»   » ಈ ಸ್ಟಾರುಗಳಿಗೆ ಕಿರುತೆರೆ ಚಿನ್ನದ ಮೊಟ್ಟೆ ಇಡುವ ಕೋಳಿ

ಈ ಸ್ಟಾರುಗಳಿಗೆ ಕಿರುತೆರೆ ಚಿನ್ನದ ಮೊಟ್ಟೆ ಇಡುವ ಕೋಳಿ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ನಲ್ಲಿ ಸ್ಟಾರ್ಗಳು ಕಿರುತೆರೆಯಲ್ಲಿ ಮಿಂಚ್ತಾರೆ. ಅವರ ಸಿನಿಮಾಗಳು ಮಾತ್ರ ಆಯಾ ವಾಹಿನಿಗಳಿಗೆ ಸೇಲಾಗ್ತವೆ. ರಮೇಶ್ ಅರವಿಂದ್, ರವಿಚಂದ್ರನ್, ಸುಂಟರಗಾಳಿ ರಕ್ಷಿತಾ ಪ್ರೇಮ್, ಮಠ ಗುರುಪ್ರಸಾದ್ ರಂತಹಾ ದಿಗ್ಗಜರೇ ಕಿರುತೆರೆಯಲ್ಲಿ ಮುಲಾಜಿಲ್ಲದೆ ಶೋಗಳಲ್ಲಿ ಕಾಣಿಸಿಕೊಳ್ತಿದ್ದಾರೆ.

ಇನ್ನು ಕೆಲವರಿಗೆ ಬೆಳ್ಳಿತೆರೆಯಲ್ಲಿ ಅವಕಾಶಗಳಿಲ್ಲ ಅನ್ನೋ ಕಾರಣಕ್ಕೆ ಕೆಲವು ನಟರು ಕಿರುತೆರೆಗೆ ಕಾಲಿಟ್ಟಿದ್ದಾರೆ. ತೆರೆಮರೆಗೆ ಸರೀತಾ ಇರೋ ಹಲವು ನಟ ನಟಿಯರಿಗೆ ಕಿರುತೆರೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಸಿನಿಮಾಗಳಿಲ್ಲದಿದ್ರೇನು ತಮ್ಮ ಸ್ಟಾರ್ವ್ಯಾಲ್ಯೂಗೆ ತಕ್ಕಂತೆ ಶೋಗಳಿಂದ ಹಣ ಪಡೀತಿದ್ದಾರೆ.

ಅಂದಮೇಲೆ ಸಿನಿಮಾದಿಂದ ಕಿರುತೆರೆಗೆ ಎಂಟ್ರಿಕೊಟ್ಟಿರೋ ನಟನಟಿಯರು ಒಳ್ಳೆಯ ಸಂಭಾವನೆ ಸಿಗದೇ ಕಿರುತೆರೆಗೆ ಎಂಟ್ರಿಕೊಡೋಕೆ ಸಾಧ್ಯವಿಲ್ಲ. ಹಾಗಾದ್ರೆ ಈ ಕಿರುತೆರೆಯಲ್ಲಿ ಮಿಂಚ್ತಿರೋ ಕ್ರೇಜಿ ಸ್ಟಾರ್ ರವಿಮಾಮ, ಕ್ರೇಜಿ ಕ್ವೀನ್ ರಕ್ಷಿತಾ, ಸೃಜನ್ ಲೋಕೇಶ್, ಅಕುಲ್ ಬಾಲಾಜಿಯಂತಹಾ ನಟರ ಸಂಭಾವನೆ ಎಷ್ಟು ಅನ್ನೋ ಡೀಟೈಲ್ಸ್ ಇಲ್ಲಿದೆ, ಸ್ಲೈಡ್ ತಿರುಗಿಸ್ತಾ ಹೋಗಿ.. [ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕರ ಸಂಭಾವನೆ]

