twitter
    For Quick Alerts
    ALLOW NOTIFICATIONS  
    For Daily Alerts

    'ಜೇಮ್ಸ್' ಬಿಡುಗಡೆ ಹಿನ್ನಲೆ ಮಾರ್ಚ್ 17 ರಿಂದ 23ರವರೆಗೆ ಪರಭಾಷೆ ಸಿನಿಮಾ ಬಂದ್: ಕರೆ ನೀಡಿದ್ದು ಯಾರು?

    |

    'ಜೇಮ್ಸ್' ಕನ್ನಡ ಚಿತ್ರರಂಗದಲ್ಲಿಯೇ ಬಹುನಿರೀಕ್ಷೆಯ ಸಿನಿಮಾ. ಯಾಕಂದ್ರೆ, ಇದು ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕೇವಲ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಷ್ಟೇ ಅಲ್ಲ. ಕನ್ನಡ ಚಿತ್ರರಂಗದ ಎಲ್ಲಾ ನಟರ ಫ್ಯಾನ್ಸ್ ಒಟ್ಟಾದರೂ ಅಚ್ಚರಿ ಪಡಬೇಕಿಲ್ಲ. ಆದರೆ, ಈ ಸಿನಿಮಾ ಸುತ್ತ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಈಗ ವಿತರಕರು 'ಜೇಮ್ಸ್‌'ಗೆ ಬೆಂಬಲ ನೀಡುತ್ತಾರೆಂಬ ಸುದ್ದಿ ಗಾಂಧಿನಗರದ ಗಲ್ಲಿಯಲ್ಲಿ ಹರಿದಾಡುತ್ತಿದೆ.

    Recommended Video

    ಅಪ್ಪು ಸಿನಿಮಾ ಪ್ರಮೋಷನ್ ಮಾಡೋ ಅವಶ್ಯಕತೆ ಇಲ್ಲ ಅವನು ಬೆಳೆದಿದ್ದಾನೆ

    'ಜೇಮ್ಸ್' ಸಿನಿಮಾ ಬಿಡುಗಡೆ ದಿನ ಅಭಿಮಾನಿಗಳು ಅದ್ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಥಿಯೇಟರ್‌ ಮುಂದೆ ಸಂಭ್ರಮ ಪಡುತ್ತಾರೋ, ಇಲ್ಲ ಸಂಭ್ರಮವನ್ನು ಪಕ್ಕಕ್ಕಿಟ್ಟು ಅಪ್ಪು ಸಿನಿಮಾ ನೋಡುತ್ತಾರೋ ಗೊತ್ತಿಲ್ಲ. ಆದರೆ, ಮೊದಲ ದಿನ 'ಜೇಮ್ಸ್' ಎಲ್ಲೆಲ್ಲಿ ರಿಲೀಸ್ ಆಗುತ್ತೋ ಅಲ್ಲೆಲ್ಲಾ ಹೌಸ್‌ಫುಲ್ ಆಗುವುದು ಗ್ಯಾರಂಟಿ. ಇದೇ ವೇಳೆ ಕರ್ನಾಟಕದ ವಿತಕರು ಒಂದು ವಾರ ಪರಭಾಷೆ ಸಿನಿಮಾಗಳನ್ನು ಬಂದ್ ಮಾಡಲಿದ್ದಾರೆ ಅನ್ನುವ ಸುದ್ದಿ ಕೂಡ ಕೇಳಿಬರುತ್ತೆ? ಅಸಲಿಗೆ ಈ ಸುದ್ದಿಯೇನು ಅನ್ನುವುದನ್ನು ತಿಳಿಯಲು ಮುಂದೆ ಓದಿ.

    ಪರಭಾಷೆ ಸಿನಿಮಾ ರಿಲೀಸ್ ಆಗಲ್ವಾ?

    ಪರಭಾಷೆ ಸಿನಿಮಾ ರಿಲೀಸ್ ಆಗಲ್ವಾ?

    'ಜೇಮ್ಸ್' ಸಿನಿಮಾ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವೇ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಒಂದು ವಾರ ಬೇರೆ ಭಾಷೆಯ ಯಾವುದೇ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡದೆ ಇರಲು ವಿತರಕರು ನಿರ್ಧರಿಸಿದ್ದಾರಂತೆ. ಇಂತಹದ್ದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಶುರುಮಾಡಿದೆ. ಅಪ್ಪುಗೆ ಗೌರವ ಸೂಚಿಸುವ ಸಲುವಾಗಿ ಇಂತಹದ್ದೊಂದು ಪ್ರಯತ್ನಕ್ಕೆ ವಿತರಕರು ಕೈ ಹಾಕಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಒಂದು ವಾರ ಪರಭಾಷೆ ಸಿನಿಮಾ ಬಂದ್?

    ಮಾರ್ಚ್ ತಿಂಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಸಜ್ಜಾಗಿವೆ. ಆದರೆ, ಕರ್ನಾಟಕದಲ್ಲಿ ಅಪ್ಪು ಹುಟ್ಟುಹಬ್ಬ ಬರುವ ಒಂದು ವಾರ ಕೇವಲ 'ಜೇಮ್ಸ್‌'ಗಾಗಿಯೇ ಬಿಟ್ಟುಕೊಡಲು ವಿತರಕರು ನಿರ್ಧರಿಸಿದ್ದಾರಂತೆ. ಹೀಗಾಗಿ ಈ ವೇಳೆ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಅನುಮಾನ. ಇಲ್ಲವೇ ಒಂದು ವಾರ ಮುಂದಕ್ಕೆ ಹಾಕಿಕೊಳ್ಳಬೇಕು ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

    ವಿತರಕರು ಈ ಸದ್ದು ಬಗ್ಗೆ ಏನಂತಾರೆ?

    ವಿತರಕರು ಈ ಸದ್ದು ಬಗ್ಗೆ ಏನಂತಾರೆ?

    ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿ ಕರ್ನಾಟಕದ ವಿತರಕರ ಕಿವಿ ಬಿದ್ದಿದೆ. ಆದರೆ, ಈ ಬಗ್ಗೆ ವಿತರಕರ ನಡುವೆ ಚರ್ಚೆ ನಡೆದಿಲ್ಲವೆಂದು ಅವರು ಹೇಳುತ್ತಿದ್ದಾರೆ. "ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ 'ಜೇಮ್ಸ್' ಬಿಡುಗಡೆಯಾದರೆ ನಮ್ಮ ಬೆಂಬಲ ಖಂಡಿತಾ ಇರುತ್ತೆ. ಆದರೆ, ಇದೂವರೆಗೂ ಪರಭಾಷೆಯ ಸಿನಿಮಾ ಒಂದು ವಾರ ಬಂದ್ ಮಾಡುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಕರ್ನಾಟಕದ ವಿತರಕರ ನಡುವೆ ಇಂತಹದ್ದೊಂದು ಚರ್ಚೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ." ಎಂದು ವಿತರಕರೊಬ್ಬರು ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

    ಪರಭಾಷೆ ಸಿನಿಮಾ ಬಂದ್ ಮಾಡಲು ಸಾಧ್ಯವೇ?

    ಪರಭಾಷೆ ಸಿನಿಮಾ ಬಂದ್ ಮಾಡಲು ಸಾಧ್ಯವೇ?

    ಇನ್ನೊಬ್ಬರ ವಿತರಕರ ಪ್ರಕಾರ, "ಒಂದು ವಾರ ಪರಭಾಷೆ ಸಿನಿಮಾ ವಿತರಣೆ ಮಾಡದೆ ಇರುವ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ. ಬಹುಶ: ಈ ಸುದ್ದಿ ಸುಳ್ಳು ಎನಿಸುತ್ತೆ. ಸಿಂಗಲ್ ಸ್ಕ್ರೀನ್‌ನಲ್ಲಿ ಸಿನಿಮಾ ಬಿಡುಗಡೆ ಮಾಡದೆ ಇರಲು ನಿರ್ಧರಿಸಿದರೂ, ಪರಭಾಷೆ ನಿರ್ಮಾಪಕರು ನೇರವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡಬಹುದು. ಹೀಗಾಗಿ ಈ ಬಗ್ಗೆ ವಿತರಕರು ಚರ್ಚೆ ಮಾಡಿದ್ದರ ಬಗ್ಗೆ ಮಾಹಿತಿಯಿಲ್ಲ." ಎಂದು ಮತ್ತೊಬ್ಬ ವಿತರಕ ಮಾಹಿತಿ ನೀಡಿದ್ದಾರೆ.

    English summary
    Karnataka distributors decided not to release any movie in the state from March 17th to 23rd for Puneeth Rajkumar's James Movie.
    Tuesday, January 25, 2022, 20:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X