Don't Miss!
- News
ಸಿದ್ದರಾಮಯ್ಯಗೆ ಅವರ ತಪ್ಪು ಎತ್ತಿ ತೋರಿಸಿದಕ್ಕೆ ಸಿಟ್ಟು ಬಂದಿದೆ- ಸಚಿವ ಡಾ.ಕೆ.ಸುಧಾಕರ್
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- Sports
ಟೀಮ್ ಇಂಡಿಯಾಗೆ ಹೊಸ ತಲೆನೋವು: ಮಂಕಾಗಿದ್ದಾರೆ ಭರವಸೆ ಮೂಡಿಸಿದ್ದ ಆಟಗಾರರು
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಲೈವಾನ ಹಿಂದಿಕ್ಕಿದ ಮಾಸ್ಟರ್ ? ದಳಪತಿ68 ಚಿತ್ರಕ್ಕೆ ವಿಜಯ್ ಸಂಭಾವನೆ ಎಷ್ಟು ಕೋಟಿ ಗೊತ್ತಾ?
ಸೂಪರ್ ಸ್ಟಾರ್‌ಗಳ ಸಂಭಾವನೆ ಕೇಳಿದರೆ ಒಮ್ಮೊಮ್ಮೆ ನಿಜಕ್ಕೂ ಅಚ್ಚರಿ ಅನ್ನಿಸುತ್ತದೆ. ಚಿತ್ರವೊಂದಕ್ಕೆ 50, 100 ಕೋಟಿ ರೂ. ಸಂಭಾವನೆ ಪಡೆಯುವ ಹೀರೊಗಳು ಇದ್ದಾರೆ. ಮೊದಲೆಲ್ಲಾ ಅತಿ ಹೆಚ್ಚು ಸಂಭಾವನೆ ಅಂದರೆ ರಜನಿಕಾಂತ್ ಹಾಗೂ ಸಲ್ಮಾನ್ ಖಾನ್ ಹೆಸರು ನೆನಪಾಗುತ್ತಿತ್ತು. ಆದರೆ ಈಗ ದಳಪತಿ ವಿಜಯ್ ನಂಬರ್ ವನ್ ಎನ್ನಲಾಗ್ತಿದೆ.
ದಳಪತಿ68 ಚಿತ್ರಕ್ಕಾಗಿ ವಿಜಯ್ ಪಡೆಯುತ್ತಿರುವ ಸಂಭಾವನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ವಿಜಯ್ ತಮ್ಮ 68ನೇ ಚಿತ್ರಕ್ಕೆ ಭಾರೀ ಮೊತ್ತದ ಸಂಭಾವನೆ ಜೇಬಿಗಿಳಿಸುತ್ತಿದಾರೆ ಎನ್ನಲಾಗ್ತಿದೆ. ಈಗಾಗಲೇ ಅಟ್ಲಿ ನಿರ್ದೇಶನದಲ್ಲಿ ಕಾಲಿವುಡ್ 'ಮಾಸ್ಟರ್' ಮುಂದಿನ ಚಿತ್ರಕ್ಕೆ ಸಹಿ ಮಾಡಿದ್ದಾರಂತೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಈ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರಕ್ಕಾಗಿ ನಟ ವಿಜಯ್ ಹಾಗೂ ನಿರ್ದೇಶಕ ಅಟ್ಲಿ ಸಂಭಾವನೆ ಕೇಳಿದವರು ಹುಬ್ಬೇರಿಸಿದ್ದಾರೆ.
ಮದುವೆ
ನಂತರ
ಆ
ನಿಯಮ
ಮುರಿದ
ನಯನತಾರ:
ಇದ್ಯಾವ
ನ್ಯಾಯ
ಎಂದ
ನೆಟ್ಟಿಗರು
ಈಗಾಗಲೇ ವಿಜಯ್ ಹಾಗೂ ಅಟ್ಲಿ ಕಾಂಬಿನೇಷನ್‌ನಲ್ಲಿ 3 ಸಿನಿಮಾಗಳು ಬಂದು ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಇವರಿಬ್ಬರ 4ನೇ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಅದಕ್ಕೆ ತಕ್ಕಂತೆ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಜೋಡಿ ಕ್ರೇಜ್ ತಕ್ಕಂತೆ ಚಾರ್ಚ್ ಮಾಡ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ವಿಜಯ ಸಂಭಾವನೆ ₹150 ಕೋಟಿ
ಸದ್ಯ ಕಾಲಿವುಡ್ ಅಂಗಳದಲ್ಲಿ ಇಂತಾದೊಂದು ಸುದ್ದಿ ಭಾರೀ ಸದ್ದು ಮಾಡ್ತಿದೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುವ ದಳಪತಿ68 ಚಿತ್ರಕ್ಕೆ ವಿಜಯ್ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ. ಈ ಸುದ್ದಿ ಕೇಳಿ ಕಾಲಿವುಡ್ ಮಂದಿ ಅವಕ್ಕಾಗಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ವಿಜಯ್ ನಟನೆಯ 'ವಾರೀಸು' ಸಿನಿಮಾ ತೆರೆಗಪ್ಪಳಿಸ್ತಿದೆ. ನಂತರ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ವಿಜಯ್ ನಟಿಸಲಿದ್ದಾರೆ.
ನಾವೀಗ
ಪ್ನಗ್ನೆಂಟ್
ಎಂದು
ಬರೆದ
ನಿರ್ದೇಶಕ
ಅಟ್ಲಿ;
ನಕ್ಕ
ನೆಟ್ಟಿಗರು,
ಕಂಗ್ರಾಟ್ಸ್
ಹೇಳಿದ
ರಶ್ಮಿಕಾ

ಅಟ್ಲಿಗೆ ₹50 ಕೋಟಿ ಸಂಭಾವನೆ
ಬರೋಬ್ಬರಿ 400 ಕೋಟಿ ರೂ. ಬಜೆಟ್‌ನಲ್ಲಿ ದಳಪತಿ68 ಸಿನಿಮಾ ನಿರ್ಮಾಣ ಆಗಲಿದೆಯಂತೆ. ಅದಕ್ಕೆ ತಕ್ಕಂತೆ ನಿರ್ದೇಶಕ ಅಟ್ಲಿಗೆ 50 ಕೋಟಿ ರೂ. ಸಂಭಾವನೆ ಸಿಗುತ್ತಿದೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಅಟ್ಲಿ ಹೇಳಿರುವ ಕಥೆ ಕೇಳಿ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ಮಾಡಲು ಉತ್ಸುಕವಾಗಿದೆ. 3 ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟಿರುವ ಜೋಡಿ ಮತ್ತೊಂದು ಹಿಟ್ ಕೊಡುವ ನಿರೀಕ್ಷೆಯಿದೆ.

ಸಂಕ್ರಾಂತಿಗೆ 'ವಾರೀಸು' ಎಂಟ್ರಿ
ದಳಪತಿ ವಿಜಯ್ ಹಾಗೂ ನಿರ್ದೇಶಕ ಅಟ್ಲಿ ಇಬ್ಬರು ಬೇರೇ ಬೇರೆ ಪ್ರಾಜೆಕ್ಟ್‌ಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. 'ವಾರೀಸು' ರಿಲೀಸ್ ನಂತರ ವಿಜಯ್ ಲೋಕೇಶ್ ಕನಕರಾಜ್ ನಿರ್ದೇಶನಲ್ಲಿ ನಟಿಸಲಿದ್ದಾರೆ. ಇತ್ತ ಅಟ್ಲಿ ಬಾಲಿವುಡ್ ಪ್ರಾಜೆಕ್ಟ್ 'ಜವಾನ್' ಕಂಪ್ಲೀಟ್ ಮಾಡಬೇಕಿದೆ. ಶಾರುಕ್ ಖಾನ್ ಹಾಗೂ ನಯನತಾರ ಈ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಎರಡು ಸಿನಿಮಾಗಳು ಮುಗಿದ ಮೇಲೆ ಇಬ್ಬರು ದಳಪತಿ68 ಚಿತ್ರಕ್ಕಾಗಿ ಕೈಜೋಡಿಸಲಿದ್ದಾರೆ.

ರಜನಿಕಾಂತ್ ಹಿಂದಿಕ್ಕಿದ ವಿಜಯ್
ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರವೊಂದಕ್ಕೆ 130 ಕೋಟಿ ರೂ. ಸಂಭಾವನೆ ಪಡೀತಾರೆ ಎನ್ನಲಾಗುತ್ತದೆ. ದಳಪತಿ 110ರಿಂದ 125 ಕೋಟಿವರೆಗೂ ಚಾರ್ಜ್ ಮಾಡುತ್ತಿದ್ದರು. ಆದರೆ ದಳಪತಿ68 ಚಿತ್ರಕ್ಕೆ ಏಕಾಏಕಿ 150 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ವಿಜಯ್, ರಜನಿಕಾಂತ್‌ನ ಮೀರಿಸಿದ್ದಾರೆ ಎನ್ನಲಾಗ್ತಿದೆ. ವಿಜಯ್ ಸಿನಿಮಾಗಳಿಗೆ ಬರೀ ತಮಿಳುನಾಡು ಮಾತ್ರವಲ್ಲದೇ ಆಂಧ್ರ, ತೆಲಂಗಾಣದಲ್ಲೂ ಭಾರೀ ಕ್ರೇಜ್ ಇದೆ. ಒಂದೇ ಭಾಷೆಯಲ್ಲಿ ವಿಜಯ್ ಸಿನಿಮಾಗಳು ರಿಲೀಸ್ ಆಗಿ 200, 300 ಕೋಟಿ ಬ್ಯುಸಿನೆಸ್ ಮಾಡಿವೆ.