For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಲ್ಮಾನ್ ತೆಕ್ಕೆಗೆ ಕತ್ರಿನಾ, ರಣ್ಬೀರ್ ಔಟ್?

  |

  ಬಾಲಿವುಡ್ ನಲ್ಲಿ ಹರಿದಾಡುವ ಸುದ್ದಿಗಳಿಗೆ ಲೆಕ್ಕವೇ ಇಲ್ಲ. ನಮ್ಮ ಗಾಂಧಿನಗರವನ್ನು ಮೀರಿಸುವ ಸುದ್ದಿಗಳು ಹೀಗೆ ಬಂದು ಹಾಗೇ ಅರಬ್ಬಿ ಸಮುದ್ರಗಳ ಅಲೆಗಳ ನಡುವೆ ಮಾಯವಾಗುತ್ತಿರುತ್ತವೆ.

  ಈಗ ಬಾಲಿವುಡ್ ಜಗತ್ತಿನ ಹಾಟ್ ಬ್ಯೂಟಿ ಕತ್ರಿನಾ ಕೈಫ್ ಸುತ್ತಮುತ್ತ ಮತ್ತೊಂದು ಗಾಸಿಪ್ ಸುದ್ದಿ ಹರಿದಾಡುತ್ತಿದೆ. ಅದೇನಂದರೆ, ಕತ್ರಿನಾ ಈಗ ಬಾಲಿವುಡ್ ಬ್ಯಾಡ್ ಬಾಯ್ ಮತ್ತು ತನ್ನ ಒಂದು ಕಾಲದ ಲವರ್ ಸಲ್ಮಾನ್ ಖಾನಿಗೆ ಮತ್ತೆ ಹತ್ತಿರವಾಗುತ್ತಿದ್ದಾರಂತೆ.

  ಸುದ್ದಿಯೋ, ಗಾಳಿ ಸುದ್ದಿಯೋ ಈ ಸುದ್ದಿಯನ್ನು ಕೇಳಿ ಕಪೂರ್ ಖಾಂದಾನಿನ ಕುಡಿ ಚಾಕೋಲೇಟ್ ಹೀರೋ ರಣ್ಬೀರ್ ಕಪೂರ್ ಅದೆಷ್ಟು ವ್ಯಸನ ಪಟ್ಟಿರಬೇಡ? (ಬಾಲಿವುಡ್ ಪ್ರಣಯ ಪಕ್ಷಿಗಳು ಕೈಕೈ ಹಿಡಿದು ಮತ್ತೆ ಹಾರಿದವು)

  ಮಾಧ್ಯಮ ಜಗತ್ತಿನವರ ಪ್ರಶ್ನೆಗೆ ಕತ್ರಿನಾ ಕೈಫ್ ಅವರಿಂದ ನೇರಾನೇರ ಉತ್ತರ ಸಿಗುವುದು ಸಾಮಾನ್ಯವಾಗಿ ಅಪರೂಪ. ಒಂದು ರೀತಿಯಲ್ಲಿ ನಮ್ಮ ಕೋಡಿಮಠದ ಶ್ರೀಗಳ ಹಾಗೆ ಒಗಟಿನ ರೂಪದಲ್ಲಿ ಆಕೆಯ ಉತ್ತರ ಸಿಗುವುದೇ ಹೆಚ್ಚು. (ಈ ಬಾರಿ ವಿಚಿತ್ರ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ)

  ಸಂದರ್ಶನವೊಂದರಲ್ಲಿ ಕತ್ರಿನಾ, ಸಲ್ಮಾನ್ ಬಗ್ಗೆ ಹೇಳಿದ್ದೇನು?

  ಸಲ್ಮಾನ್ ಖಾನ್ ನನಗೆ ಸ್ಪೆಷಲ್ ವ್ಯಕ್ತಿ

  ಸಲ್ಮಾನ್ ಖಾನ್ ನನಗೆ ಸ್ಪೆಷಲ್ ವ್ಯಕ್ತಿ

  ದಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ಖಾನ್ ಈಗಲೂ ನನಗೆ ಸ್ಪೆಷಲ್ ವ್ಯಕ್ತಿ. ಈಗಲೂ ನನ್ನ ಹೃದಯದಲ್ಲಿ ಸಲ್ಮಾನಿಗೆ ವಿಶೇಷ ಸ್ಥಾನವಿದೆ ಎಂದು ಹೇಳುವ ಮೂಲಕ ರಣ್ಬೀರ್ ಕಪೂರ್ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ.

