For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಕೈಫ್, ಸಲ್ಮಾನ್ ಸಚಿತ್ರ ಪ್ರೇಮ್ ಕಹಾನಿ

  By ಉದಯರವಿ
  |

  ಬಾಲಿವುಡ್ ಬಣ್ಣದ ಜಗತ್ತಿಗೆ ಕತ್ರಿನಾ ಕೈಫ್ ಅಡಿಯಿಡಲು ಇನ್ನೂ ತಿಣುಕಾಡುತ್ತಿದ್ದ ದಿನಗಳು. ಆಗ ಆಕೆ ಬಾಲಿವುಡ್ ನಲ್ಲಿ ಪಾದ ಊರಲು ಸಹಾಯ ಮಾಡಿದವನೇ ನಟ ಸಲ್ಮಾನ್ ಖಾನ್. 'ಭೂಮ್' ಚಿತ್ರದ ಮೂಲಕವೇ ಬಾಕ್ಸಾಫೀಸಲ್ಲಿ ಕತ್ರಿನಾ ಬಾಂಬ್ ಹಾಕಿದ್ದರು. ಅಲ್ಲಿಂದ ಆರಂಭವಾದ ಆಕೆಯ ಸಿನಿ ಪಯಣದಲ್ಲಿ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

  ಸಲ್ಮಾನ್ ಗೆ ಕತ್ರಿನಾ ಕೈಫ್ ಪರಿಚಯವಿರಲಿಲ್ಲ. ಆಕೆ ಪರಿಚಯವಾಗಿದ್ದೇ ಸಲ್ಲು ತಂಗಿ ಮುಖಾಂತರ. ಕತ್ರಿನಾಳ ಸರಳತೆಗೆ ಮಾರುಹೋದ ಸಲ್ಲು ತನ್ನ ಹೃದಯವನ್ನು ಆಕೆಗೆ ಅದಾಗಲೇ ಕೊಟ್ಟಾಗಿತ್ತು. ಲವ್ ಸ್ಟೋರಿ ಶುರುವಾದ ಬಳಿಕ 'ಮೈನೇ ಪ್ಯಾರ್ ಕ್ಯು ಕಿಯಾ' ಎಂಬ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಅಭಿನಯಿಸಿದರು.

  ಸಲ್ಮಾನ್ ಖಾನ್ ಅವರದು ಬಲು ವಿಶಾಲ ಹೃದಯ

  ಸಲ್ಮಾನ್ ಖಾನ್ ಅವರದು ಬಲು ವಿಶಾಲ ಹೃದಯ

  ಹೀಗೆಂದು ಸ್ವತಃ ಹೇಳಿಕೊಂಡಿದ್ದಳು ಕತ್ರಿನಾ ಕೈಫ್. "ಅವರದು ತುಂಬಾ ವಿಶಾಲ ಹೃದಯ. ಯಾವುದಕ್ಕೂ ಭಯಪಡುವ ಪೈಕಿಯಲ್ಲ. ಹಾಗೆಯೇ ಅಭದ್ರತೆಯಿಂದ ತೊಳಲಾಡುವವನೂ ಅಲ್ಲ. ಬಹಳಷ್ಟು ಮಂದಿ ಏನೋ ಕಳಕೊಂಡಂತೆ ಜೀವಿಸುತ್ತಿರುತ್ತಾರೆ. ಆದರೆ ಸಲ್ಲು ಮಾತ್ರ ಯಾವುದಕ್ಕೂ ಹೆದರುತ್ತಿರಲಿಲ್ಲ. ಹೇಗೆ ಬದುಕಬೇಕು ಎಂಬುದನ್ನು ನನಗೆ ಕಲಿಸಿಕೊಟ್ಟ ಗುರು" ಎನ್ನುತ್ತಾರೆ ಕತ್ರಿನಾ.

  ಕತ್ರಿನಾಳದ್ದು ಅಪ್ರತಿಮ ಸೌಂದರ್ಯ ಎಂದಿದ್ದ ಸಲ್ಲು

  ಕತ್ರಿನಾಳದ್ದು ಅಪ್ರತಿಮ ಸೌಂದರ್ಯ ಎಂದಿದ್ದ ಸಲ್ಲು

  ಕತ್ರಿನಾಳನ್ನು ನೋಡುತ್ತಿದ್ದರೆ ಯಾರೇ ಆಗಲಿ ಆಕೆಯ ಪ್ರೇಮಪಾಶಕ್ಕೆ ಸಿಲುಕಿಯೇ ಸಿಲುಕುತ್ತಾರೆ; ಆನ್ ಸ್ಕ್ರೀನ್ ಆಗಬಹುದು ಅಥವಾ ಆಫ್ ಸ್ಕ್ರೀನ್ ಆಗಬಹುದು. ಅಭಿಮಾನಿಗಳು ಅಷ್ಟೇ ಆಕೆಯ ಸೌಂದರ್ಯವನ್ನು ಆರಾಧಿಸುತ್ತಾರೆ ಎಂದಿದ್ದ ಸಲ್ಲು.

  ಹೇ ಬಿಡ್ರಿ ಸಲ್ಲುಗೆ ಪ್ರೀತ್ಸೋದೆ ಬರಲ್ಲ

  ಹೇ ಬಿಡ್ರಿ ಸಲ್ಲುಗೆ ಪ್ರೀತ್ಸೋದೆ ಬರಲ್ಲ

  ಈ ರೀತಿ ಹೇಳಿದ್ದು ಕೂಡ ಸಲ್ಲು ಗೆಳತಿ ಕತ್ರಿನಾ ಕೈಫ್. "ಅವರಿಗೆ ಪ್ರೀತ್ಸೋದೆ ಬರಲ್ಲ. ಇಬ್ಬರೂ ಎಲ್ಲಾದರೂ ಹೊರಗಡೆ ಸುತ್ತಾಡಲು ಹೋಗೋಣವೇ ಎಂದು ಒಮ್ಮೆ ಕೇಳಿದ್ದೆ. ಅದಕ್ಕವರು ಅಯ್ಯೋ ನಾವಿಬ್ಬರೇ ಇದ್ದರೆ ಸಖತ್ ಬೋರ್ ಆಗುತ್ತದೆ" ಎಂದಿದ್ದ. ಕ್ಯಾಂಡಲ್ ಲೈಟ್ ಡಿನ್ನರ್ ಎಂದರೆ ಸಲ್ಲುಗೆ ಆಗಲ್ಲ. ಅವರ ಸುತ್ತಲೂ ಜನ ಇರಬೇಕು ಅಷ್ಟೇ. ಅನ್ ರೊಮ್ಯಾಂಟಿಕ್ ಪರ್ಸನ್ ಎಂದು ಬೇಜಾರಲ್ಲಿ ಹೇಳಿಕೊಂಡಿದ್ದಳು ಕ್ಯಾಟ್.

  ಕತ್ರಿನಾ ಬಗ್ಗೆ ಸಲ್ಲುಗೆ ಇನ್ನೂ ಕುಂದಿಲ್ಲ ವ್ಯಾಮೋಹ

  ಕತ್ರಿನಾ ಬಗ್ಗೆ ಸಲ್ಲುಗೆ ಇನ್ನೂ ಕುಂದಿಲ್ಲ ವ್ಯಾಮೋಹ

  ಕತ್ರಿನಾ ಬಿಕಿನಿಯಲ್ಲಿ ಓಡಾಡುವುದು, ತುಂಡು ಬಟ್ಟೆಗಳಲ್ಲಿ ಕಾಣಿಸುವುದು ಸಲ್ಲುಗೆ ಆಗಲ್ಲ. ಇದಕ್ಕಾಗಿ ಆಕೆಗೆ ಒಮ್ಮೆ ಬುದ್ಧಿವಾದವನ್ನೂ ಹೇಳಿದ್ದ. ಇದೆಲ್ಲಾ ನಿನಗೆ ಚೆನ್ನಾಗಿರಲ್ಲ. ನಿನ್ನ ಗೌರವ, ಘನತೆಗಳಿಗೆ ಕುಂದು ತರುತ್ತದೆ ಎಂದು ಹೇಳಿದ್ದ. ಅಂದರೆ ಆಕೆಯ ಮೇಲಿನ ವ್ಯಾಮೋಹ ಇನ್ನೂ ಎಳ್ಳಷ್ಟೂ ಕಡಿಮೆಯಾಗಿಲ್ಲ ಎಂದು ತಾನೆ?

