»   » ರವಿಮಾಮನ ಜೊತೆ ಚಾಲೆಂಜಿಂಗ್ ಸ್ಟಾರ್ ತೆರೆ ಹಂಚಿಕೊಳ್ಳುತ್ತಾರಂತೆ!

ರವಿಮಾಮನ ಜೊತೆ ಚಾಲೆಂಜಿಂಗ್ ಸ್ಟಾರ್ ತೆರೆ ಹಂಚಿಕೊಳ್ಳುತ್ತಾರಂತೆ!

Posted By:
Subscribe to Filmibeat Kannada

ಸಾಮಾನ್ಯವಾಗಿ ಹಿಂದಿ ಸಿನಿಮಾಗಳು ತಮಿಳು, ತೆಲುಗು ಭಾಷೆಗೆ ರಿಮೇಕ್ ಆಗೋದು ಸಹಜ. ಆದರೆ ಕನ್ನಡಕ್ಕೆ ರಿಮೇಕ್ ಆಗೋದು ಬಹಳ ಕಡಿಮೆ. ಇದೀಗ ಕನ್ನಡಿಗರ ಅಭಿರುಚಿಗೆ ತಕ್ಕಂತೆ ಬಾಲಿವುಡ್ ಸಿನಿಮಾವೊಂದು ಕನ್ನಡಕ್ಕೆ ರಿಮೇಕ್ ಆಗಲು ಎಲ್ಲಾ ತಯಾರಿಯು ನಡೆಯುತ್ತಿದೆ.

ಬಿಟೌನ್ ನಲ್ಲಿ ವಿವಾದಗಳ ಜೊತೆ-ಜೊತೆಗೆ ಸಖತ್ ಸುದ್ದಿ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಎನಿಸಿಕೊಂಡ ನಟ ಅಕ್ಷಯ್ ಕುಮಾರ್ ಅವರ 'ಓ ಮೈ ಗಾಡ್', ಚಿತ್ರ ಕನ್ನಡಕ್ಕೆ ರಿಮೇಕ್ ಆಗಲಿದೆ. ಚಿತ್ರದಲ್ಲಿ ನಾಯಕನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನ ಪ್ರೀತಿ ಪ್ರೇಮದ ಜಪ ಮಾಡುತ್ತಿದ್ದ ರವಿಮಾಮ ಇದೀಗ ದೇವರ ಜಪ ಮಾಡುವುದು ಪಕ್ಕಾ ಆಗಿದೆ.[ದಕ್ಷಿಣ ಅಮೆರಿಕದಿಂದ ದರ್ಶನ್ ಮನೆಗೆ ಬಂದ ಹೊಸ ಅತಿಥಿ]

Kannada Actor Darshan to share screen with Ravichandran

ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಬುಗುರಿ' ಚಿತ್ರದ ನಂತರ ನಿರ್ದೇಶಕ ಎಂ.ಡಿ ಶ್ರೀಧರ್ ಅವರು ಕನ್ನಡದ 'ಓ ಮೈ ಗಾಡ್', ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಕನ್ನಡಿಗರ ಅಭಿರುಚಿಗೆ ತಕ್ಕಂತೆ ಚಿತ್ರಕಥೆಯನ್ನು ತಯಾರಿಸಲಾಗಿದೆ.

ಬಾಲಿವುಡ್ ಸಿನಿಮಾ 'ಓ ಮೈ ಗಾಡ್' ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವೆಲ್ ಜುಗಲ್ ಬಂದಿಯಲ್ಲಿ ಮೂಡಿಬಂದಿದ್ದ ಚಿತ್ರ ಸೂಪರ್ ಹಿಟ್ ಆಗಿತ್ತು. ಸುಮಾರು 20 ಕೋಟಿ ಬಜೆಟ್ ವೆಚ್ಚದಲ್ಲಿ ತಯಾರಾಗಿದ್ದ ಸಿನಿಮಾ 120 ಕೊಟಿ ಗಳಿಸುವ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು.[ದರ್ಶನ್ ಕೈಗೆ ಪೆಟ್ಟು; 'ಜಗ್ಗು ದಾದಾ' ಶೂಟಿಂಗ್ ಮುಂದಕ್ಕೆ.!]

Kannada Actor Darshan to share screen with Ravichandran

ಅಷ್ಟೆ ಅಲ್ಲದೇ ಈ ಚಿತ್ರ ಟಾಲಿವುಡ್ ಗೂ ರಿಮೇಕ್ ಆಗಿ ಅಲ್ಲಿ ಗೋವಿಂದ ಗೋವಿಂದ ಎಂಬ ಹೆಸರಿನಲ್ಲಿ ನಟ ಪವನ್ ಕಲ್ಯಾಣ್ ಅವರ ಕಾಣಿಸಿಕೊಂಡಿದ್ದರು. ಇದೀಗ 'ಓ ಮೈ ಗಾಡ್' ನಲ್ಲಿ ನಟ ಅಕ್ಷಯ್ ಕುಮಾರ್ ಮಾಡಿದ್ದ ಪಾತ್ರವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಡುತ್ತಾರೆ ಎಂದು ಗಾಂಧಿನಗರದಲ್ಲಿ ಮಾತುಗಳು ಕೇಳಿ ಬರುತ್ತಿದೆ. ಇದು ಆಫೀಶಿಯಲ್ ಆಗಿ ಇನ್ನೇನು ಕೆಲವೇ ದಿನಗಳಲ್ಲಿ ಪಕ್ಕಾ ಆಗಲಿದ್ದು, ಆ ನಂತರ ಎಲ್ಲರಿಗೂ ಉತ್ತರ ದೊರೆಯಲಿದೆ.

ಅದೇನೇ ಇರಲಿ ನಟ ರವಿಚಂದ್ರನ್ ಅವರು ಕಿಚ್ಚ ಸುದೀಪ್ ಅವರ ಜೊತೆ 'ಮಾಣಿಕ್ಯ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಇತ್ತೀಚೆಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ.

English summary
Kannada Actor Darshan to share screen with Kannada Actor Ravichandran. The latest reports says that, Darshan is sharing screen space with Ravichandran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada