For Quick Alerts
  ALLOW NOTIFICATIONS  
  For Daily Alerts

  ಸಪ್ತಮಿ ಗೌಡಗೆ ಫುಲ್ ಡಿಮ್ಯಾಂಡ್: 'ಕಾಳಿ' ಬಳಿಕ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್?

  |

  ಈಗ ಸ್ಯಾಂಡಲ್‌ವುಡ್‌ನ ಸೆನ್ಸೇಷನ್ ಸಪ್ತಮಿ ಗೌಡ. 'ಕಾಂತಾರ' ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು, ಸಿನಿಮಾ ಮಂದಿಗೆ ಡಿಮ್ಯಾಂಡ್ ಹೆಚ್ಚಾಗಿದೆ ಅನ್ನೋದು ಕನ್ನಡಚಿತ್ರರಂಗದಲ್ಲಿ ಹರಿದಾಡುತ್ತಿರೋ ಸುದ್ದಿ.

  'ಕಾಂತಾರ' ವಿಶ್ವದಾದ್ಯಂತ ಸದ್ದು ಮಾಡಿದ ಬಳಿಕ ಸಪ್ತಮಿ ಗೌಡ ಸಿನಿ ಜರ್ನಿ ಬೇರೆ ದಿಕ್ಕಿಗೆ ಸಾಗುವ ಎಲ್ಲಾ ಕ್ಷಣಗಳು ಕಾಣುತ್ತಿದೆ. ಪಕ್ಕಾ ಡಿಗ್ಲಾಮರ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ಸಪ್ತಮಿ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

  ಅಲ್ಲು ಅರ್ಜುನ್ 'ಪುಷ್ಪ' ಹಿಂದಿಕ್ಕಿತಾ 'ಕಾಂತಾರ'? ಕನ್ನಡ, ಹಿಂದಿ, ತೆಲುಗಿನಲ್ಲಿ ಬಂಪರ್ ಕಲೆಕ್ಷನ್!ಅಲ್ಲು ಅರ್ಜುನ್ 'ಪುಷ್ಪ' ಹಿಂದಿಕ್ಕಿತಾ 'ಕಾಂತಾರ'? ಕನ್ನಡ, ಹಿಂದಿ, ತೆಲುಗಿನಲ್ಲಿ ಬಂಪರ್ ಕಲೆಕ್ಷನ್!

  ಮೆಗಾ ಬ್ಲಾಕ್‌ಬಸ್ಟರ್ ಕೊಟ್ಟ ಸಪ್ತಮಿ ಗೌಡ ಮುಂದಿನ ಸಿನಿಮಾ ಬಗ್ಗೆ ಕುತೂಹಲವಿತ್ತು. ಅದಕ್ಕೆ ಕೆಲವು ದಿನಗಳ ಹಿಂದೆನೇ ತೆರೆಬಿದ್ದಿತ್ತು. ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇನ್ನೊಂದು ರಗಡ್ ಪಾತ್ರದಲ್ಲಿ ಈ ನಟಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

  ಮತ್ತೊಂದು ಸಿನಿಮಾಗೆ ಸಪ್ತಮಿ ಗ್ರೀನ್ ಸಿಗ್ನಲ್?

  ಮತ್ತೊಂದು ಸಿನಿಮಾಗೆ ಸಪ್ತಮಿ ಗ್ರೀನ್ ಸಿಗ್ನಲ್?

  ಸಪ್ತಮಿ ಗೌಡಗೆ ಸ್ಯಾಂಡಲ್‌ವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿರೋದು ನಿಜ. 'ಕಾಂತಾರ' ಸಿನಿಮಾದಲ್ಲಿ ಅದ್ಭುತ ಪರ್ಫಾಮೆನ್ಸ್ ನೀಡಿದ ಬಳಿಕ ಈ ನಟಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ದುಪ್ಪಟ್ಟಾಗಿದೆ. ಸಿನಿಮಾ ಮಂದಿ ತಮ್ಮ ಸಿನಿಮಾಗೆ ಸಪ್ತಮಿಗೌಡ ಆಯ್ಕೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ ಅನ್ನೋ ಮಾತು ಹರಿದಾಡುತ್ತಿದೆ. ಗಾಂಧಿನಗರದಲ್ಲಿ ಹರಿದಾಡುತ್ತಿರೋ ಸುದ್ದಿ ಪ್ರಕಾರ, 'ಕಾಳಿ'ಗೂ ಮುನ್ನ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದುವೇ 'ಉತ್ತರಕಾಂಡ'.

  'ಉತ್ತರಕಾಂಡ'ದಲ್ಲಿ ಸಪ್ತಮಿ ಗೌಡ

  'ಉತ್ತರಕಾಂಡ'ದಲ್ಲಿ ಸಪ್ತಮಿ ಗೌಡ

  'ಉತ್ತರ ಕಾಂಡ' ಸ್ಯಾಂಡಲ್‌ವುಡ್‌ನ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ. ಡಾಲಿ ಧನಂಜಯ್ ಹಾಗೂ ರಮ್ಯಾ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಮೊದಲ ಸಿನಿಮಾವಿದು. ಅಲ್ಲದೆ ಮೋಹಕತಾರೆ ಕಮ್‌ಬ್ಯಾಕ್ ಮಾಡಿರುವ ಸಿನಿಮಾ ಆಗಿರೋದ್ರಿಂದ ನಿರೀಕ್ಷೆ ಸಹಜವಾಗಿಯೇ ಹೆಚ್ಚಿದೆ. ಇದರ ಜೊತೆಗೆ ರಮ್ಯಾ ಜೊತೆ ಸಪ್ತಮಿ ಗೌಡ ಕೂಡ ನಟಿಸುತ್ತಿದ್ದಾರೆ ಅನ್ನೋ ಮಾತು ಸಿನಿಪ್ರಿಯರಿಗೆ ಮತ್ತಷ್ಟು ಕಿಕ್ ಕೊಟ್ಟಿದೆ. ಇದರ ಜೊತೆಗೆನೇ 'ಉತ್ತರಕಾಂಡ'ದಲ್ಲೂ ಸಪ್ತಮಿ ಗೌಡ ರಗಡ್ ರೋಲ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರಾ? ಅನ್ನೋ ಕುತೂಹಲ ಕೂಡ ದುಪ್ಪಟ್ಟಾಗಿದೆ.

  'ಹೆಡ್‌ಬಿಷ್' ಪ್ರಚಾರದಲ್ಲಿ ಸಪ್ತಮಿ

  'ಹೆಡ್‌ಬಿಷ್' ಪ್ರಚಾರದಲ್ಲಿ ಸಪ್ತಮಿ

  'ಉತ್ತರಕಾಂಡ' ಸಿನಿಮಾ ಸಪ್ತಮಿ ನಟಿಸುತ್ತಾರೆ ಅಂತ ಹರಿದಾಡುತ್ತಿರುವ ಸುದ್ದಿ ಸಿನಿಮಾ ಮಂದಿಗೆ ಅಚ್ಚರಿ ಅಂತೇನು ಅನಿಸಿಲ್ಲ. ಯಾಕಂದ್ರೆ, 'ಹೆಡ್‌ಬುಷ್' ಬಿಡುಗಡೆಗೂ ಮುನ್ನ ದಾವಣಗೆರೆಯಲ್ಲಿ ಟ್ರೈಲರ್ ಲಾಂಚ್ ನಡೆದಿತ್ತು. ಈ ವೇಳೆ ಧನಂಜಯ್ ಜೊತೆ ರಮ್ಯಾ, ಸಪ್ತಮಿ ಗೌಡ ಹಾಗೂ ಕೆಆರ್‌ಜಿ ಸ್ಡುಡಿಯೋದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಮ್‌ ಕೂಡ ಭಾಗವಹಿಸಿದ್ದರು. ಈ ವೇಳೆನೇ 'ಉತ್ತರಕಾಂಡ' ಸಿನಿಮಾದಲ್ಲಿ ನಟಿಸಬೇಕು ಅನ್ನೋ ಮಾತುಕತೆ ಕೂಡ ನಡೆದಿತ್ತು ಅನ್ನೋ ಗುಸು ಗುಸು ಇದೆ.

  4ನೇ ಸಿನಿಮಾಗೆ ಜೈ ಎಂದ ಸಪ್ತಮಿ

  4ನೇ ಸಿನಿಮಾಗೆ ಜೈ ಎಂದ ಸಪ್ತಮಿ

  'ಉತ್ತರಕಾಂಡ' ಸಪ್ತಮಿ ಗೌಡ ಅಭಿನಯದ 3ನೇ ಸಿನಿಮಾ ಅಥವಾ 4ನೇ ಸಿನಿಮಾ ಇರಹುದು. ದುನಿಯಾ ಸೂರಿ ನಿರ್ದೇಶನದ 'ಪಾಪ್‌ ಕಾರ್ನ್ ಮಂಕಿ ಟೈಗರ್' ಸಪ್ತಮಿ ಗೌಡ ಅಭಿನಯದ ಮೊದಲ ಸಿನಿಮಾ. 'ಕಾಂತರ' ಎರಡನೇ ಸಿನಿಮಾ. ಹಾಗೇ 3ನೇ ಸಿನಿಮಾ 'ಉತ್ತರಕಾಂಡ' ಆದರೆ, 'ಕಾಳಿ' 4ನೇ ಸಿನಿಮಾ ಆಗಲಿದೆ. ಒಟ್ನಲ್ಲಿ 'ಕಾಂತಾರ' ಬಳಿಕ ಸಪ್ತಮಿ ಗೌಡ ಸ್ಯಾಂಡಲ್‌ವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿರೋದಂತೂ ಸತ್ಯ.

  ಕರ್ನಾಟಕದಲ್ಲಿ ಮತ್ತೊಂದು ದಾಖಲೆ ಬರೆದ 'ಕಾಂತಾರ': ಇದೂವರೆಗೂ ಸೇಲ್ ಆದ ಟಿಕೆಟ್ ಎಷ್ಟು?ಕರ್ನಾಟಕದಲ್ಲಿ ಮತ್ತೊಂದು ದಾಖಲೆ ಬರೆದ 'ಕಾಂತಾರ': ಇದೂವರೆಗೂ ಸೇಲ್ ಆದ ಟಿಕೆಟ್ ಎಷ್ಟು?

  English summary
  Kantara Actress Sapthami Gowda to Act In KRG Studio's New Movie Uttarakanda, Know More.
  Friday, November 11, 2022, 15:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X