»   » ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ ರಾಕಿಂಗ್ ಸ್ಟಾರ್ ಯಶ್.!

ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ ರಾಕಿಂಗ್ ಸ್ಟಾರ್ ಯಶ್.!

Posted By:
Subscribe to Filmibeat Kannada
ಅಂತೂ ಇಂತೂ ಚುನಾವಣೆ ಪ್ರಚಾರಕ್ಕೆ ರೆಡಿ ಆದ್ರೂ ರಾಕಿಂಗ್ ಸ್ಟಾರ್ | Filmibeat Kannada

ಕರ್ನಾಟಕದಲ್ಲಿ ಚುನಾವಣಾ ಕಾವು ಏರುತ್ತಲೇ ಇದೆ. ಎಲೆಕ್ಷನ್ ಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇರುವಾಗ, ಚುನಾವಣಾ ಪ್ರಚಾರ ಕೂಡ ಬಿರುಸಿನಿಂದ ಸಾಗುತ್ತಿದೆ.

ಶತಾಯ-ಗತಾಯ ಅಧಿಕಾರಕ್ಕೆ ಬರಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಇನ್ನಿಲ್ಲದ ಸರ್ಕಸ್ ಆರಂಭಿಸಿದೆ. ಹೀಗಿರುವಾಗಲೇ, ಚುನಾವಣಾ ಪ್ರಚಾರಕ್ಕೆ ಧುಮುಕಲು ರಾಕಿಂಗ್ ಸ್ಟಾರ್ ಯಶ್ ಮನಸ್ಸು ಮಾಡಿದ್ದಾರೆ.

ಹಾಗಾದ್ರೆ, ನಟ ಯಶ್ ಯಾವ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾರೆ.? ಎಂಬ ಪ್ರಶ್ನೆಗೆ ಯಶ್ ಕಡೆಯಿಂದ ಬರುವ ಉತ್ತರ ''ಪಕ್ಷಕ್ಕಿಂತ ಅಭ್ಯರ್ಥಿ ಮುಖ್ಯ''. ಹೀಗಾಗಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗದೇ, ತಮಗೆ ಆತ್ಮೀಯವಾಗಿರುವ ರಾಜಕೀಯ ನಾಯಕರು ಹಾಗೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ನಟ ಯಶ್ ನಿರ್ಧರಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಯಶ್ ಬರಬೇಕಂದ್ರೆ ರಾಜಕಾರಣಿಗಳು 'ಈ' ಕಂಡೀಷನ್ ನ ಒಪ್ಪಿಕೊಳ್ಳಲೇಬೇಕು.!

Kannada Actor Yash to participate in Election campaign from May 2nd

ನಾಳೆಯಿಂದ ಒಂದು ವಾರ ಕಾಲ ವಿವಿಧ ಅಭ್ಯರ್ಥಿಗಳ ಪರವಾಗಿ, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಟ ಯಶ್ ಚುನಾವಣಾ ಪ್ರಚಾರಕ್ಕೆ ಸ್ಟಾರ್ ರಂಗು ತುಂಬಲಿದ್ದಾರೆ.

''ಬೆಂಗಳೂರಿನಲ್ಲಿ ಐದು ಲಕ್ಷ ಮರಗಳನ್ನು ನೆಡಬೇಕು ಅಂತಿದ್ದೀನಿ. ಇದಕ್ಕೆ ಯಾರ್ಯಾರು ಸಹಾಯ ಮಾಡುತ್ತಾರೋ, ಅವರ ಪರ ನಾನು ಪ್ರಚಾರ ಮಾಡುತ್ತೇನೆ'' ಎಂದು ಹಿಂದೊಮ್ಮೆ ನಟ ಯಶ್ ಹೇಳಿದ್ದರು. ಅಲ್ಲಿಗೆ, ಈ ಕಂಡೀಶನ್ ಗೆ ಒಪ್ಪಿಗೆ ಸೂಚಿರುವವರ ಪರ ಪ್ರಚಾರ ಮಾಡಲು ಯಶ್ ಒಪ್ಪಿಕೊಂಡಿರಬಹುದಾ.? ಈ ಪ್ರಶ್ನೆಗೆ ಸ್ವತಃ ಯಶ್ ರವರೇ ಉತ್ತರ ಕೊಡಬೇಕು.

ಅಂದ್ಹಾಗೆ, ಯಾವ್ಯಾವ ಪಕ್ಷದ ಯಾವ್ಯಾವ ಅಭ್ಯರ್ಥಿ ಪರ ಯಶ್ ಚುನಾವಣಾ ಪ್ರಚಾರ ಮಾಡ್ತಾರೆ ಅನ್ನೋ ಗುಟ್ಟನ್ನ ಯಶ್ ಇನ್ನೂ ಬಿಟ್ಟುಕೊಟ್ಟಿಲ್ಲ.

English summary
Kannada Actor Yash to participate in Election campaign in various constituencies from May 2nd. #KarnatakaAssemblyElections2018.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X