»   » ಜಯಲಲಿತಾ ಬಯೋಪಿಕ್ ಗೆ ಈ ನಟಿ ನಾಯಕಿ ಅಂತೆ.! ಇದು ಸಾಧ್ಯವಿಲ್ಲ

ಜಯಲಲಿತಾ ಬಯೋಪಿಕ್ ಗೆ ಈ ನಟಿ ನಾಯಕಿ ಅಂತೆ.! ಇದು ಸಾಧ್ಯವಿಲ್ಲ

Posted By:
Subscribe to Filmibeat Kannada

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಗ್ಗೆ ಸಿನಿಮಾ ಬರಲಿದೆ ಎಂಬ ಸುದ್ದಿಗಳು ಕೆಲ ತಿಂಗಳಿನಿಂದ ಕೇಳಿಬರುತ್ತಲೇ ಇದೆ. ಆದ್ರೆ, ಅವರ ಪಾತ್ರವನ್ನ ಯಾರು ಮಾಡ್ತಾರೆ ಎಂಬುದು ಕುತೂಹಲ, ಚರ್ಚೆಯಾಗಿತ್ತು.

ತುಂಬಾ ದಿನಗಳ ನಂತರ ಇದೀಗ, ಜಯಲಲಿತಾ ಪಾತ್ರಕ್ಕೊಬ್ಬ ನಟಿ ಸಿಕ್ಕಿದ್ದಾಳೆ ಎಂಬ ಸುದ್ದಿ ಮಾಯನಗರಿಯಲ್ಲಿ ಹರಿದಾಡುತ್ತಿದೆ. ಅದು ಬೇರೆ ಯಾರೂ ಅಲ್ಲ. ಸದ್ಯ, ತೆಲುಗಿನ 'ಮಹಾನಟಿ' ಚಿತ್ರ ಮೂಲಕ ಚಿತ್ರಪ್ರೇಮಿಗಳ ಮನಗೆದ್ದಿರುವ ಕೀರ್ತಿ ಸುರೇಶ್.

ನೃತ್ಯ ಮಾಡಿ ಅಂದು ಜಯಲಲಿತಾ ಕನ್ನಡಿಗರ ಮನಗೆದ್ದಾಗ...

ಹೌದು, 'ಮಹಾನಟಿ' ಚಿತ್ರದಲ್ಲಿ ಲೆಜೆಂಡ್ ನಟಿ ಸಾವಿತ್ರ ಅವರ ಪಾತ್ರ ನಿಭಾಯಿಸಿರುವ ಕೀರ್ತಿ ಸುರೇಶ್ ಅವರ ಅಭಿನಯ ಕಂಡು ನೋಡುಗರು ದಿಗ್ಬ್ರಮೆಗೊಂಡಿದ್ದಾರೆ. ಯಾಕಂದ್ರೆ, ಸಾವಿತ್ರಿ ಪಾತ್ರದಲ್ಲಿ ಕೀರ್ತಿ ಅಭಿನಯಿಸಿಲ್ಲ, ಜೀವಿಸಿದ್ದಾರೆ ಎಂಬ ಮಾತುಗಳನ್ನಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಜಯಲಲಿತಾ ಬಯೋಪಿಕ್ ಗೂ ಕೀರ್ತಿ ಸುರೇಶ್ ನಾಯಕಿಯಾಗಬಹುದು ಎಂಬ ಲೆಕ್ಕಾಚಾರ ಆಗ್ತಿದೆ. ಆದ್ರೆ, ಇದಕ್ಕೆ ಸ್ವತಃ ಕೀರ್ತಿ ಸುರೇಶ್ ಬೇರೆಯದ್ದೇ ಉತ್ತರ ಕೊಟ್ಟಿದ್ದಾರೆ.

ಜಯಲಲಿತಾ ಸಿನಿಮಾದಲ್ಲಿ ಕೀರ್ತಿ.!

'ಮಹಾನಟಿ' ಚಿತ್ರವೂ ತಮಿಳಿನಲ್ಲಿ 'ನಡಿಗರ್ ತಿಲಕಂ' ಹೆಸರಿನಲ್ಲಿ ಡಬ್ ಆಗಿದ್ದು, ಬಹುದೊಡ್ಡ ಯಶಸ್ಸು ಸಾಧಿಸಿದೆ. ಈ ಚಿತ್ರದ ನಂತರ ಜಯಲಲಿತಾ ಬಯೋಪಿಕ್ ನಲ್ಲಿ ಕೀರ್ತಿ ಸುರೇಶ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದ್ರೆ, ಇದನ್ನ ಕೀರ್ತಿ ಸುರೇಶ್ ತಳ್ಳಿ ಹಾಕಿದ್ದಾರೆ.

ನಾನು ಯಾವ ಬಯೋಪಿಕ್ ಮಾಡಲ್ಲ

'ಮಹಾನಟಿ' ಬಯೋಪಿಕ್ ಮಾಡಿದ್ದು ಸಾವಿತ್ರಿ ಅವರ ಮೇಲಿನ ಅಭಿಮಾನ ಮತ್ತು ಆ ಪಾತ್ರಕ್ಕೋಸ್ಕರ. ಅದನ್ನ ಬಿಟ್ಟರೇ ಬೇರೆ ಯಾವ ಬಯೋಪಿಕ್ ನಲ್ಲೂ ನಾನು ಮಾಡುತ್ತಿಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಶ್ರೀದೇವಿ ಬಗ್ಗೆ ಸಿನಿಮಾ.?

ಇನ್ನು ಜಯಲಲಿತಾ ಮಾತ್ರವಲ್ಲ, ಶ್ರೀದೇವಿ ಬಗ್ಗೆಯೂ ಸಿನಿಮಾ ಮಾಡಲು ನಿರ್ಧರಿಸಿದ್ದು, ಆ ಚಿತ್ರದಲ್ಲೂ ಕೀರ್ತಿ ಸುರೇಶ್ ಅವರನ್ನ ಪರಿಗಣಿಸಲಾಗಿದೆಯಂತೆ. ಆದ್ರೆ, ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ನಟಿ ಕೀರ್ತಿ ಸುರೇಶ್ ಇದು ಕೂಡ ಸುಳ್ಳು ಎಂದಿದ್ದಾರೆ.

ಕಮರ್ಷಿಯಲ್ ಚಿತ್ರಗಳಲ್ಲಿ ನಟನೆ

ಸದ್ಯ, ತಮಿಳು ನಟ ವಿಜಯ್ ಅಭಿನಯದ 63ನೇ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅದಾದ ನಂತರ ಮತ್ತೆರೆಡು ಹೊಸ ಪ್ರಾಜೆಕ್ಟ್ ಗಳನ್ನ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಡೆ ಮಹಾನಟಿ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ತೆಲುಗು, ತಮಿಳು ಮತ್ತು ಕರ್ನಾಟಕದ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ.

English summary
The latest buzz is that Keerthi Suresh is in consideration to play Tamil Nadu former chief minister Jaya Lalitha in a film that is being made as her biopic .

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X