  ಸಲ್ಲು, ಕ್ಯಾಟ್ ಸಂಬಂಧಗಳು ಇನ್ನೂ ಹಸಿರಾಗಿದೆ

  ಸಲ್ಲು, ಕ್ಯಾಟ್ ಸಂಬಂಧಗಳು ಇನ್ನೂ ಹಸಿರಾಗಿದೆ

  ಕ್ಯಾಟ್ ಹುಟ್ಟುಹಬ್ಬಕ್ಕೆ ಸಲ್ಲು ದುಬಾರಿ ಉಡುಗೊರೆಯನ್ನೇ ನೀಡಿದ್ದ. ಕೋಟ್ಯಾಂತರ ಬೆಲೆ ಬಾಳುವ ಆಡಿ ಕಾರನ್ನು ಆಕೆಗೆ ರಹಸ್ಯವಾಗಿ ಕೊಟ್ಟಿದ್ದ. ಆದರೆ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗೊಲ್ವ? ನ್ಯಾಷನಲ್ ಡೈಲಿ ಕಣ್ಣಿಗೆ ಬಿದ್ದು ಬಯಲಾಗಿತ್ತು. ಇಂಗು ತಿಂದ ಮಂಗನಂತಾಗಿದ್ದ ಸಲ್ಲು.


  ಈ ಚಿತ್ರವೂ ಸೂಪರ್ ಡೂಪರ್ ಹಿಟ್ ಆಯಿತು. ಸಲ್ಲು ಹಳೆಯ ಸಂಬಂಧಗಳಂತೆ ಕತ್ರಿನಾ ಜೊತೆಗಿನ ಸಂಬಂಧವೂ ಬಹಳ ದಿನ ಉಳಿಯಲಿಲ್ಲ. ಇಬ್ಬರೂ ದೂರ ಸರಿದರು. "ಕತ್ರಿನಾರನ್ನು ನಾನು ದೂರ ಇಟ್ಟಿದ್ದೇನೆ. ನಾವಿಬ್ಬರೂ ಕೇವಲ ಗೆಳೆಯರಷ್ಟೇ " ಎಂದಿದ್ದರು ಸಲ್ಲು.

  ಇಷ್ಟೆಲ್ಲಾ ಆದರೂ ಇಬ್ಬರ ನಡುವಿನ ಗುಸುಗುಸು ಸುದ್ದಿಗಳಿಗೇನು ಬರವಿರಲಿಲ್ಲ. ಆಗಾಗ ಬಾಲಿವುಡ್ ನಿಂದ ಸ್ಯಾಂಡಲ್ ವುಡ್ ತನಕ ಗಾಸಿಪ್ ಸುದ್ದಿಗಳು ಹಬ್ಬುತ್ತಲೇ ಇದ್ದವು. ಇವರಿಬ್ಬರ ಸಂಬಂಧ ಚೆನ್ನಾಗಿದ್ದಾಗ ಕ್ಲಿಕ್ಕಿಸಿದ ಕೆಲವು ಫೋಟೋಗಳು ಇಲ್ಲಿವೆ ನೋಡಿ.

  English summary
  Here are some of the rare and unseen pictures of Salman Khan with his ex-girlfriend Katrina Kaif. Katrina Kaif met Salman Khan during her struggling days in Bollywood. She debuted with Boom, which bombed at the Box-Office. It is said that Katrina Kaif was Salman's sister's friend. Salman Khan fell in love with her because of her simplicity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X