ಅಚ್ಚ ಕನ್ನಡ ಮಾತಾಡೋ ಅರುಣ್ ಸಾಗರ್

ಮಾತಿನ ಮೋಡಿಗಾರ ಅರುಣ್ ಸಾಗರ್ ಸ್ಯಾಂಡಲ್ವುಡ್ನ ಬುಹುಬೇಡಿಕೆಯ ಮಾತುಗಾರ. ಅರೆಬರೆ ಕನ್ನಡದಲ್ಲಿ ಮಾತ್ನಾಡಿ ನಗಿಸೋ ಆಂಕರ್ಗಳಿಗಿಂತ ಅರ್ಥಪೂರ್ಣವಾಗಿ ಕನ್ನಡದ ಮಾತನಾಡೋ ಅರುಣ್ ಸಾಗರ್ ನಟನೆಯಲ್ಲೂ ಇಷ್ಟವಾಗ್ತಾರೆ ಹಾಗಾಗೀನೇ ಅರುಣ್ ಸಾಗರ್ ಸಂಭಾವನೆ ಒಂದೂವರೆಯಿಂದ ಎರಡು ಲಕ್ಷ.

ಪಟಪಟ ಪಟಾಕಿ ಅನುಶ್ರೀ

ಪಟ ಪಟಾಂತ ಮಾತಿನ ಪಟಾಕಿ ಸಿಡಿಸೋ ಮಾತುಗಾತಿ ಅನುಶ್ರೀ ಸಂಭಾವನೆ ಕೂಡ ಈಗ ಸಿಕ್ಕಾಪಟ್ಟೆ ಇದೆ. ಒಂದು ದಿನದ ರಿಯಾಲಿಟಿ ಶೋಗೆ ಅಥವಾ ಆಂಕರಿಂಗ್ಗೆ ಅನುಶ್ರಿ ಪಡೆಯೋ ಸಂಭಾವನೆ 50ರಿಂದ75 ಸಾವಿರ.

ರವಿಚಂದ್ರನ್ ಸಂಭಾವನೆ ಎಷ್ಟು ಗೊತ್ತಾ?

ಕಲರ್ಸ್ ಕನ್ನಡಕ್ಕೆ ತನ್ನ ಅಭಿಮಾನಿಗಳನ್ನ ಸೆಳೀತಾ ಇರೋ ಕ್ರೇಜಿ ಸ್ಟಾರ್ ರವಿಮಾಮ ಡಾನ್ಸಿಂಗ್ ಸ್ಟಾರ್ ಒಂದು ಶೋ ಮುಗಿಯೋದ್ರೊಳಗೆ ಜೇಬಿಗಿಳಿಸಿರೋ ಹಣ ಹೆಚ್ಚೂ ಕಡಿಮೆ ಒಂದೂವರೆ ಕೋಟಿ. ಒಂದು ದಿನದ ರವಿಮಾಮನ ಸಂಭಾವನೆ 3ರಿಂದ 5 ಲಕ್ಷ ಅಂತಿದೆ ಕಲರ್ಸ್ ಕನ್ನಡ ಮೂಲ.

ಮಜಾ ಉಡಾಯಿಸ್ತಿದ್ದಾರೆ ಸೃಜನ್ ಲೋಕೇಶ್

ಮಜಾ ಟಾಕೀಸ್ ಮೂಲಕ ಮಜಾ ಉಡಾಯಿಸ್ತಾ ಇರೋ ಸೃಜನ್ ಲೋಕೇಶ್ ಕೂಡ ಸಂಭಾವನೆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸೃಜನ್ ಲೋಕೇಶ್ ಮಜಾ ಟಾಕೀಸ್ನಂತಹಾ ಶೋ ಒಂದಕ್ಕೆ ದಿನ ಒಂದಕ್ಕೆ ಪಡೆಯೋ ಸಂಭಾವನೆ ಒಂದೂವರೆ ಲಕ್ಷ.

ಸ್ಟಾರ್ ಆಂಕರ್ ಅಕುಲ್ ಬಾಲಾಜಿ

ಅಕುಲ್ ಬಾಲಾಜಿ ರವಿಮಾಮನ ಜುಗಲ್ಬಂದಿ ನೋಡಿ ಕಲರ್ಸ್ ಕನ್ನಡ ಪ್ರೇಕ್ಷಕರು ಸಖತ್ ಖುಷಿಪಡ್ತಿದ್ದಾರೆ. ಅಕುಲ್ ಬಾಲಾಜಿ ಸಿನಿಮಾ ರಿಲೀಸಾಗುತ್ತೋ ಶೂಟಾಗುತ್ತೋ ಬಿಡುತ್ತೋ ಒಂದು ದಿನಕ್ಕೆ ಒಂದೂವರೆ ಲಕ್ಷ ಸಂಭಾವನೆ ಪಡೀತಾ ಹಾಯಾಗಿದ್ದಾರೆ.

