For Quick Alerts
  ALLOW NOTIFICATIONS  
  For Daily Alerts

  Yash19: ಯಶ್- ವೆಂಕಟ್ ಕೋನಂಕಿ ಗುಪ್ತ್ ಗುಪ್ತ್ ಮೀಟಿಂಗ್: KVN ಬ್ಯಾನರ್‌ನಲ್ಲಿ ಸಿನಿಮಾ ಫಿಕ್ಸ್?

  |

  ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಪ್ತರಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇನ್ನು ಯಶ್‌19 ಬಗ್ಗೆ ಹೊಸದೊಂದು ಸುದ್ದಿ ಹರದಾಡ್ತಿದೆ. ಇದು ಪಕ್ಕಾ ನ್ಯೂಸ್ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

  'KGF- 2' ನಂತರ ಯಶ್‌ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿಲ್ಲ. ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಭಾಯ್ ಬ್ರೇಕಿಂಗ್ ನ್ಯೂಸ್ ಕೊಡ್ತಾರೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಯಶ್ ಪತ್ರ ಬರೆದು ನಿರಾಸೆ ಮೂಡಿಸಿದ್ದರು. ದೊಡ್ಡದಾಗಿ ಏನೋ ಪ್ಲ್ಯಾನ್ ಮಾಡ್ತಿದ್ದೀನಿ, ಸದ್ಯಕ್ಕೆ ಅದು ಫೈನಲ್ ಆಗಿಲ್ಲ. ಎಲ್ಲಾ ಪಕ್ಕಾ ಆದಮೇಲೆ ನಿಮ್ಮ ಮುಂದೆ ಬರ್ತೀನಿ. ಈ ಬಾರಿ ಹುಟ್ಟುಹಬ್ಬದ ದಿನ ನಿಮ್ಮೊಟ್ಟಿಗೆ ಇರಲು ಸಾಧ್ಯವಿಲ್ಲ ಕ್ಷಮಿಸಿ ಎಂದಿದ್ದರು. ಈ ವಿಶೇಷ ದಿನ ಯಶ್ ನಟನೆಯ 'ಮಿ & ಮಿ ರಾಮಾಚಾರಿ' ಹಾಗೂ 'KGF- 2' ರೀ ರಿಲೀಸ್ ಆಗಿ ಸದ್ದು ಮಾಡ್ತಿದೆ.

  ಯಶ್ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಸನದಲ್ಲಿ ಹುಟ್ಟಿದ ನವೀನ್ ಕುಮಾರ್ ಗೌಡ ರಾಕಿಂಗ್ ಸ್ಟಾರ್ ಆಗಿ ಬೆಳೆದು ಬಂದ ಹಾದಿ ಗೊತ್ತೆಯಿದೆ. ಇವತ್ತು ನ್ಯಾಷನಲ್ ಸ್ಟಾರ್ ಆಗಿ ಯಶ್ ರಾರಾಜಿಸುತ್ತಿದ್ದಾರೆ. ಅವರ ಒಂದು ಸಿನಿಮಾ ಅನೌನ್ಸ್‌ಮೆಂಟ್‌ಗಾಗಿ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದೆ.

  KVN ಬ್ಯಾನರ್‌ನಲ್ಲಿ ಯಶ್‌19 ಫಿಕ್ಸ್?

  KVN ಬ್ಯಾನರ್‌ನಲ್ಲಿ ಯಶ್‌19 ಫಿಕ್ಸ್?

  ಯಶ್ ಮುಂದಿನ ಚಿತ್ರಕ್ಕೆ KVN ಪ್ರೊಡಕ್ಷನ್ ಸಂಸ್ಥೆ ಬಂಡವಾಳ ಹೂಡುತ್ತದೆ ಎನ್ನುವ ಸುದ್ದಿ ಹಲವು ದಿನಗಳಿಂದ ಸದ್ದು ಮಾಡ್ತಿದೆ. ಈ ಹಿಂದೆ ಯಶ್ ದಂಪತಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವತ್ ಭೇಟಿ ಮಾಡಿದ್ದರು. ಆಗ ಅವರ ಜೊತೆ KVN ಬ್ಯಾನರ್‌ನ ವೆಂಕಟ್ ಕೋನಂಕಿ ನಾರಾಯಣ ಕೂಡ ಕಾಣಿಸಿಕೊಂಡಿದ್ದರು. ಅಂದಿನಿಂದಲೇ ಯಶ್ ಇಂತಾದೊಂದು ಸುದ್ದಿ ಹರಿದಾಡಲು ಆರಂಭವಾಗಿತ್ತು. ಅದೇ ನಿಜವಾಗುತ್ತದೆ ಎಂದು ಈಗ ಹೇಳಲಾಗುತ್ತಿದೆ. 'ಸಖತ್', 'ಬೈಟುಲವ್' ಸಿನಿಮಾಗಳನ್ನು ನಿರ್ಮಿಸಿರುವ ಸಂಸ್ಥೆ ಸದ್ಯ ಧ್ರುವ- ಪ್ರೇಮ್ ಜೋಡಿಯ 'ಕೆಡಿ' ಚಿತ್ರಕ್ಕೆ ಬಂಡವಾಳ ಹೂಡಿದೆ.

