»   » ವೀಣಾ ಮಲಿಕ್ ರನ್ನು 'ಡರ್ಟಿ' ಮಾಡಿದ ಶ್ರೀನಿವಾಸಮೂರ್ತಿ

ವೀಣಾ ಮಲಿಕ್ ರನ್ನು 'ಡರ್ಟಿ' ಮಾಡಿದ ಶ್ರೀನಿವಾಸಮೂರ್ತಿ

Posted By:
Subscribe to Filmibeat Kannada
Srinivas Murthy
ಮುಹೂರ್ತಕ್ಕೂ ಸಾಕಷ್ಟು ಮೊದಲೇ ಸುದ್ದಿಯಾಗಿದ್ದ ಕನ್ನಡದ 'ಡರ್ಟಿ ಪಿಕ್ಚರ್,' ನಟಿ ವೀಣಾ ಮಲಿಕ್ ಆಗಮನದ ನಂತರವಂತೂ ಅಕ್ಷರಶಃ ಎಲ್ಲರ ಗಮನ ಸೆಳೆದಿದೆ. ವೀಣಾ ಮಲಿಕ್ ಆ ಚಿತ್ರದ ಫೋಟೋ ಶೂಟ್ ಗೆಂದು ಬೆಂಗಳೂರಿಗೆ ಬಂದಾಗಲೇ ಸಾಕಷ್ಟು ಜನರು ಬೆಚ್ಚಗಾಗಿದ್ದರು. ನಂತರ ಮುಹೂರ್ತಕ್ಕೆ ಬಂದಾಗ ಬಹಳಷ್ಟು ಮಂದಿ ನೋಡಿ ಕಣ್ತುಂಬಿಕೊಂಡರು.

ಈಗ ವಿಷಯ ಅದಲ್ಲ, ನಟ ಶ್ರೀನಿವಾಸಮೂರ್ತಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆಂದು ಈಗ ಎಲ್ಲೆಡೆಯಲ್ಲೂ ಗುಲ್ಲೋ ಗುಲ್ಲು! ಡರ್ಟಿ ಪಿಕ್ಚರ್, ಸಂಪೂರ್ಣ ನಾಯಕಿ ಪ್ರಧಾನ ಚಿತ್ರವಾದರೂ ಅವರೊಬ್ಬರೇ ಇಡೀ ಚಿತ್ರದಲ್ಲಿ ಇರುವುದಿಲ್ಲವಲ್ಲ. ಅದರಲ್ಲೊಂದು ಪ್ರಮುಖ ಪಾತ್ರಕ್ಕೆ ಹಿರಿಯ ನಟ ಶ್ರೀನಿವಾಸಮೂರ್ತಿ    ಆಯ್ಕೆಯಾಗಿದ್ದಾರೆ ಎಂಬುದು ಲೇಟೆಸ್ಟ್ ನ್ಯೂಸ್.

ಅಷ್ಟೇ ಅಲ್ಲ, ಸಿಲ್ಕ್ ಸ್ಮಿತಾ ಪಾತ್ರದ ನಟಿ ವೀಣಾ ಮಲಿಕ್ ಅವರನ್ನು ವೇಶ್ಯಾವಾಟಿಕೆಗೆ ತಂದು ನಿಲ್ಲಿಸುವ 'ಪಿಂಪ್' ಪಾತ್ರ ಅವರದಂತೆ. ಜೊತೆಗೆ ಅವರ ತಂಗಿಯನ್ನೂ ಅದೇ ವೃತ್ತಿಗೆ ತಳ್ಳುವವವರೂ ಇದೇ ಶ್ರೀನಿವಾಸಮೂರ್ತಿಯಂತೆ. ಅಲ್ಲಿಗೆ ಒಂಥರಾ ಖಳನಾಯಕನ ಪಾತ್ರದಂತೆ ಎನ್ನಬಹುದು. ಅದನ್ನೇ 'ಮನೆಹಾಳನ' ಪಾತ್ರ ಅಂದರೂ ತೊಂದರೆಯಿಲ್ಲ.

ಎಂಥಹ ಪಾತ್ರವನ್ನಾದರೂ ಆವಾಹನೆ ಮಾಡಿಕೊಂಡು ಅಮೋಘವಾಗಿ ನಟಿಸಬಲ್ಲ ಹಿರಿಯ ಕಲಾವಿದ ಶ್ರೀನಿವಾಸಮೂರ್ತಿ, ಈ ಪಾತ್ರಕ್ಕೆ ನ್ಯಾಯಸಲ್ಲಿಸುವುದು ಖಂಡಿತ. ಆದರೆ ಅವರನ್ನು ಈ ಮೊದಲು 'ಕವಿರತ್ನ ಕಾಳಿದಾಸ' ಚಿತ್ರದ ಭೋಜರಾಜನಂತಹ ಅನನ್ಯ ಪಾತ್ರಗಳಲ್ಲಿ ನೋಡಿರುವ ಪ್ರೇಕ್ಷಕರು ಇದನ್ನು ಇಷ್ಟಪಡಬಹುದೇ ಎಂಬುದು ಹಲವರ ಪ್ರಶ್ನೆ!

ಮುಹೂರ್ತ ಆಚರಿಸಿಕೊಂಡು ಇದೀಗ ಚಿತ್ರೀಕರಣದ ಹಂತದಲ್ಲಿರುವ ಡರ್ಟಿ ಪಿಕ್ಚರ್, ಕೇವಲ ವೀಣಾ ಮಲಿಕ್ ಹೆಸರಿನಿಂದ ಮಾತ್ರವಲ್ಲದೇ ಅದರಲ್ಲಿ ನಟಿಸಲಿರುವ ಪ್ರತಿಯೊಬ್ಬರನ್ನೂ ಸುದ್ದಿಯ ತೆಕ್ಕೆಗೆ ಸೆಳೆಯುತ್ತಿದೆ. ಅದರಲ್ಲೂ ಪಿಂಪ್ ಪಾತ್ರವನ್ನು ನಿರ್ವಹಿಸಲಿರುವ ಶ್ರೀನಿವಾಸಮೂರ್ತಿ ಅವರೀಗ ಭಾರೀ ಸುದ್ದಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ಭಾರೀ ಅಲೆಯನ್ನೇ ಎಬ್ಬಿಸಿದ್ದ ವಿದ್ಯಾ ಬಾಲನ್ ಚಿತ್ರ 'ದಿ ಡರ್ಟಿ ಪಿಕ್ಚರ್', ಕನ್ನಡದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುವುದೋ ಕಾದುನೋಡಬೇಕು. ಬಾಲಿವುಡ್ ನಲ್ಲಿ ಈ ಚಿತ್ರದ ಅಭಿನಯಕ್ಕೆ ಶ್ರೇಷ್ಠನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ ವಿದ್ಯಾ ಬಾಲನ್. ಕನ್ನಡದ ಈ ಚಿತ್ರಕ್ಕೆ ಪಾಕಿಸ್ತಾನಿ ನಟಿ ವೀಣಾ ಮಲಿಕ್ ಪ್ರಶಸ್ತಿ ಪಡೆಯಬಹುದೇ ಎಂಬುದು ಸದ್ಯದ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)

English summary
Senior actor Srinivas Murthy Acts in upcoming Kannada movie 'Dirty Picture'. Actress Veena Malik is in lead role and Srinivas Murthy to perform important supporting character in this. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada