»   » 'ಬಾಹುಬಲಿ' ವಿತರಣಾ ಹಕ್ಕಿನ ಹಿಂದಿದೆ ಮಾಸ್ಟರ್ ಪ್ಲಾನ್!

'ಬಾಹುಬಲಿ' ವಿತರಣಾ ಹಕ್ಕಿನ ಹಿಂದಿದೆ ಮಾಸ್ಟರ್ ಪ್ಲಾನ್!

Posted By:
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಕರ್ನಾಟಕ ವಲಯದ ವಿತರಣಾ ಹಕ್ಕು ಬರೋಬ್ಬರಿ 20 ಕೋಟಿ ರೂಪಾಯಿಗೆ ಬಿಕರಿ ಆಗಿದೆ ಅನ್ನುವ ಸಂಗತಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ.

ಈಗ ಆರ್.ಎಸ್.ಪ್ರೊಡಕ್ಷನ್ಸ್ ಬ್ಯಾನರ್ ನಡಿ ಇಷ್ಟು ದೊಡ್ಡ ಅಮೌಂಟ್ ನೀಡಿರುವ ಕನ್ನಡ ಚಿತ್ರಗಳ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

kannada-movie-trailers-are-lined-up-to-release-with-baahubali

ಕರ್ನಾಟಕದ ಮೂಲೆ ಮೂಲೆಯಲ್ಲೂ 200-300 ಸ್ಕ್ರೀನ್ ಗಳಲ್ಲಿ ಬಿಡುಗಡೆ ಆಗುತ್ತಿರುವ 'ಬಾಹುಬಲಿ' ಚಿತ್ರದ ಜೊತೆಗೆ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ ಕನ್ನಡ ಚಿತ್ರಗಳಾದ 'ಭರ್ಜರಿ', 'ದನ ಕಾಯೋನು' ಮತ್ತು 'ಜೆಸ್ಸಿ' ಚಿತ್ರಗಳ ಫಸ್ಟ್ ಲುಕ್ ಟೀಸರ್ ಗಳನ್ನ ಬಿಡುಗಡೆ ಮಾಡುವ ತಯಾರಿ ನಡೆಸುತ್ತಿದ್ದಾರೆ. [ಕರ್ನಾಟಕದಲ್ಲೂ ಇತಿಹಾಸ ನಿರ್ಮಿಸಿದ 'ಬಾಹುಬಲಿ']

ಅಲ್ಲಿಗೆ, ಪರಭಾಷಾ ಚಿತ್ರವನ್ನ ದುಂಬಾಲು ಬಿದ್ದು ನೋಡುವುದಕ್ಕೆ ಬರುವ ಪ್ರೇಕ್ಷಕರಿಗೆ ಕನ್ನಡ ಚಿತ್ರಗಳ ಪ್ರದರ್ಶನ ಕೂಡ ಆಗಲಿವೆ. 'ಬಾಹುಬಲಿ' ಚಿತ್ರದ ಜೊತೆಗೆ ಈ ಮೂರು ಚಿತ್ರಗಳ ಟೀಸರ್ ರಿಲೀಸ್ ಆದ್ರೆ, ಅದಕ್ಕಿಂತ 'ಭರ್ಜರಿ' ಪ್ರಮೋಷನ್ ಬೇಕಾಗಿಲ್ಲ ಅನ್ನೋದು ಆರ್.ಎಸ್.ಪ್ರೊಡಕ್ಷನ್ಸ್ ಅಭಿಪ್ರಾಯ.

kannada-movie-trailers-are-lined-up-to-release-with-baahubali

ಈ ನಡುವೆ ದುನಿಯಾ ವಿಜಯ್ ಅಭಿನಯದ 'RX ಸೂರಿ' ಚಿತ್ರದ ಟ್ರೈಲರ್ ಕೂಡ 'ಬಾಹುಬಲಿ' ಚಿತ್ರದ ಜೊತೆಗೆ ಬಿಡುಗಡೆ ಮಾಡುವ ಕುರಿತು ನಿರ್ಮಾಪಕ ಸುರೇಶ್, ಆರ್.ಎಸ್.ಪ್ರೊಡಕ್ಷನ್ಸ್ ಜೊತೆ ಮಾತುಕತೆ ನಡೆಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದ್ರೆ, 'ಬಾಹುಬಲಿ' ಜೊತೆಗೆ ದುನಿಯಾ ವಿಜಯ್ ನಟನೆಯ 'RX ಸೂರಿ', ಧ್ರುವ ಸರ್ಜಾ ಅಭಿನಯದ 'ಭರ್ಜರಿ', ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಮತ್ತು ಯೋಗರಾಜ್ ಭಟ್ ಸಾರಥ್ಯದ 'ದನ ಕಾಯೋನು' ಚಿತ್ರದ ದರ್ಶನ ಪ್ರೇಕ್ಷಕರಿಗೆ ಆಗಲಿದೆ.

English summary
SS Rajamouli directorial 'Baahubali The Beginning's is all set to release on July 10th. The distribution rights for Karnataka region of 'Baahubali' is acquired by R.S.Productions. Along with 'Baahubali', R.S.Productions has decided to launch 'Dana Kayonu', 'Jessie' and 'Bharjari' trailers.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada