»   » ನೀಲಿ ಚಿತ್ರಗಳ ನಿರ್ಮಾಪಕನ ಜೊತೆ ಕತ್ರಿನಾ ತಂಗಿ

ನೀಲಿ ಚಿತ್ರಗಳ ನಿರ್ಮಾಪಕನ ಜೊತೆ ಕತ್ರಿನಾ ತಂಗಿ

Posted By:
Subscribe to Filmibeat Kannada
Isabele Kaif with adult movie producer
ಬಾಲಿವುಡ್ ಚಿತ್ರಗಳಿಗೆ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಅಡಿಯಿಟ್ಟ ಬಳಿಕ ಐಟಂ ಬೆಡಗಿಯರಿಗೆ ಕವಡೆ ಕಾಸಿನ ಬೆಲೆಯಿಲ್ಲದಂತಾಗಿದೆ. ಈಗ ಬಾಲಿವುಡ್ ನಲ್ಲಿ ಈ ನೀಲಿ ಚಿತ್ರಗಳ ತಾರೆಯ ಬಗ್ಗೆಯೇ ಸುದ್ದಿ. ಇದರೆ ಬೆನ್ನಿಗೆ ಮತ್ತೊಂದು ಹಾಟ್ ಸುದ್ದಿಯೊಂದು ಹರಿದುಬಂದಿದೆ.

ಅದೇನೆಂದರೆ ತಾರೆ ಕತ್ರಿನಾ ಕೈಫ್ ತಂಗಿ ಇಸಬೆಲ್ಲಾ ಕೈಫ್ ಅವರು ನೀಲಿ ಚಿತ್ರಗಳ ನಿರ್ಮಾಪಕರೊಬ್ಬರೊಂದಿಗೆ ಕಾಣಿಸಿಕೊಂಡಿರುವುದು. ಇಸಬೆಲ್ಲಾ ಅವರೇನೋ ಸಿನಿಮಾಗಳಲ್ಲಿ ಅಷ್ಟಾಗಿ ತೊಡಗಿಕೊಂಡಿಲ್ಲದಿದ್ದರೂ ಬಾಲಿವುಡ್ ಮಂದಿ ಮಾತ್ರ ತಲೆಗೊಂದು ಮಾತನಾಡುತ್ತಿದ್ದಾರೆ.

ಇಸಬೆಲ್ಲಾ ಅವರೇನಾದರೂ ನೀಲಿ ಚಿತ್ರದಲ್ಲಿ ಅಭಿನಯಿಸುತ್ತಾರಾ? ಅಥವಾ ನಿರ್ಮಾಪಕರ ಜೊತೆ ಕೈಜೋಡಿಸಿ ತಾವು ಬಂಡವಾಳ ಹೂಡುತ್ತಿದ್ದಾರಾ? ಅಥವಾ ಜಸ್ಟ್ ಇದೊಂದು ಸಾಂದರ್ಭಿಕ ಭೇಟಿ ಅಷ್ಟೇನಾ? ಈ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೂ ಗಾಸಿಪ್ ಸುದ್ದಿಗಳು ಮಾತ್ರ ಜೋರಾಗಿವೆ. ಈ ಹಿಂದೊಮ್ಮೆ ಇಸಬೆಲ್ಲರ ಹಾಟ್ ವಿಡಿಯೋ ಬಿಡುಗಡೆಯಾಗಿ ರಾದ್ಧಾಂತವಾಗಿತ್ತು.

ಇದಿಷ್ಟೇ ಆಗಿದ್ದರೆ ಬಾಲಿವುಡ್ ಮಂದಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಅನ್ನಿಸುತ್ತದೆ. ಇಸಬೆಲ್ಲಾ ಜೊತೆಗೆ ನೀಲಿ ಚಿತ್ರಗಳ ನಿರ್ಮಾಪಕ ಟೆರ್ರಿ ಸ್ಟೀಫನ್ ಕೂಡ ಇರುವ ಫೋಟೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಯಾವುದೇ ವಿವಾದ, ಗಾಸಿಪ್ ಗಳಿಂದ ದೂರವಿದ್ದ ಕತ್ರಿನಾ ಕುಟುಂಬಕ್ಕೆ ಇದರಿಂದ ಭಾರಿ ಮುಜಗರಾಗುತ್ತಿದೆಯಂತೆ. (ಏಜೆನ್ಸೀಸ್)

English summary
Bollywood diva Katrina Kaif sister Isabele Kaif caught with adult movie producer Terry Stephens. Is Isabele has some connections with the porn industry or the guy is just a friend.
Please Wait while comments are loading...