  ಯಶ್- ವೆಂಕಟ್ ಭೇಟಿ

  ಯಶ್- ವೆಂಕಟ್ ಭೇಟಿ

  ಸದ್ಯ ಯಶ್ ನಿರ್ಮಾಪಕ ವೆಂಕಟ್ ಕೋನಂಕಿ ನಾರಾಯಣ ಜೊತೆ ಕಾಣಿಸಿಕೊಂಡಿರುವ ಫೋಟೊವೊಂದು ವೈರಲ್ ಆಗ್ತಿದೆ. ಇಬ್ಬರು ಸಿನಿಮಾ ಬಗ್ಗೆ ಚರ್ಚಿಸಿದ್ದಾರಂತೆ. ಯಶ್19 ಚಿತ್ರಕ್ಕೆ KVN ಸಂಸ್ಥೆ ಬಂಡವಾಳ ಹೂಡುವುದು ಕನ್ಫರ್ಮ್ ಎನ್ನಲಾಗುತ್ತಿದೆ. ಆದರೆ ಕಥೆ, ನಿರ್ದೇಶಕರು ಯಾರು ಎನ್ನುವುದು ಮಾತ್ರ ಇನ್ನು ಫೈನಲ್ ಆಗಿಲ್ಲ. ಅದೇ ಕಾರಣಕ್ಕೆ ಯಶ್ ಕೊಂಚ ಸಮಯ ಕೇಳಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ತಮಿಳು ನಿರ್ದೇಶಕರೊಬ್ಬರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಬಗ್ಗೆ ಗುಸುಗುಸು ಶುರುವಾಗಿದೆ. ಯಶ್ ಅಧಿಕೃತವಾಗಿ ಹೇಳುವವರೆಗೂ ಯಾವುದು ಪಕ್ಕಾ ಅಲ್ಲ. ಈ ಹಿಂದೆ ಆಂಗ್ಲಪತ್ರಿಕೆಯ ಸಂವಾದ ಕಾರ್ಯಕ್ರಮದಲ್ಲಿ ಸ್ವತಃ ಯಶ್ ಈ ಮಾತನ್ನು ಹೇಳಿದ್ದರು. ನನ್ನ ಮುಂದಿನ ಸಿನಿಮಾವನ್ನು ನಾನೇ ಘೋಷಿಸುತ್ತೇನೆ ಎಂದಿದ್ದರು.

  ದುಬೈನಲ್ಲಿ ಹುಟ್ಟುಹಬ್ಬ ಆಚರಣೆ

  ದುಬೈನಲ್ಲಿ ಹುಟ್ಟುಹಬ್ಬ ಆಚರಣೆ

  ರಾಕಿಭಾಯ್ ಯಶ್ ಪತ್ನಿ ಹಾಗೂ ಮಕ್ಕಳ ಸಮೇತ ದುಬೈಗೆ ಹಾರಿದ್ದಾರೆ. ಈ ಬಾರಿ ಹುಟ್ಟುಹಬ್ಬವನ್ನು ಅಲ್ಲೇ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ದುಬೈನಲ್ಲಿ ಅಭಿಮಾನಿಗಳ ಜೊತೆ ಯಶ್ ಕ್ಲಿಕ್ಕಿಸಿಕೊಂಡ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರಣಾಂತರಗಳಿಂದ ಕಳೆದೆರಡು ವರ್ಷ ಹುಟ್ಟುಹಬ್ಬದ ದಿನ ಯಶ್ ಅಭಿಮಾನಿಗಳನ್ನು ಭೇಟಿ ಮಾಡಿರಲಿಲ್ಲ. ಈ ಬಾರಿ ಸಿಗುತ್ತಾರೆ, ನೆಚ್ಚಿನ ನಟನ ಕೈ ಕುಲುಕು ಶುಭಾಶಯ ಕೋರಲು ಕಾಯ್ತಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಇನ್ನು ಯಶ್‌ ಬರ್ತ್‌ಡೇ ಸ್ಪೆಷಲ್ ಕಾಮನ್ ಡಿಪಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  2 ಸಿನಿಮಾಗಳು ರೀ ರಿಲೀಸ್

  2 ಸಿನಿಮಾಗಳು ರೀ ರಿಲೀಸ್


  ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ ರಾಕಿಂಗ್ ಸ್ಟಾರ್ ನಟನೆಯ 2 ಸೂಪರ್ ಹಿಟ್ ಸಿನಿಮಾಗಳು ಇವತ್ತು ರೀ ರಿಲೀಸ್ ಆಗ್ತಿದೆ. 8 ವರ್ಷಗಳ ಹಿಂದೆ ಬಾಕ್ಸಾಫೀಶ್ ಶೇಕ್ ಮಾಡಿದ್ದ 'ಮಿ & ಮಿ ರಾಮಾಚಾರಿ' ಸಿನಿಮಾ ದೊಡ್ಡಮಟ್ಟದಲ್ಲಿ ಮತ್ತೆ ಬೆಳ್ಳಿ ಪರದೆಗೆ ಬಂದಿದೆ. ಸಂತೋಷ್ ಆನಂದ್‌ರಾಮ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯಾಗಿ ನಟಿಸಿದ್ದರು. ಇನ್ನು 'KGF- 2' ಚಿತ್ರವನ್ನು ಕೂಡ ಕೆಲವೆಡೆ ಪ್ರದರ್ಶನ ಮಾಡಲಾಗುತ್ತಿದೆ.

  English summary
  KGF Actor Yash to team up with KVN production house for Yash19 ?. Photos of Yash's Meeting with Producer Venkat Konanki Narayana Goes Viral. know more.
  Sunday, January 8, 2023, 8:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X