For Quick Alerts
  ALLOW NOTIFICATIONS  
  For Daily Alerts

  ಗಾಸಿಪ್ : ಕಿಚ್ಚ ಸುದೀಪ್ ರಿಂದ ಹೊಸ ಪಾರ್ಟಿ

  By Mahesh
  |

  ಕನ್ನಡ, ಹಿಂದಿ ಹಾಗೂ ತೆಲುಗು ಸೇರಿದಂತೆ ಸುಮಾರು 55ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಬಹುಬೇಡಿಕೆಯ ನಟ ಕಿಚ್ಚ ಸುದೀಪ್ ಅವರನ್ನು ರಾಜಕೀಯ ನಂಟು ಬಿಡುತ್ತಲೇ ಇಲ್ಲ. ಪ್ರತಿ ಸಾರಿ ರಾಜ್ಯದಲ್ಲಿ ಚುನಾವಣೆ ಘೋಷಣೆಯಾದಾಗ ಅಥವಾ ಸುದೀಪ್ ಅಪ್ಪಿ ತಪ್ಪಿ ರಾಜಕೀಯ ಮುಖಂಡರ ಜತೆ ಕಾಣಿಸಿಕೊಂಡಾಗ ಮತ್ತೆ ಅದೇ ಪ್ರಶ್ನೆ ಮೇಲೇಳುತ್ತದೆ... ನೀವು ರಾಜಕೀಯಕ್ಕೆ ಸೇರುತ್ತಿದ್ದೀರಾ? ಯಾವ ಪಾರ್ಟಿ? ಎಲ್ಲಿ ನಿಲ್ಲುತ್ತಾ ಇದ್ದೀರಾ?

  ಇಂಥ ಪ್ರಶ್ನೆಗಳು ಹುಚ್ಚು ಹಿಡಿಸಿದರೂ ಕಿಚ್ಚ ಸಮಾಧಾನದಿಂದಲೆ ಉತ್ತರಿಸುತ್ತಾ ಬಂದಿದ್ದಾರೆ. ನಟ, ನಿರ್ದೇಶಕ, ಗಾಯಕ, ಖಳನಟ, ನಿರೂಪಕ, ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿರುವ 'ಕಿಚ್ಚ ಸುದೀಪ್ ಹೊಸ ಪಾರ್ಟಿ ಆರಂಭಿಸುತ್ತಿದ್ದಾರಂತೆ' ಎಂಬ ಗಾಳಿಸುದ್ದಿಗೆ ಸುದೀಪ್ ಸಾಮಾಜಿಕ ಜಾಲ ತಾಣದ ಮೂಲಕ ಉತ್ತರ ನೀಡಿದ್ದಾರೆ.

  ಚಂದನವನದ ಅಂಗಳದಲ್ಲಿ ಬೆಳಗುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆಲುವಿನ ಓಟ ಮುಂದುವರೆಯುತ್ತಲೇ ಇದೆ ಈಗ' , ಬಚ್ಚನ್ ಗೆಲುವು. ಅಪಾರ ಅಭಿಮಾನಿ ಸಮೂಹ ಹೊಂದಿರುವ ಸುದೀಪ್ ಗೆ ಹುಟ್ಟುಹಬ್ಬದಂದು life begins at forty ಎನ್ನುವ ಮಾತಿನಂತೆ ಅವರ ಮುಂದಿನ ಯೋಚನೆ ಏನು ಎಂದುನಮ್ಮ ಲೇಖನದಲ್ಲಿ ಪ್ರಶ್ನೆ ಹಾಕಿದ್ದೇವು

  ಇದಕ್ಕೆ ಸುದೀಪ್ 'ಚಿತ್ರರಂಗದಲ್ಲಿ ದುಡಿಮೆಯೊಂದೇ ನನಗೆ ಗೊತ್ತಿರುವುದು ರಾಜಕೀಯ ಸೇರುವುದು ಎಲ್ಲಾ ಸುದ್ದಿಗಳು ಸುಳ್ಳು' ಎಂದಿದ್ದಾರೆ. ಸುದೀಪ್ ಟ್ವೀಟ್ ಹಾಗೂ ಅದಕ್ಕೆ ಅಭಿಮಾನಿಗಳ ಪ್ರತಿಕ್ರಿಯೆ ಮುಂದಿದೆ ಓದಿ

  ಗಾಳಿಸುದ್ದಿ ಬಗ್ಗೆ ಸುದೀಪ್

  ಪಾರ್ಟಿ ಎಂದರೆ ಯಾವ ಪಾರ್ಟಿ ಆ ಪಾರ್ಟಿ ಆದ್ರೆ ಓಕೆ.. ಪೊಲಿಟಿಕಲ್ ಪಾರ್ಟಿ ಅಂತೀರಾ ಏಕೆ?

  ಪರೂಲ್ ಪ್ರತಿಕ್ರಿಯೆ

  ಗಾಳಿಸುದ್ದಿ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದಕ್ಕೆ ನಟಿ ಪರೂಲ್ ಯಾದವ್ ಪ್ರತಿಕ್ರಿಯಿಸಿದ್ದು ಹೀಗೆ

  ಫ್ಯಾನ್ಸ್ ಜತೆ ಸುದೀಪ್

  ಇತ್ತೀಚೆಗೆ ಶೂಟಿಂಗ್ ಸಂದರ್ಭದಲ್ಲಿ ಅಭಿಮಾನಿಗಳ ಜತೆ ಸಂತಸದ ಕ್ಷಣ ಹಂಚಿಕೊಂಡ ಸುದೀಪ್, ಅಭಿಮಾನಿಗಳು ತಂದಿದ್ದ ಊಟ ಮಾಡಿ ಸೂಪರ್ ಎಂದಿದ್ದಾರೆ.

  ಅಣ್ಣಾ ಮನೆಗೆ ಬನ್ನಿ

  ಶೂಟಿಂಗ್ ಸಂದರ್ಭದಲ್ಲಿ ಗಾಯಗೊಂಡಿದ್ದ ಸುದೀಪ್ ಅವರನ್ನು ಮನೆಗೆ ಕರೆದ ಅಭಿಮಾನಿ

  ಸುದೀಪ್ ಕಂಠ ನಿಮಗಾಗಿ

  ಶೂಟಿಂಗ್ ಮಧ್ಯೆ ಬಿಡುವು ಸಿಕ್ಕಾಗ ಟ್ವೀಟ್ ಮಾಡುವ ಸುದೀಪ್ ಅವರಿಗೆ ಲಕ್ಷಕ್ಕೂ ಮೀರಿದ ಹಿಂಬಾಲಕರಿದ್ದಾರೆ. ಇತ್ತೀಚೆಗೆ bubbly ವೆಬ್ ಸೈಟ್ ಮೂಲಕ ತಮ್ಮ ವಾಯ್ಸ್ ಸಂದೇಶಗಳನ್ನು ಅಭಿಮಾನಿಗಳಿಗೆ ಕೇಳಿಸುತ್ತಾ ಬಂದಿರುವ ಸುದೀಪ್ ಆವರ ಇತ್ತೀಚಿನ ಸಂದೇಶ ನಿಮಗಾಗಿ

  ಸುದೀಪ್ ಕೈಲಿರುವ ಚಿತ್ರಗಳು

  ಸುದೀಪ್ ಕೈಲಿರುವ ಚಿತ್ರಗಳು

  ಎಸ್ ಎಸ್ ರಾಜಮೌಳಿ ಅವರ ಮುಂದಿನ ಚಿತ್ರ ಬಾಹುಬಲಿಯಲ್ಲಿ ಆಯುಧಗಳ ವ್ಯಾಪಾರಿ ಅಸ್ಲಂ ಖಾನ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.ಸೂರಪ್ಪ ಬಾಬು ನಿರ್ಮಿಸುತ್ತಿರುವ ಈ ದ್ವಿಭಾಷಾ ಚಿತ್ರಕ್ಕೆ ನಾಯಕನಾಗಿ ನಟಿಸುತ್ತಿದ್ದಾರೆ.

  ಈ ನಡುವೆ ರವಿಚಂದ್ರನ್ ಅವರಿಗೆ ಆಕ್ಷನ್ ಕಟ್ ಹೇಳುತ್ತಾ ತೆಲುಗಿನ ಮಿರ್ಚಿ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಸುದೀಪ್ ಸಕತ್ ಬ್ಯುಸಿ ಕಣ್ರಿ.

  English summary
  South India's Sensational Star Kichcha Sudeep denied rumours about his entry into politics. Kichcha tweeted saying he is neither launching any political party nor interested in joining party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X