Just In
Don't Miss!
- Sports
ಐಎಸ್ಎಲ್: ಕೊನೆಯ ಪಂದ್ಯದಲ್ಲಿ ಒಡಿಶಾ ಮತ್ತು ಬೆಂಗಾಲ್ ಸೆಣಸು
- Automobiles
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಮಿಳಿನ ಯುವ ಸಂಗೀತ ನಿರ್ದೇಶಕನ ಜೊತೆ ಕೀರ್ತಿ ಸುರೇಶ್ ಮದುವೆ?
ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಮದುವೆ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ಖ್ಯಾತ ಉದ್ಯಮಿಯೊಬ್ಬರ ಜೊತೆ ವೈವಾಹಿಕ ಬದುಕು ಆರಂಭಿಸಲು ತಯಾರಾಗಿದ್ದಾರೆ ಎಂದು ಸುದ್ದಿ ವರದಿಯಾಗಿತ್ತು. ನಂತರ ಆ ಸುದ್ದಿಯನ್ನು ನಟಿ ನಿರಾಕರಿಸಿದ್ದರು.
ಇದೀಗ, ತಮಿಳಿನ ಖ್ಯಾತ ಸಂಗೀತ ನಿರ್ದೇಶಕನ ಜೊತೆ ಕೀರ್ತಿ ಸುರೇಶ್ ಪ್ರೀತಿಯಲ್ಲಿದ್ದಾರೆ ಎಂಬ ವಿಷಯ ಸದ್ದು ಮಾಡ್ತಿದೆ. ಈ ಕುರಿತು ತಮಿಳು ಫಿಲ್ಮಿಬೀಟ್ ವರದಿ ಮಾಡಿದ್ದು, ಈ ವರ್ಷದಲ್ಲೇ ಕೀರ್ತಿ ಮದುವೆ ಸಹ ಆಗಲಿದ್ದಾರೆ ಎಂದು ಹೇಳಿದೆ. ಕೀರ್ತಿ ಸುರೇಶ್ ಮತ್ತು ಸಂಗೀತ ನಿರ್ದೇಶಕನ ಪ್ರೀತಿ ವಿಚಾರ ಈಗ ತಮಿಳು ಹಾಗೂ ತೆಲುಗು ಇಂಡಸ್ಟ್ರಿಯಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಮುಂದೆ ಓದಿ....
ಖ್ಯಾತ ಉದ್ಯಮಿ ಜೊತೆ ಮದುವೆ ವದಂತಿ: ಗರಂ ಆದ ಕೀರ್ತಿ ಸುರೇಶ್

ಅನಿರುದ್ಧ್ ಲವ್ಸ್ ಕೀರ್ತಿ ಸುರೇಶ್?
ತಮಿಳು ಇಂಡಸ್ಟ್ರಿಯಲ್ಲಿ ಸದ್ಯ ಸಂಚಲನ ಸೃಷ್ಟಿಸಿರುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಜೊತೆ ಕೀರ್ತಿ ಸುರೇಶ್ ಪ್ರೀತಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ವರ್ಷದ ಅಂತ್ಯದಲ್ಲಿ ದಾಂಪತ್ಯ ಜೀವನ ಆರಂಭಿಸಲು ಯೋಜಿಸಿದ್ದಾರೆ ಎನ್ನಲಾಗುತ್ತಿದೆ.

ಗಾಯಕಿ ಜೊತೆ ಅನಿರುದ್ಧ್ ಹೆಸರು?
ಈ ಹಿಂದೆ ಅನಿರುದ್ಧ್ ರವಿಚಂದ್ರನ್ ಹೆಸರು ಗಾಯಕಿ ಜೊನಿತಾ ಗಾಂಧಿ ಜೊತೆ ತಳುಕು ಹಾಕಿಕೊಂಡಿತ್ತು. ಅನಿರುದ್ಧ್ ಮತ್ತು ಜೊನಿತಾ ಡೇಟ್ ಮಾಡಿದ್ದರು. ಇಬ್ಬರು ವಿವಾಹ ಸಹ ಆಗಲಿದ್ದಾರೆ ಎನ್ನುವಷ್ಟು ಆತ್ಮೀಯತೆ ಇರುವುದಾಗಿ ಹೇಳಲಾಗಿತ್ತು. ಆದರೆ, ಈ ಜೋಡಿ ಅಧಿಕೃತವಾಗಿ ತಮ್ಮ ಪ್ರೀತಿ ಬಗ್ಗೆ ಹೇಳಲೇ ಇಲ್ಲ.

ಬರ್ತಡೇ ಫೋಟೋಗಳು ವೈರಲ್ ಆಗಿದ್ದವು
ಅನಿರುದ್ಧ್ ರವಿಚಂದ್ರನ್ ಬರ್ತಡೇಯಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದರು. ಅನಿರುದ್ಧ್ ಮತ್ತು ಕೀರ್ತಿ ಒಟ್ಟಿಗೆ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಫೋಟೋಗಳ ಹಿನ್ನೆಲೆ ಆಗಲೇ ಕೀರ್ತಿ ಸುರೇಶ್ ಮತ್ತು ಅನಿರುದ್ಧ್ ಸಂಬಂಧದ ಬಗ್ಗೆ ಚರ್ಚೆಗಳು ಆಗಿತ್ತು.

ಇಬ್ಬರದ್ದು ಬ್ಯುಸಿ ಜೀವನ
ಕೀರ್ತಿ ಸುರೇಶ್ ಸತತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ಜೊತೆ ಅಣ್ಣಾತ್ತೆ, ಮಹೇಶ್ ಬಾಬು ಜೊತೆ ಸರ್ಕಾರು ವಾರಿ ಪಾಟ, ತೆಲುಗಿನ ರಂಗ್ ದೇ, ಗುಡ್ ಲಕ್ ಸಖಿ ಸೇರಿದಂತೆ ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಕಡೆ ಮಾಸ್ಟರ್ ಸಕ್ಸಸ್ ಬಳಿಕ ಅನಿರುದ್ಧ್ ಶಿವಕಾರ್ತಿಕೇಯನ್ ನಟನೆಯ ಡಾಕ್ಟರ್, ವಿಜಯ್ 65ನೇ ಚಿತ್ರ, ವಿಘ್ನೇಶ್ ಶಿವನ್ ನಿರ್ದೇಶನದ ಚಿತ್ರಗಳು ಸೇರಿದಂತೆ ಹಲವು ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.