For Quick Alerts
  ALLOW NOTIFICATIONS  
  For Daily Alerts

  1997ರಲ್ಲಿ ನಿಂತುಹೋಗಿದ್ದ ಕನಸಿನ ಚಿತ್ರಕ್ಕೆ ಮತ್ತೆ ಚಾಲನೆ ನೀಡಲಿರುವ ಕಮಲ್ ಹಾಸನ್?

  |

  ಕಮಲ್ ಹಾಸನ್ ಕನಸಿನ ಪ್ರಾಜೆಕ್ಟ್‌ಗೆ ಮರುಜೀವ ನೀಡುವ ಕುರಿತು ಹೊಸದೊಂದು ಸುದ್ದಿ ಹೊರಬಿದ್ದಿದೆ. ಸುಮಾರು ಎರಡು ದಶಕಗಳ ಹಿಂದೆ ಆರಂಭವಾಗಿ ನಿಂತುಹೋಗಿರುವ ಚಿತ್ರಕ್ಕೆ ಮತ್ತೆ ಚಾಲನೆ ನೀಡುವ ಯೋಚನೆಯಲ್ಲಿದ್ದಾರಂತೆ ಕಮಲ್ ಹಾಸನ್.

  ಇಂದಿನ ಟ್ರೆಂಡ್‌ಗೆ ತಕ್ಕಂತೆ ಚಿತ್ರಕಥೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವ ಮೂಲಕ ಕನಸಿನ ಚಿತ್ರ ಆರಂಭಿಸುವ ಕನಸು ಕಾಣುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಕುರಿತು ಎಲ್ಲಿಯೂ ಅವರು ಅಧಿಕೃವಾಗಿ ಹೇಳಿಲ್ಲ. ಆದರೆ, ಆಪ್ತ ಮೂಲಗಳ ಮಾಹಿತಿ ಪ್ರಕಾರ ಇಂತಹದೊಂದು ಯೋಚನೆ ಮಾಡಿರುವುದು ನಿಜ ಎನ್ನುತ್ತಿದ್ದಾರೆ. ಅಷ್ಟಕ್ಕೂ, ಯಾವುದು ಆ ಚಿತ್ರ? ಮುಂದೆ ಓದಿ....

  22 ವರ್ಷದ ಹಿಂದೆ ವಿಷ್ಣು ಜೊತೆ ಕಮಲ್ ಮಾಡಬೇಕಿದ್ದ ಚಿತ್ರಕ್ಕೆ ಮತ್ತೆ ಮರುಜೀವ.!

  20 ವರ್ಷದ ಹಿಂದೆ ನಿಂತು ಹೋಗಿದೆ

  20 ವರ್ಷದ ಹಿಂದೆ ನಿಂತು ಹೋಗಿದೆ

  18ನೇ ಶತಮಾನದಲ್ಲಿ ವಾರಿಯರ್ ಮೊಹಮ್ಮದ್ ಯೂಸೂಫ್ ಖಾನ್ ಅವರ ಜೀವನ ಆಧಾರಿತ ಕಥೆ ಹೊಂದಿದ್ದ 'ಮರುಧನಾಯಗಂ' ಚಿತ್ರ 1997ರಲ್ಲಿ ಸೆಟ್ಟೇರಿತ್ತು. 20ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ಕೂಡ ನಡೆದಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ಅರ್ಧದಲ್ಲೆ ನಿಂತು ಹೋಗಿತ್ತು.

  ಕಮಲ್ ಬರಿ ನಿರ್ದೇಶನ ಮಾಡಲು ತೀರ್ಮಾನ

  ಕಮಲ್ ಬರಿ ನಿರ್ದೇಶನ ಮಾಡಲು ತೀರ್ಮಾನ

  ಕಮಲ್ ಹಾಸನ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಈ ಸಿನಿಮಾ ಬರಬೇಕಿತ್ತು. ಜೊತೆಗೆ ಅವರೇ ನಟಿಸುತ್ತಿದ್ದರು. ಆದ್ರೀಗ, ಕಮಲ್ ಹಾಸನ್ ಬದಲಾಗಿ ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಮ್ ಅವರನ್ನ ನಾಯಕರನ್ನಾಗಿಸಿ ಈ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಹಲವು ತಿಂಗಳ ಹಿಂದೆಯೇ ಹೊರಬಿದ್ದಿದೆ. ಈ ಸಂಬಂಧ ವಿಕ್ರಂ ಜೊತೆ ರಾಜ್ ಕಮಲ್ ಪ್ರೊಡಕ್ಷನ್ ಚರ್ಚೆ ಸಹ ಮಾಡಿದೆ ಎನ್ನಲಾಗಿದೆ.

  ಶತ್ರುಗಳ ಜೊತೆ ಕಮಲ್ ಹಾಸನ್ ಭರ್ಜರಿ ಭೋಜನ: ವಿಕ್ರಂ ಟೀಸರ್‌

  ವಿಷ್ಣುವರ್ಧನ್ ನಟಿಸಬೇಕಿತ್ತು

  ವಿಷ್ಣುವರ್ಧನ್ ನಟಿಸಬೇಕಿತ್ತು

  'ಮರುಧನಾಯಗಂ' ಚಿತ್ರಕ್ಕೆ ಸಂಬಂಧಿಸಿದಂತೆ ಸಿಕ್ಕ ದಾಖಲೆಗಳ ಪ್ರಕಾರ, ಈ ಚಿತ್ರದಲ್ಲಿ ಕನ್ನಡದ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಬೇಕಿತ್ತು. ವಾಜೀದ್ ಖಾನ್ ಎಂಬ ಪಾತ್ರದಲ್ಲಿ ವಿಷ್ಣುದಾದಾ ಬಣ್ಣ ಹಚ್ಚಬೇಕಿತ್ತು. ಈ ಪ್ರಾಜೆಕ್ಟ್ ನಿಂತು ಹೋದ ಕಾರಣ, ಕಮಲ್ ಮತ್ತು ವಿಷ್ಣು ಕಾಂಬಿನೇಷನ್ ನೋಡುವಲ್ಲಿ ಪ್ರೇಕ್ಷಕರಿಗೆ ನಿರಾಸೆಯಾಯಿತು.

  3 ಜನ ಒಳ್ಳೆ ಗ್ಲಾಮರ್ ಎಂದು ಕಾಲೆಳೆದ Upendra | Filmibeat Kannada
  'ವಿಕ್ರಮ್' ಸಿನಿಮಾದಲ್ಲಿ ಕಮಲ್

  'ವಿಕ್ರಮ್' ಸಿನಿಮಾದಲ್ಲಿ ಕಮಲ್

  ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಸೆಟ್ಟೇರಿರುವ 'ವಿಕ್ರಮ್' ಚಿತ್ರದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಅದಾದ ಬಳಿಕ ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರವನ್ನು ಮತ್ತೆ ಆರಂಭಿಸಬೇಕಿದೆ. ಈ ಮಧ್ಯೆ 'ಮರುಧನಾಯಗಂ' ಸಿನಿಮಾ ಕುರಿತು ಆಗಾಗ ಇಂತಹ ಸುದ್ದಿ ಚರ್ಚೆಗೆ ಬರುತ್ತಲೇ ಇದೆ.

  English summary
  Latest Buzz in Kollywood, Kamal haasan will re start his 1997 dream project marudhanayagam soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X