  ನನಗೆ ಸಂದೇಶದಷ್ಟೇ ದೂರ

  ನನಗೆ ಸಂದೇಶದಷ್ಟೇ ದೂರ

  ಸಂದರ್ಶನದಲ್ಲಿ ಮಾತನಾಡುತ್ತಾ ಕತ್ರಿನಾ, ಸಲ್ಮಾನ್ ನನಗೆ ಅತ್ಯಂತ ಆಪ್ತ ವ್ಯಕ್ತಿ. ಒಂದು ಮೊಬೈಲ್ ಮೆಸೇಜ್ ನಷ್ಟೇ ಅವರು ನನಗಿಂತ ದೂರ ಎನ್ನುವ ಒಗಟಿನ ಮಾತನ್ನೂ ಆಡಿದ್ದಾರೆ. ಅಲ್ಲದೇ ನಾನು ಈಗಲೂ ಅವರ ಜೊತೆ 'ಟಚ್'ನಲ್ಲಿದ್ದೀನಿ ಎಂದಿದ್ದಾರೆ.

  ರಣ್ಬೀರ್ ಬಗ್ಗೆ ಏನಂತೀರಿ ಮೇಡಂ ಕತ್ರಿನಾ?

  ರಣ್ಬೀರ್ ಬಗ್ಗೆ ಏನಂತೀರಿ ಮೇಡಂ ಕತ್ರಿನಾ?

  ಮೇಲಿನ ಪ್ರಶ್ನೆಗೆ, ಈಗಲೇ ಈ ಬಗ್ಗೆ ನಾನು ಏನೂ ಹೇಳುವ ಸ್ಥಿತಿಯಲ್ಲಿಲ್ಲ. ಮುಂದೆ ರಣ್ಬೀರ್ ಜೊತೆ ಬ್ರೇಕ್ - ಅಪ್ ಆದರೂ ಆಗಬಹುದು. ಇವತ್ತಿಲ್ಲಾಂದ್ರೆ, ನಾಳೆ ಬ್ರೇಕ್ ಆದರೂ ಆಗ ಬಹುದು ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೇ ಹೇಳಿದ್ದಾರೆ.

  ನಾನು ಏನು ಮಾತನಾಡಿದರೂ ಸುದ್ದಿ

  ನಾನು ಏನು ಮಾತನಾಡಿದರೂ ಸುದ್ದಿ

  ಹಾಗಾಗಿ, ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. general opinion ನೀಡಿದರೂ ಜನ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ, ಹಾಗಾಗಿ ಸುಮ್ಮನಿರುವುದನ್ನು ಅಭ್ಯಾಸ ಮಾಡಿ ಕೊಂಡಿದ್ದೇನೆ.

  ಕತ್ರಿನಾ ಮರೆಯದ ಸಲ್ಲು ಮಿಯಾ

  ಕತ್ರಿನಾ ಮರೆಯದ ಸಲ್ಲು ಮಿಯಾ

  ಕತ್ರಿನಾ ಹಿಂದೆ ಮುಂದೆ ಏನೇ ಸುದ್ದಿ ಹರಿದಾಡುತ್ತಿದ್ದರೂ ಸಲ್ಮಾನ್ ಮಾತ್ರ ಕತ್ರಿನಾಳನ್ನು ನೆನೆಪಿಸಿ ಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ತಾನು ಆಡಿ 7 ಕಾರು ಖರೀದಿಸಿದ ಸಂದರ್ಭದಲ್ಲೂ, ಕತ್ರಿನಾ ಈ ಕಾರಿನಲ್ಲಿ ಕೂತರೆ ಇನ್ನೂ ಸುಂದರವಾಗಿ ಕಾಣಿಸಿಕೊಳ್ಳುತ್ತಾಳೆಂದು ಹೇಳಿದ್ದರು.

  English summary
  Bollywood actress Katrina Kaif reveals in a leading daily that, she still has a special place for her ex-boy friend Salman Khan in her heart.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X