ಪುಟಾಣಿ ಪಂಟ್ರುಗಳ ಜೊತೆ ರಕ್ಷಿತಾ

ಕ್ರೇಜಿ ಸ್ಟಾರ್ ರವಿಮಾಮ ಕಲರ್ಸ್ ಕನ್ನಡದಲ್ಲಿ ಕಮಾಲ್ ಮಾಡ್ತಿದ್ರೆ. ಕ್ರೇಜಿ ಕ್ವೀನ್ ರಕ್ಷಿತಾ ಪುಟಾಣಿ ಪಂಟ್ರುಗಳ ಡಾನ್ಸ್ಗೆ ಮಾರ್ಕ್ಸ್ ಕೊಡ್ತಾ ಸುವರ್ಣಗೆ ಸಾಥ್ ಕೊಡ್ತಿದ್ದಾರೆ. ಕ್ರೇಜಿ ಕ್ವೀನ್ ರಕ್ಷಿತಾ ಒಂದು ದಿನಕ್ಕೆ ಪಡೆಯೋ ಸಂಭಾವನೆ ಎರಡರಿಂದ ಎರಡು ಕಾಲು ಲಕ್ಷ.

ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್

ಡೈರೆಕ್ಟರ್ಸ್ ಸ್ಪೆಷಲ್ ನಂತ್ರ ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್ ಪುಟಾಣಿಪಂಟ್ರು ಶೋನಲ್ಲಿ ಮತ್ತೊಬ್ಬ ಜಡ್ಜ್ ಆಗಿ ಸುವರ್ಣ ವಾಹಿನಿಯಲ್ಲಿ ವೀಕೆಂಡ್ನಲ್ಲಿ ಪ್ರೇಕ್ಷಕರಿಗೆ ಥ್ರಿಲ್ ಕೊಡ್ತಿದ್ದಾರೆ. ಗುರುಪ್ರಸಾದ್ರ ಒಂದು ದಿನದ ಸಂಭಾವನೆ ಒಂದೂಕಾಲು ಲಕ್ಷದಿಂದ ಒಂದುವರೆ ಲಕ್ಷ ಅನ್ನುತ್ತಿದೆ ಸುವರ್ಣ ಮೂಲ.

ಕಲರ್ಫುಲ್ ಸುವರ್ಣಾವಕಾಶ

ಹೇಳಿ ಕೇಳಿ ಇಂತಹಾ ಕಲರ್ಫುಲ್ ಸುವರ್ಣಾವಕಾಶ ಬಿಟ್ಟು ಯಾರಾದ್ರೂ ಬಿಸಿಲಲ್ಲಿ ಬೇಯುತ್ತಾ.. ಮಳೆಯಲ್ಲಿ ನೆನೆಯುತ್ತಾ ಶೂಟಿಂಗ್ ಮಾಡೋಕೆ ಇಷ್ಟಪಡೋದುಂಟಾ. ಅದೂ ಜೇಬುತುಂಬಾ ದುಡ್ಡೂ ಸಿಗೋವಾಗ ಅದಕ್ಕೆ ಪ್ರೊಡ್ಯೂಸರ್ಸ್ ಕೂಗಿಗೆ ಕ್ಯಾರೇ ಅಂತಿಲ್ಲ ಈ ಸ್ಟಾರ್ಗಳು.

English summary
Kannada TV reality shows are like goose laying golden egg to these Kannada film super stars. Many of these artists, who are judging or anchoring reality shows are getting hefty salary on daily basis. Ravichandran, Guruprasad, Arun Sagar, Akul Balaji, Rakshitha are few among them. ಈ ಸ್ಟಾರುಗಳಿಗೆ ಕಿರುತೆರೆ ಚಿನ್ನದ ಮೊಟ್ಟೆ ಇಡುವ ಕೋಳಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada