»   » ಮತ್ತೊಂದು ತಮಿಳು ರೀಮೇಕ್ ನಲ್ಲಿ ನಟಿಸ್ತಾರಾ ಶರಣ್.?

ಮತ್ತೊಂದು ತಮಿಳು ರೀಮೇಕ್ ನಲ್ಲಿ ನಟಿಸ್ತಾರಾ ಶರಣ್.?

By: Suni
Subscribe to Filmibeat Kannada

ತಮಿಳು ನಟ ಶಿವಕಾರ್ತಿಕೇಯನ್ ಅವರ 'ವರುತೆಪಡಾದೆ ವಲಿಬರ ಸಂಗೋ' ಚಿತ್ರವನ್ನು ಕನ್ನಡಕ್ಕೆ 'ಅಧ್ಯಕ್ಷ' ಎಂದು ರೀಮೇಕ್ ಮಾಡಿ ಶರಣ್ ಅವರು ತಮ್ಮ ಅಭಿಮಾನಿಗಳ ಮನಗೆದ್ದರು. ಈ ಚಿತ್ರದಲ್ಲಿ ಚಿಕ್ಕಣ್ಣ-ಶರಣ್ ಕಾಂಬಿನೇಷನ್ ಅಭಿಮಾನಿಗಳಿಗೆ ಸಖತ್ ಹಿಡಿಸಿತು.

ತದನಂತರ ಮತ್ತೆ ಶಿವಕಾರ್ತಿಕೇಯನ್ ಅವರ 'ರಜಿನಿ ಮುರುಗನ್' ತಮಿಳು ಚಿತ್ರವನ್ನು ಕನ್ನಡಕ್ಕೆ 'ರಾಜ್ ವಿಷ್ಣು' ಎಂದಾಗಿಸಿದರು. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ಚಿತ್ರದಲ್ಲಿ ಮತ್ತೆ ಶರಣ್-ಚಿಕ್ಕಣ್ಣ ಜೋಡಿ ಮೋಡಿ ಮಾಡುತ್ತಿದೆ. ಜೊತೆಗೆ ಅತಿಥಿ ಪಾತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಮಿಂಚಿದ್ದಾರೆ.['ರಾಜ್-ವಿಷ್ಣು'ಗೆ ಮುರಳಿ ಕಡೆಯಿಂದ ಕೂಡ ಒಂದು ಸಲಾಮ್]

Kannada Actor Sharan for 'Naanum Rowdy Dhaan's kannada remake

ಅಂದಹಾಗೆ ಇದೀಗ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ ಕನ್ನಡದ ಕಾಮಿಡಿ ಕಿಂಗ್ ಶರಣ್ ಅವರು ಮತ್ತೊಂದು ಕಾಲಿವುಡ್ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್ನಲಾಗುತ್ತಿದೆ. ತಮಿಳು ನಟ ವಿಜಯ್ ಸೇತುಪತಿ ಮತ್ತು ನಟಿ ನಯನತಾರಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ನಾನುಮ್ ರೌಡಿ ಧಾನ್' ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದು, ಆ ಚಿತ್ರದಲ್ಲಿ ನಟ ಶರಣ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ.[ಶರಣ್ ರ 'ರಾಜ್-ವಿಷ್ಣು'ಗೆ ಮರಾಠಿ ಬೆಡಗಿ ಎಂಟ್ರಿ, ಯಾರೀ ಚೆಲುವೆ?]

Kannada Actor Sharan for 'Naanum Rowdy Dhaan's kannada remake

ತಮಿಳಿನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಆಕ್ಷನ್-ಕಟ್ ಹೇಳಿದ್ದ 'ನಾನುಮ್ ರೌಡಿ ಧಾನ್' ಎಂಬ ಕಾಮಿಡಿ-ರೋಮ್ಯಾಂಟಿಕ್ ಚಿತ್ರಕ್ಕೆ ನಟ ಕಮ್ ನಿರ್ಮಾಪಕ ಧನುಷ್ ಅವರು ಬಂಡವಾಳ ಹೂಡಿದ್ದರು.

ಇದೀಗ ಈ ತಮಿಳು ಚಿತ್ರದ ರೀಮೇಕ್ ಹಕ್ಕನ್ನು ಖರೀದಿ ಮಾಡಿರುವ ನಿರ್ಮಾಣ ಸಂಸ್ಥೆ ಶರಣ್ ಅವರನ್ನು ನಾಯಕನಾಗಿ ನಟಿಸಲು ಕೇಳಿಕೊಂಡಿದೆ. ಶರಣ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಎಲ್ಲವೂ ಅಧೀಕೃತ ಘೋಷಣೆಯಾಗುವವರೆಗೆ ಕಾದು ನೋಡಬೇಕಿದೆ.['ರಾಜ್-ವಿಷ್ಣು'ಗೆ ಸಲಾಂ ಹೊಡೆಯುತ್ತಿದ್ದಾರೆ ತುಂಡು ಹೈಕಳು]

Kannada Actor Sharan for 'Naanum Rowdy Dhaan's kannada remake

ಸದ್ಯಕ್ಕೆ ನಟ ಶರಣ್ ಅವರು ಪವನ್ ಕುಮಾರ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ಚಿತ್ರದ ಬಿಡುಗಡೆಗೆ ಕಾದಿದ್ದು, 'ರಾಜ್ ವಿಷ್ಣು' ಚಿತ್ರದ ನಂತರ ಶರಣ್ ಅವರು ಯಾವ ಸಿನಿಮಾ ಮಾಡುತ್ತಾರೆ ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಉತ್ತರ ದೊರೆತಂತಾಗಿದೆ. ಆದರೆ ಇನ್ನೂ ಅಧೀಕೃತ ಘೋಷಣೆ ಆಗದ ಕಾರಣ ಕೊಂಚ ಕಾಯಬೇಕಾಗಿದೆ.

English summary
Actor Sharan, who is currently shooting for 'Raj-Vishnu', a remake of Tamil Actor Shivakarthikeyan starrer 'Rajini Murugan'. Is likely to feature in the Kannada remake of another Tamil film 'Naanum Rowdy Dhaan'. The production house who has bought the Kannada rights of the film wants Sharan in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada