»   » ಅನುಷ್ಕಾ ಬದಲು ಪ್ರಭಾಸ್ ಗೆ ಜೋಡಿ ಆಗ್ತಾಳ ಬಾಲಿವುಡ್ ನಟಿ.!

ಅನುಷ್ಕಾ ಬದಲು ಪ್ರಭಾಸ್ ಗೆ ಜೋಡಿ ಆಗ್ತಾಳ ಬಾಲಿವುಡ್ ನಟಿ.!

Posted By:
Subscribe to Filmibeat Kannada

ಪ್ರಭಾಸ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ 'ಸಾಹೋ' ಚಿತ್ರದಿಂದ ಅನುಷ್ಕಾ ಶೆಟ್ಟಿ ಅವರನ್ನ ಕೈ ಬಿಡಲಾಗಿದೆ ಎನ್ನಲಾಗಿತ್ತು. ಈಗ ಆ ಜಾಗಕ್ಕೆ ಬಾಲಿವುಡ್ ನಟಿಯೊಬ್ಬರನ್ನ ಕರೆತರುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಹೌದು, ಅಗತ್ಯಕ್ಕಿಂತ ಹೆಚ್ಚು ತೂಕ ಇರುವ ಕಾರಣ 'ಸಾಹೋ' ಚಿತ್ರದಿಂದ ಅನುಷ್ಕಾ ಅವರನ್ನ ನಾಯಕಿ ಪಾತ್ರದಿಂದ ಹೊರಗುಳಿಸಲಾಗಿದೆಯಂತೆ. ಹಾಗಿದ್ರೆ, ಪ್ರಭಾಸ್ ಗೆ ನಾಯಕಿ ಯಾರು ಎಂಬ ಕುತೂಹಲದ ಮಧ್ಯೆಯೆ ಬಿಟೌನ್ ಸುಂದರಿಯನ್ನ ಅಪ್ರೋಚ್ ಮಾಡಲಾಗಿದೆ ಎನ್ನಲಾಗಿದೆ

ಪ್ರಭಾಸ್ ಚಿತ್ರದಿಂದ ಅನುಷ್ಕಾ ಶೆಟ್ಟಿಗೆ ಕೋಕ್.!

Katrina kaif Replace Anushka Shetty in Sahoo

ಮೂಲಗಳ ಪ್ರಕಾರ ನಟಿ ಕತ್ರಿನಾ ಕೈಫ್ ಅವರನ್ನ 'ಸಾಹೋ' ಚಿತ್ರಕ್ಕೆ ನಾಯಕಿಯಾಗಿಸುವ ಯೋಜನೆ ಹೊಂದಿದೆಯಂತೆ ಚಿತ್ರತಂಡ. ಈ ಮೊದಲೇ 'ಸಾಹೋ' ಚಿತ್ರಕ್ಕೆ ಕತ್ರಿನಾ ಅವರಿಗೆ ಆಫರ್ ಮಾಡಲಾಗಿತ್ತು. ಆದ್ರೆ, ಆಗ 'ಬಾಹುಬಲಿ' ಸಿನಿಮಾ ರಿಲೀಸ್ ಆಗಿರಲಿಲ್ಲ. ಟಾಲಿವುಡ್ ನಲ್ಲಿ ಬಿಟ್ಟರೇ ಹೊರಗಡೆ ಪ್ರಭಾಸ್ ಖ್ಯಾತಿ ಹೊಂದಿರಲಿಲ್ಲ. ಹೀಗಾಗಿ, ಕತ್ರಿನಾ 'ಸಾಹೋ' ಪ್ರಾಜೆಕ್ಟ್ ನ್ನ ರಿಜೆಕ್ಟ್ ಮಾಡಿದ್ದರಂತೆ.

Katrina kaif Replace Anushka Shetty in Sahoo

ಇದೀಗ, ಮತ್ತೆ 'ಸಾಹೋ' ಚಿತ್ರಕ್ಕೆ ಕತ್ರಿನಾ ಅವರನ್ನೇ ಅಪ್ರೋಚ್ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಇನ್ನು ಮೂಲಗಳ ಪ್ರಕಾರ ಕತ್ರಿನಾ ಕೂಡ ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಯಾಕಂದ್ರೆ, ಪ್ರಭಾಸ್ ಈಗ 'ಬಾಹುಬಲಿ' ಚಿತ್ರದ ಮೂಲಕ ವರ್ಲ್ಡ್ ವೈಡ್ ಖ್ಯಾತಿ ಗಳಿಸಿಕೊಂಡಿದ್ದಾರೆ. ಹೀಗಾಗಿ, ಸಹಜವಾಗಿ ಕ್ಯಾಟ್ ಪ್ರಭಾಸ್ ಗೆ ಜೋಡಿಯಾಗಲು ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂಬ ನಿರೀಕ್ಷೆಯಿದೆ.

English summary
According to India.com, Katrina Kaif might get re-considered for Saaho as Anushka Shetty's weight issue is giving a tough time to the Saaho makers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada