»   » ವಯಸ್ಸಾದ ಅಂಬಿಗೆ ಜೋಡಿ ಯಾರು: ಖುಷ್ಬುನಾ? ರಮ್ಯಾ ಕೃಷ್ಣನಾ?

ವಯಸ್ಸಾದ ಅಂಬಿಗೆ ಜೋಡಿ ಯಾರು: ಖುಷ್ಬುನಾ? ರಮ್ಯಾ ಕೃಷ್ಣನಾ?

Posted By:
Subscribe to Filmibeat Kannada
'ಅಂಬಿ ನಿಂಗ್ ವಯಸ್ಸಾಯ್ತೋ' , ನಾಯಕಿಯರಲ್ಲಿ ಬದಲಾಣೆ | FIlmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್ ಈ ಸಿನಿಮಾ. ಅಲ್ಲಿ ರಾಜ್ ಕಿರಣ್ ಮಾಡಿದ್ದ ಪಾತ್ರಕ್ಕೆ ಕನ್ನಡದಲ್ಲಿ ಅಂಬರೀಶ್ ಬಣ್ಣ ಹಚ್ಚಿದ್ದಾರೆ.

ಇದೇ ಸಿನಿಮಾದಲ್ಲಿ ಅಂಬರೀಶ್ ಜೊತೆಗೆ ನಟಿ ಸುಹಾಸಿನಿ ನಟಿಸಲಿದ್ದಾರೆ ಎಂದು ಈ ಹಿಂದೆ ವರದಿ ಆಗಿತ್ತು. ಆದ್ರೀಗ, 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಸುಹಾಸಿನಿ ಕಾಣಿಸಿಕೊಳ್ಳುವುದು ಡೌಟ್.

ಸದ್ಯ ಪೋರ್ಚುಗಲ್ ನಲ್ಲಿ ಇರುವ ಸುಹಾಸಿನಿ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಮುಂದಿನ ಶೆಡ್ಯೂಲ್ ನ ಚಿತ್ರೀಕರಣದಲ್ಲಿ ಭಾಗವಹಿಸುವುದು ಕಷ್ಟ ಸಾಧ್ಯ. ಹೀಗಾಗಿ, ಸುಹಾಸಿನಿ ಬದಲು ಬೇರೆ ನಟಿಯರನ್ನು ಕರೆತರಲು ನಿರ್ದೇಶಕ ಗುರುದತ್ ಪ್ರಯತ್ನಿಸುತ್ತಿದ್ದಾರೆ.

Khushboo or Ramya Krishna to join Ambareesh starrer Ambi ninge vayassaytho

'ಅಂಬಿ ನಿಂಗ್ ವಯಸ್ಸಾಯ್ತೋ' ಫಸ್ಟ್ ಲುಕ್ ಔಟ್: ವಯಸ್ಸಾದ ಅಂಬಿ ಹೇಗ್ ಕಾಣ್ತಾರೆ?

ಮೂಲಗಳ ಪ್ರಕಾರ, ಈಗಾಗಲೇ ನಟಿ ಖುಷ್ಬು ಹಾಗೂ ರಮ್ಯಾ ಕೃಷ್ಣ ಜೊತೆಗೆ ಚಿತ್ರತಂಡ ಒಂದು ಸುತ್ತಿನ ಮಾತುಕತೆ ನಡೆಸಿದೆ. ರಮ್ಯಾ ಕೃಷ್ಣ ಹಾಗೂ ಖುಷ್ಬು ಪೈಕಿ ಯಾರ ಡೇಟ್ ಹೊಂದಾಣಿಕೆ ಆಗುತ್ತೋ, ಅವರು 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ತಯಾರಾಗುತ್ತಿದ್ದು, ಜ್ಯಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕೆ ಇರಲಿದೆ.

English summary
Actress Khushboo or Ramya Krishna to join the sets of Ambareesh starrer Kannada Film 'Ambi ninge vayassaytho' instead of Suhasini.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X