»   » ಕಥೆ ಕೇಳಿದ್ದು 180 ಆದ್ರೆ ಒಪ್ಪಿದ್ದು ಮಾತ್ರ ಒಂದೇ ಸಿನಿಮಾ

ಕಥೆ ಕೇಳಿದ್ದು 180 ಆದ್ರೆ ಒಪ್ಪಿದ್ದು ಮಾತ್ರ ಒಂದೇ ಸಿನಿಮಾ

By: ಸೋನು ಗೌಡ
Subscribe to Filmibeat Kannada

ಲವ್ಲಿ ಸ್ಟಾರ್ ಪ್ರೇಮ್ ಅವರು ತಮ್ಮ ಸ್ವಂತ ಬ್ಯಾನರ್ ನಲ್ಲಿ ಒಂದು ಸಿನಿಮಾ ಮಾಡ್ತಾರೆ ಅಂತ ಈ ಮೊದಲು ನಾವು ನಿಮಗೆ ಹೇಳಿದ್ವಿ ತಾನೇ.

ಅಂದಹಾಗೆ ಇತ್ತೀಚೆಗೆ ನಟ ಪ್ರೇಮ್ ಅವರ ಸಿನಿಮಾಗಳು ವರ್ಷಕ್ಕೆ ಒಂದೇ ಬರುತ್ತಿದೆ. ಪ್ರೇಮ್ ಅವರು ಏನಾದ್ರೂ ಕೈಯಲ್ಲಿ ಸಿನಿಮಾ ಇಲ್ಲದೆ ಖಾಲಿ ಕುಳಿತಿದ್ದಾರ? ಅಥವಾ ಅವರಿಗೆ ಅವಕಾಶ ಕಡಿಮೆಯಾಗುತ್ತಿದೆಯಾ ಎಂದು ನೀವು ಯೋಚನೆ ಮಾಡ್ತೀದ್ದೀರಾ?.

ಖಂಡಿತ ಇಲ್ಲ. ಎನ್ನುತ್ತಾರೆ ಪ್ರೇಮ್. ಕಳೆದ ಒಂದು ವರ್ಷದಲ್ಲಿ ಪ್ರೇಮ್ ಅವರು ಬರೋಬ್ಬರಿ 180 ಕಥೆಗಳನ್ನು ಕೇಳಿದ್ದಾರಂತೆ. ಆದರೆ ಆ ಅಷ್ಟು ಕಥೆಗಳಲ್ಲಿ ಪ್ರೇಮ್ ಅವರಿಗೆ ಇಷ್ಟ ಆಗಿದ್ದು ಮಾತ್ರ ಕೇವಲ ಒಂದೇ ಒಂದು ಸಿನಿಮಾದ ಕಥೆ.[ಲವ್ಲಿ ಸ್ಟಾರ್ ಪ್ರೇಮ್ ನಿಜ ಜೀವನದ ಕಥೆ ಸಿನಿಮಾ ಆಗುತ್ತಾ?]

Kannada Actor Prem Kumar listen 180 stories but agreed one story

ಇನ್ನು ಸ್ಯಾಂಡಲ್ ವುಡ್ ನಲ್ಲಿ ಯಾವುದೇ ನಟ-ನಟಿಯರು ಬಹುಶಃ ಒಂದು ವರ್ಷದಲ್ಲಿ 180 ಕಥೆಗಳನ್ನು ಕೇಳಿದ ಉದಾಹರಣೆಗಳಿಲ್ಲ. ಆದ್ದರಿಂದ ಲವ್ಲಿ ಸ್ಟಾರ್ ಪ್ರೇಮ್ ಅವರು ಹೊಸ ದಾಖಲೆ ಸೃಷ್ಟಿಸಿದ್ದಾರೆ ಎಂದರೂ ತಪ್ಪಾಗಲ್ಲ.

ಇದೀಗ ಆಯ್ಕೆ ಮಾಡಿರುವ ಕಥೆ ಯಾವುದು?, ಕಥೆ ಹೇಳಿದ್ದು ಯಾರು?, ಚಿತ್ರ ಯಾವಾಗ ಶುರು ಆಗುತ್ತೆ?, ಎಂಬ ಎಲ್ಲಾ ಪ್ರಶ್ನೆಗಳಿಗೆ ಪ್ರೇಮ್ ಅವರು ಇನ್ನೂ ಉತ್ತರ ನೀಡಿಲ್ಲ. ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ.['ಚೌಕ'ದಿಂದ ಚಿರು ಹೋದ್ರು, ಚಿನ್ನಾರಿ ಮುತ್ತಾ ಬಂದ್ರು]

ಸದ್ಯಕ್ಕೆ 'ನೆನಪಿರಲಿ' ಪ್ರೇಮ್ ಅವರು ದ್ವಾರಕೀಶ್ ಅವರ 50 ಸಿನಿಮಾ 'ಚೌಕ'ದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಮುಂದಿನ ವಾರ ಇವರು ಅಭಿನಯಿಸಿರುವ 'ಮಸ್ತ್ ಮೊಹಬ್ಬತ್' ತೆರೆ ಕಾಣುತ್ತಿದೆ.

English summary
Kannada Actor Lovely star Prem since year of 2015 listen 180 stories but agreed only one story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada