ಆಂಕರ್ ಮಾತ್ರವಲ್ಲ ಚಾನಲ್ ಬದಲಿಸಿದ 'ಕನ್ನಡದ ಕೋಟ್ಯಧಿಪತಿ'?
Recommended Video

ಕನ್ನಡದ ಕೋಟ್ಯಧಿಪತಿ ಶೋ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗೋದಿಲ್ಲ
ಕನ್ನಡದ ಕೋಟ್ಯಧಿಪತಿ ಕಳೆದ ಮೂರು ಆವೃತ್ತಿಯೂ ಸ್ಟಾರ್ ಸುವರ್ಣ ವಾಹಿನಿಲ್ಲಿ ಪ್ರಸಾರವಾಗಿತ್ತು. ಇದೀಗ, ನಾಲ್ಕನೇ ಸೀಸನ್ ಬರ್ತಿದ್ದು, ಈ ಸಲ ಚಾನಲ್ ಬದಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಸದ್ಯದ ಮಾಹಿತಿ ಪ್ರಕಾರ ಸ್ಟಾರ್ ಸುವರ್ಣ ವಾಹಿನಿಯಿಂದ ಕಲರ್ಸ್ ಕನ್ನಡ ವಾಹಿನಿಗೆ ಕನ್ನಡದ ಕೋಟ್ಯಧಿಪತಿ ಶಿಫ್ಟ್ ಆಗಿದೆ. ದಿಢೀರ್ ಅಂತ ಈ ಬದಲಾವಣೆ ಯಾಕೆ ಎಂಬ ಕಾರಣ ಬಹಿರಂಗವಾಗಿಲ್ಲ. ಆದ್ರೆ, ಸಿಕ್ಕ ಅವಕಾಶವನ್ನ ಎರಡು ಕೈಯಿಂದ ಕಲರ್ಸ್ ಕನ್ನಡ ಅಪ್ಪಿಕೊಂಡಿದೆ ಅಂದ್ರೆ ತಪ್ಪಾಗಲ್ಲ.
ಕೇವಲ ಚಾನಲ್ ಮಾತ್ರವಲ್ಲ, ಕಾರ್ಯಕ್ರಮದ ನಿರೂಪಕರೂ ಕೂಡ ಬದಲಾಗಿದ್ದಾರೆ. ಹೌದು, ಕಳೆದ ಆವೃತ್ತಿಯಲ್ಲಿ ರಮೇಶ್ ಅರವಿಂದ್ ನಿರೂಪಣೆ ಮಾಡಿದ್ದರು. ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂಟ್ರಿಯಾಗಿದ್ದಾರೆ.

ಈಗಾಗಲೇ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸ ಚಾನಲ್, ಹೊಸ ಆಂಕರ್ ಜೊತೆ ಬರ್ತಿರುವ ಈ ಶೋ ಯಾವಾಗ ಆರಂಭ ಎಂಬುದು ಕುತೂಹಲ ಮೂಡಿಸಿದ್ದು, ನಿರೀಕ್ಷೆ ಕೂಡ ಹೆಚ್ಚಾಗಿದೆ.
More from Filmibeat
English summary
Kannada actor Puneeth rajkumar back on with Kannadada Kotyadhipati season 4. this time not in star suvarna, show will telecasting in colors kannada.


Click it and Unblock the Notifications











