತಾರೆ.!

  ತಪ್ಪಿಗೆ ದಂಡ ಕಟ್ಟುತ್ತಾರೆ.!

  ಕೋಪದಲ್ಲಿ ಆದ ತಪ್ಪಿಗೆ ನಯನತಾರಾ ದಂಡ ಕಟ್ಟುತ್ತಾರೆ. ಆದರೂ, ಎಲ್ಲವನ್ನ ಸರಿ ಮಾಡುವ ಹೊತ್ತಿಗೆ ಹೋಟೆಲ್ ನವರಿಗೆ ಎರಡ್ಮೂರು ದಿನ ಬೇಕು. ಆ ನಷ್ಟ ಹೋಟೆಲ್ ನವರ ತಲೆ ಮೇಲೆ. ಎಲ್ಲಕ್ಕಿಂತ ಹೆಚ್ಚಾಗಿ, ನಯನತಾರಾ ತಂಗಿರುವ ಅಕ್ಕ-ಪಕ್ಕದ ರೂಮಿನವರಿಗೂ ಕಿರಿಕಿರಿ. ಹೀಗಾಗಿ ನಯನತಾರಾ ಬರ್ತಾರೆ ಅಂದ್ರೆ ಫೈವ್ ಸ್ಟಾರ್ ಹೋಟೆಲ್ ನವರಿಗೆ ದೊಡ್ಡ ತಲೆ ನೋವು.

  ಮೊನ್ನೆ ಬಂಜಾರಾ ಹಿಲ್ಸ್ ಹೋಟೆಲ್ ನಲ್ಲೂ ಹೀಗೆ ಆಗಿದೆ.!

  ಮೊನ್ನೆ ಬಂಜಾರಾ ಹಿಲ್ಸ್ ಹೋಟೆಲ್ ನಲ್ಲೂ ಹೀಗೆ ಆಗಿದೆ.!

  ಹೈದರಾಬಾದ್ ನ ಬಂಜಾರ ಹಿಲ್ಸ್ ಹೋಟೆಲ್ ನಲ್ಲೂ ನಯನತಾರಾ ಸಿಡಿಮಿಡಿ ಆಗಿ ವರ್ತಿಸಿದ್ದಾರಂತೆ.

  ಹೋಟೆಲ್ ಗಳ ನಿರ್ಣಯ.!

  ಹೋಟೆಲ್ ಗಳ ನಿರ್ಣಯ.!

  ತಪ್ಪಿ ಕೂಡ ಇನ್ಮುಂದೆ ನಯನತಾರಾಗೆ ರೂಮ್ ಕೊಡಬಾರದು ಅಂತ ಹೈದರಾಬಾದ್ ನ ಸ್ಟಾರ್ ಹೋಟೆಲ್ ಗಳ ಮ್ಯಾನೇಜರ್ ಗಳು ನಿರ್ಧರಿಸಿದ್ದಾರೆ.

  ಎಲ್ಲಿ ಉಳಿದುಕೊಳ್ಳುತ್ತಾರೋ.?

  ಎಲ್ಲಿ ಉಳಿದುಕೊಳ್ಳುತ್ತಾರೋ.?

  'ನಯನತಾರಾಗೆ ರೂಮ್ ಕೊಡಬಾರದು' ಎಂಬ ನಿರ್ಣಯಕ್ಕೆ ಎಲ್ಲಾ ಸ್ಟಾರ್ ಹೋಟೆಲ್ ಗಳೂ ಬೆಂಬಲ ನೀಡಿದರೆ, ನಯನತಾರಾ ಎಲ್ಲಿ ಉಳಿದುಕೊಳ್ಳುತ್ತಾರೋ, ಆ ಕೋಪದಿಂದ ಮತ್ತೇನು ಮಾಡುತ್ತಾರೋ ದೇವರೇ ಬಲ್ಲ.!

  ನಿರ್ಮಾಪಕರಿಗೂ ಕಿರಿಕಿರಿ...

  ನಿರ್ಮಾಪಕರಿಗೂ ಕಿರಿಕಿರಿ...

  ನಯನತಾರಾ ರವರ ಈ ವರ್ತನೆಯಿಂದ ಕೆಲ ನಿರ್ಮಾಪಕರಿಗೂ ಕಿರಿ ಕಿರಿ ಆಗಿದ್ಯಂತೆ.

  ಪಬ್ಲಿಸಿಟಿ ಗಿಮಿಕ್.?

  ಪಬ್ಲಿಸಿಟಿ ಗಿಮಿಕ್.?

  ತೆಲುಗಿನ 'ಬಾಬು ಬಂಗಾರಂ' ಚಿತ್ರದಲ್ಲಿ ನಯನತಾರಾ ಅಭಿನಯಿಸಿದ್ದಾರೆ. ಆ ಚಿತ್ರದ ಪ್ರಚಾರಕ್ಕೆ ನಯನತಾರಾ ಬರುತ್ತಿಲ್ಲ ಎಂಬ ಕಾರಣಕ್ಕೆ, ಅವರ ಬಗ್ಗೆ ಹೀಗೆಲ್ಲಾ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಮಾತು ಕೂಡ ತೆಲುಗು ಸಿನಿ ಅಂಗಳದಲ್ಲಿ ಕೇಳಿಬರುತ್ತಿದೆ.

  English summary
  According to the latest Buzz, Multi-Lingual Actress Nayanatara to be banned in all Star Hotels of Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X