»   » 'ಕುರುಕ್ಷೇತ್ರ' ಸೆಟ್ ಗೆ ಭೇಟಿ ಕೊಡಲಿರುವ ತೆಲುಗು 'ಸ್ಟಾರ್ ನಟ' ಯಾರು?

'ಕುರುಕ್ಷೇತ್ರ' ಸೆಟ್ ಗೆ ಭೇಟಿ ಕೊಡಲಿರುವ ತೆಲುಗು 'ಸ್ಟಾರ್ ನಟ' ಯಾರು?

Posted By:
Subscribe to Filmibeat Kannada
Junior NTR, Telugu Actor to visit Kurukshetra Movie Shooting Set at Ramoji Film City

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಹಲವು ಸ್ಟಾರ್ ನಟರು ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಸಿನಿಮಾದ ಶೂಟಿಂಗ್ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

'ಕುರುಕ್ಷೇತ್ರ' ಶೂಟಿಂಗ್ ನಡೆಯುತ್ತಿರುವ ಪಕ್ಕದಲ್ಲೇ ತೆಲುಗಿನ ಸ್ಟಾರ್ ನಟನೊಬ್ಬನ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದೆ. ಹೀಗಾಗಿ, ದರ್ಶನ್ 'ಕುರುಕ್ಷೇತ್ರ'ದ ಸೆಟ್ ಗೆ ಈ ನಟ ಭೇಟಿ ನೀಡಲಿದ್ದಾರಂತೆ.

ಅಷ್ಟೇ ಅಲ್ಲದೇ, ರಾಮೋಜಿ ಫಿಲ್ಮ್ ಸಿಟಿಯ ಮಾಲೀಕ ರಾಮೋಜಿ ರಾವ್ ಇತ್ತೀಚೆಗಷ್ಟೇ ಸೆಟ್ ಗೆ ಆಗಮಿಸಿ ಚಿತ್ರೀಕರಣ ವೀಕ್ಷಿಸಿದ್ದಾರಂತೆ. ಹಾಗಿದ್ರೆ, 'ಕುರುಕ್ಷೇತ್ರ' ಸೆಟ್ ಗೆ ಬರಲಿರುವ ಆ ಸ್ಟಾರ್ ನಟ ಯಾರು? ರಾಮೋಜಿ ರಾವ್ ಈ ಚಿತ್ರದ ಬಗ್ಗೆ ಏನಂದ್ರು? ಮುಂದೆ ಓದಿ.....

'ಕುರುಕ್ಷೇತ್ರ' ಸೆಟ್ ಗೆ ಟಾಲಿವುಡ್ ಸ್ಟಾರ್ ಗಳು ಭೇಟಿ

'ಮುನಿರತ್ನ ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿರುವುದರಿಂದ ಶೂಟಿಂಗ್ ಸೆಟ್ ಗೆ ತೆಲುಗಿನ ಹಲವು ನಟರು ಭೇಟಿ ನೀಡುತ್ತಿದ್ದಾರಂತೆ.

'ಕುರುಕ್ಷೇತ್ರ' ಸಿನಿಮಾದಲ್ಲಿ ಅಂಬರೀಶ್, ಶ್ರೀನಾಥ್ ಹೀಗೆ ಕಾಣ್ತಾರೆ ನೋಡಿ...

ಶೂಟಿಂಗ್ ಕಂಡು ಥ್ರಿಲ್ ಆದ ರಾಮೋಜಿ ರಾವ್

ರಾಮೋಜಿ ಫಿಲ್ಮ್ ಸಿಟಿಯ ಮಾಲೀಕ ರಾಮೋಜಿ ರಾವ್ 'ಕುರುಕ್ಷೇತ್ರ' ಸೆಟ್ ಗೆ ಭೇಟಿ ಕೊಟ್ಟು, ಫುಲ್ ಥ್ರಿಲ್ ಆದರಂತೆ. ''ಕನ್ನಡದಲ್ಲಿ ಕುರುಕ್ಷೇತ್ರ ಸಿನಿಮಾ ಮಾಡ್ತಿದ್ದಾರೆ ಅಂತ ಗೊತ್ತಾಯ್ತು. ಸೆಟ್ ಹೇಗೆ ಹಾಕಿದ್ದಾರೆ ಎಂದು ನೋಡಲು ಬಂದೆ, ಈಗ ನೋಡಿದ ಮೇಲೆ ನೇರವಾಗಿ 'ಕುರುಕ್ಷೇತ್ರ' ನೋಡಿದಂತಾಯಿತು'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.

'ಕರ್ಣ' ಅರ್ಜುನ್ ಸರ್ಜಾ ಬಗ್ಗೆ 'ದುರ್ಯೋಧನ' ದರ್ಶನ್ ಹೀಗೆ ಹೇಳಿದ್ರು!

ದರ್ಶನ್ ಸೆಟ್ ಗೆ ಜೂ.ಎನ್.ಟಿ.ಆರ್ ಎಂಟ್ರಿ!

ಇನ್ನು 'ಕುರುಕ್ಷೇತ್ರ' ಚಿತ್ರದ ಶೂಟಿಂಗ್ ಸೆಟ್ ಗೆ ತೆಲುಗಿನ ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಿತ್ರಕೃಪೆ: ಡಿ-ಕಂಪನಿ ಫ್ಯಾನ್ಸ್ ಗ್ರೂಪ್

'ಜೈ ಲವಕುಶ' ಶೂಟಿಂಗ್ ನಲ್ಲಿರುವ Jr.NTR

ಜೂ.ಎನ್.ಟಿ.ಆರ್ ಅಭಿನಯಿಸುತ್ತಿರುವ 'ಜೈ ಲವಕುಶ' ಚಿತ್ರದ ಚಿತ್ರೀಕರಣ ಕೂಡ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು, 'ಕುರುಕ್ಷೇತ್ರ'ದ ಸೆಟ್ ಗೆ ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

'ಯಮದೊಂಗ' ಚಿತ್ರದಲ್ಲಿ NTR ಅಬ್ಬರಿಸಿದ್ದರು

ಇದಕ್ಕೂ ಮುಂಚೆ ನಟ Jr.NTR, 'ಯಮದೊಂಗ' ಚಿತ್ರದಲ್ಲಿ ಪೌರಾಣಿಕ ಪಾತ್ರದಲ್ಲಿ ಅಬ್ಬರಿಸಿದ್ದರು. ಕೈಯಲ್ಲಿ ಗದೆ ಹಿಡಿದು ಯಮನ ಪಾತ್ರವನ್ನ ಕೂಡ ನಿರ್ವಹಿಸಿದ್ದರು.

15 ದಿನಗಳ ಶೂಟಿಂಗ್ ಮುಗಿಸಿದ 'ಕುರುಕ್ಷೇತ್ರ': ವಿಶೇಷತೆಗಳೇನು?

English summary
According to Sources, Telugu Actor Junior NTR will visit to 'Kurukshetra' Movie Shooting Set at Ramoji Film City.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada