For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ'ಯನ್ನ ಕಟ್ಟಪ್ಪ ಯಾಕೆ ಕೊಂದ? ಉಪ್ಪಿ ಬಿಚ್ಚಿಟ್ಟ ರಹಸ್ಯ

  By Harshitha
  |

  ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿಟ್ಟು' ಸವಿಯನ್ನ ನೀವು ಸವಿದಿರಬಹುದು. ಹಾಗಿದ್ಮೇಲೆ 'ನಾನು-ನೀನು-ನೀನು-ನಾನು' ಅಂತ ತಲೆಗೆ ಹುಳ ಬಿಟ್ಟಿರುವ ಉಪೇಂದ್ರ ಅವರ ಬಗ್ಗೆ ನಾವು ಹೆಚ್ಚು ಹೇಳಬೇಕಾಗಿಲ್ಲ ಅಲ್ವಾ?

  'ಉಪ್ಪಿ-2' ಕ್ಲೈಮ್ಯಾಕ್ಸ್ ನಿಮ್ಮ ನಿಮ್ಮ ಯೋಚನೆಗೆ ಬಿಟ್ಟಿದ್ದು. ಆದ್ರೆ, 'ಬಾಹುಬಲಿ' ಮೊದಲ ಪಾರ್ಟ್ ನ ಕ್ಲೈಮ್ಯಾಕ್ಸ್ ನಲ್ಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಮಾತ್ರ ಸೂಪರ್ ಟ್ವಿಸ್ಟ್ ಕೊಟ್ಟಿದ್ದಾರೆ.

  ಬಾಹುಬಲಿಗೆ ಅತ್ಯಾಪ್ತರಾಗಿದ್ದ ಕಟ್ಟಪ್ಪ, ಬಾಹುಬಲಿಯನ್ನ ಕೊಲ್ಲೋದು ಯಾಕೆ ಅನ್ನುವ ಬಗ್ಗೆ ಸಿನಿಮಾ ನೋಡಿರುವವರು ಚರ್ಚೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ದು ಯಾಕೆ ಅನ್ನುವ ಬಗ್ಗೆ ಅನೇಕ ಜೋಕ್ ಗಳು ಹುಟ್ಟಿಕೊಂಡಿವೆ. [ಮೋದಿಗೂ ಕಾಡಿದ ಬಾಹುಬಲಿ' ಮಿಲಿಯನ್ ಡಾಲರ್ ಪ್ರಶ್ನೆ ! ]

  ಅದ್ರಲ್ಲಿ, ಎಲ್ಲಕ್ಕಿಂತ ಮಜವಾಗಿರುವುದು ನಮ್ಮ ಉಪ್ಪಿ ಜೋಕ್. ಉಪೇಂದ್ರ ಅವರ ಪ್ರಕಾರ ಬಾಹುಬಲಿಯನ್ನ ಕಟ್ಟಪ್ಪ ಕೊಂದದ್ದು ಈ ಕಾರಣಕ್ಕೆ -

  'ಬಾಹುಬಲಿ'ಯಿಂದಾಗಿ ಮದುವೆಗೂ ಮುನ್ನವೇ ದೇವಸೇನಾ (ಅನುಷ್ಕಾ ಶೆಟ್ಟಿ) ಗರ್ಭಿಣಿಯಾಗಿರುತ್ತಾರೆ. ಈ ವಿಷಯ ಕಟ್ಟಪ್ಪಗೆ ಗೊತ್ತಾಗುತ್ತದೆ. ಆಗ 'ಬಾಹುಬಲಿ' ಜೊತೆ ಕಟ್ಟಪ್ಪ ನಡೆಸುವ ಸಂವಾದ -

  ಕಟ್ಟಪ್ಪ - ತಾಳಿ ಕಟ್ಟಪ್ಪ (Tie the taali)
  ಬಾಹುಬಲಿ - ತಾಳಿ ಕಟ್ಟಪ್ಪ (Wait Kattappa)
  ಕಟ್ಟಪ್ಪ (ಗೊಂದಲದಿಂದ) - ತಾಳಿ ಕಟ್ಟಪ್ಪ (Tie the taali)
  ಬಾಹುಬಲಿ - 'ತಾಳಿ' ಕಟ್ಟಪ್ಪ? (Give me taali)

  ತಮ್ಮ ಮಾತನ್ನ ತಮಗೆ ತಿರುಗಿಸಿ ಬಾಹುಬಲಿ ವ್ಯಂಗ್ಯ ಮಾಡುತ್ತಿದ್ದಾನೆ ಅಂತ ತಿಳಿದು ಕಟ್ಟಪ್ಪ ಕೋಪಗೊಳ್ಳುತ್ತಾರೆ.

  ಕಟ್ಟಪ್ಪ (ಕೋಪದಿಂದ) - ನೀನು ಕಟ್ಟಪ್ಪ (You tie the taali)
  ಬಾಹುಬಲಿ (ಗೊಂದಲದಿಂದ) - ನೀನು ಕಟ್ಟಪ್ಪ (You are Kattappa not me)

  ಇದರಿಂದ ರೊಚ್ಚಿಗೆದ್ದ ಕಟ್ಟಪ್ಪ ಬಾಹುಬಲಿಯನ್ನು ಕೊಂದ..!! [ಬಾಹುಬಲಿಯನ್ನು ಕಟ್ಟಪ್ಪ ಕೊಂದ ರಹಸ್ಯ ಬಹಿರಂಗ]

  ಹೀಗೊಂದು ಜೋಕ್ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ. 'ನೀನು' ಹವಾ ಟಾಲಿವುಡ್ ನಲ್ಲೂ ಜೋರಾಗಿದೆ ಅನ್ನೋದಕ್ಕೆ ಇದು ಸಣ್ಣ ಉದಾಹರಣೆ ಅಷ್ಟೆ.

  English summary
  Why Kattappa killed Baahubali? is the common question that arises among all the viewers of Telugu Film 'Baahubali'. A joke upon Upendra's explanation as to why Kattappa killed 'Baahubali' is becoming viral on social networking sites.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X