»   » ಬಿಗ್ ಬಾಸ್ ಗೆ ಶೀಘ್ರದಲ್ಲೇ ಜಂಗಲ್ ಜಾಕಿ ರಾಜೇಶ್

ಬಿಗ್ ಬಾಸ್ ಗೆ ಶೀಘ್ರದಲ್ಲೇ ಜಂಗಲ್ ಜಾಕಿ ರಾಜೇಶ್

Posted By:
Subscribe to Filmibeat Kannada

ಇದು ವೈಲ್ಡ್ ಕಾರ್ಡ್ ಎಂಟ್ರಿನೋ ಏನೋ ಗೊತ್ತಿಲ್ಲ. ಜಂಗಲ್ ಜಾಕಿ, ಲವ್ ಈಸ್ ಪಾಯಿಸನ್ ಚಿತ್ರಗಳ ನಾಯಕ ನಟ ರಾಜೇಶ್ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಶೀಘ್ರದಲ್ಲೇ ಎಂಟ್ರಿ ಕೊಡಲಿದ್ದಾರೆ ಎನ್ನುತ್ತಿವೆ ಮೂಲಗಳು.

ಸುದ್ದಿ ಇನ್ನೂ ಪಕ್ಕಾ ಆಗಿಲ್ಲದಿದ್ದರೂ ರಾಜೇಶ್ ಎಂಟ್ರಿ ಶೀಘ್ರದಲ್ಲೇ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಲ್ಲವೂ ಸರಿಹೋಗಿದ್ದರೆ ಈಗಾಗಲೆ ಬಿಗ್ ಬಾಸ್ ಮನೆಯಲ್ಲಿ ರಾಜೇಶ್ ಇರಬೇಕಾಗಿತ್ತು. ಆದರೆ ಈತ ಮಾನಸಿಕ ಅಸ್ವಸ್ಥನಾದ ಕಾರಣ ಬಿಗ್ ಬಾಸ್ ಶೋಗೆ ಎಂಟ್ರಿ ಸಿಕ್ಕಿರಲಿಲ್ಲ.

Jungle Jackie Rajesh

ಬಿಗ್ ಬಾಸ್ ರಿಯಾಲಿಟಿ ಶೋನ 13ನೇ ಸ್ಪರ್ಧಿಯಾಗಿ ರಾಜೇಶ್ ಈ ಹಿಂದೆ ಆಯ್ಕೆಯಾಗಿದ್ದ. ಚಿತ್ರೀಕರಣ ಹಂತದಲ್ಲಿರುವ 'ಲವ್ ಈಸ್ ಪಾಯಿಸನ್' ಚಿತ್ರ ಅರ್ಧಕ್ಕೆ ನಿಂತುಹೋದ ಕಾರಣ ರಾಜೇಶ್ ಕೆಲಸವಿಲ್ಲದಂತಾಗಿದ್ದ. ಇದೇ ಸಂದರ್ಭದಲ್ಲಿ ಆತನಿಗೆ ಬಿಗ್ ಬಾಸ್ ಅವಕಾಶ ಹುಡುಕಿಕೊಂಡು ಬಂದಿತ್ತು.

ಚಾನ್ಸ್ ಏನೋ ಸಿಕ್ಕಿತು ಆದರೆ ರಾಜೇಶ್ ಕೊನೆಯ ಘಳಿಗೆಯಲ್ಲಿ ಅವಕಾಶದಿಂದ ವಂಚಿತವಾಗಿದ್ದ. ಇದಕ್ಕೆ ಕಾರಣ ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ ನಂಬಲರ್ಹ ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಈತ ವಾಹಿನಿಯ ಕ್ಯಾಮೆರಾಮೆನ್ ಮೇಲೆ ಕೈ ಮಾಡಿದ್ದ ಎಂಬ ಸಮಾಚಾರವಿದೆ.

ಮಾನಸಿಕವಾಗಿ ಅಸ್ವಸ್ಥನಾಗಿದ್ದ ರಾಜೇಶ್ ಅವರಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಗವರು ಸಂಪೂರ್ಣ ಗುಣಮುಖರಾಗಿದ್ದಾರೆ. ಹಾಗಾಗಿ ಮೊದಲು ಕೊಟ್ಟ ಮಾತಿನಂತೆ ಈಗ ಬಿಗ್ ಬಾಸ್ ಮನೆಗೆ ಎಂಟ್ರಿಕೊಡುತ್ತಿದ್ದಾರೆ ಎನ್ನಲಾಗಿದೆ.

ಒಟ್ಟಾರೆಯಾಗಿ ರಾಜೇಶ್ ಆಗಮನವಾದರೆ, ಬಿಗ್ ಬಾಸ್ ಮನೆಯಲ್ಲಿ ಇನ್ನೇನಾಗುತ್ತದೋ ಎಂಬ ಭಯ ಉಳಿದ ಸ್ಪರ್ಧಿಗಳಿಗೆ ತಪ್ಪಿದ್ದಲ್ಲ. ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ ಆಗಲೇ ಸ್ಪರ್ಧಿಗಳ ನಡುವೆ ತಿಕ್ಕಾಟ ಶುರುವಾಗಿದೆ.

ಬಿಗ್ ಬಾಸ್ ಮನೆಯಿಂದ ಇನ್ನೂ ಯಾರ್ಯಾರು ಹೊರಬೀಳುತ್ತಾರೋ ಏನೋ. ಈಗಾಗಲೆ ನರ್ಸ್ ಜಯಲಕ್ಷ್ಮಿ, ಸಂಜನಾ ಗಲ್ ರಾಣಿ ಹಾಗೂ ಶ್ವೇತಾ ಪಂಡಿತ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. (ಏಜೆನ್ಸೀಸ್)

English summary
'Jungle Jackie' fame Kannada actor Rajesh soon to enter Etv Kannada's reality show Bigg Boss. Recently Rajesh admitted to Mysore's K.R.Hospital to get treatment for metal disorder. Now he is all right and soon enter to Bigg Boss.
Please Wait while comments are loading...