»   » ಕಿಚ್ಚ ಸುದೀಪ್, ಶ್ರೀದೇವಿ ನಡುವೆ ಏನಿದು ’ಲಿಪ್ ಲಾಕ್’ ಸುದ್ದಿ?

ಕಿಚ್ಚ ಸುದೀಪ್, ಶ್ರೀದೇವಿ ನಡುವೆ ಏನಿದು ’ಲಿಪ್ ಲಾಕ್’ ಸುದ್ದಿ?

Posted By:
Subscribe to Filmibeat Kannada

ಚಿತ್ರೋದ್ಯಮ ಮತ್ತು ಅಂತೆ ಕಂತೆ ಸುದ್ದಿಗಳು ಒಂದೇ ನಾಣ್ಯದ ಎರಡು ಮುಖದಂತೆ. ಆದರೂ, ಕೆಲವು ಸುದ್ದಿಗಳು ಸುಮ್ಮನೆ ಬೆಂಕಿಯಿಲ್ಲದೇ ಹೊಗೆಯಾಡುತ್ತದೆಯೇ ಎನ್ನುವ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕದೇ ಇರದು.

ಇದು ಅಭಿನಯ ಚಕ್ರವರ್ತಿ ಬಿರುದಾಂಕಿತ ಕಿಚ್ಚ ಸುದೀಪ್ ನಟಿಸುತ್ತಿರುವ ತಮಿಳು ಚಿತ್ರದ ಸುದ್ದಿ. ಸಾಮಾಜಿಕ ತಾಣದಲ್ಲಿ ಮತ್ತು ಕಾಲಿವುಡ್ ಚಿತ್ರ ಜಗತ್ತಿನಲ್ಲಿ ಈ ಸುದ್ದಿಗೆ ರೆಕ್ಕೆಪುಕ್ಕಗಳು ಸೇರಿ ಎಗ್ಗಿಲ್ಲದಂತೇ ಹರಿದಾಡುತ್ತಿದೆ.

ಪುಲಿ ಎನ್ನುವ ತಮಿಳು ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವ ವಿಚಾರ ಈಗ ಹಳೆಯ ಸುದ್ದಿ. ಕಿಚ್ಚ ಜೊತೆ ವಿಜಯ್, ಶೃತಿ ಹಾಸನ್, ಹಂಸಿಕಾ ಮೊಟ್ವಾನಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಂದಕಾಲತ್ತಿಲ್ ಬ್ಯೂಟಿ ಶ್ರೀದೇವಿ ಕೂಡಾ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ

ಈ ಸಿನಿಮಾದ ದೃಶ್ಯವೊಂದರಲ್ಲಿ ಸುದೀಪ್ ಲಿಪ್ ಲಾಕ್ ಮಾಡಿದ್ದಾರೆನ್ನುವ ಸುದ್ದಿ ಸುದ್ದಿ ಕಾಲಿವುಡ್/ ಸ್ಯಾಂಡಲ್ ವುಡ್ / ಸಾಮಾಜಿಕ ತಾಣದಲ್ಲಿ ಟಾಕ್ ನಲ್ಲಿರುವ ವಿಷಯ. ಅದೂ, ಹಿರಿಯ ನಟಿ ಶ್ರೀದೇವಿ ಜೊತೆ. ಮುಂದೆ ಓದಿ..

ವಿಜಯ್ ಪ್ರಮುಖ ಭೂಮಿಕೆಯಲ್ಲಿರುವ ಚಿತ್ರ

ದಳಪತಿ ವಿಜಯ್ ಅವರು ತ್ರಿಬಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಸುದೀಪ್ ಮಹಾರಾಜನ ಪಾತ್ರದಲ್ಲಿ, ಹಿರಿಯ ನಟಿ ಶ್ರೀದೇವಿ ಮಹಾರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು.

ಶ್ರೀದೇವಿ ಜೊತೆ ಲಿಪ್ ಪಾಕ್ ಸುದ್ದಿ

ಸುದೀಪ್ ಮತ್ತು ಶ್ರೀದೇವಿ ಇಬ್ಬರೂ ಲಿಪ್ ಲಾಕ್ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಶ್ರೀದೇವಿ ನಿರ್ಮಾಪಕರಿಂದ ಭಾರೀ ಸಂಭಾವನೆ ಎಣಿಸಿಕೊಂಡಿದ್ದಾರೆನ್ನುವ ಸುದ್ದಿಗಳು ಈಗ ಎಲ್ಲಡೆ ಹರಿದಾಡುತ್ತಿವೆ.

ಐದು ಕೋಟಿ

ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಳ್ಳಲು ಶ್ರೀದೇವಿ ಐದು ಕೋಟಿ ಸಂಭಾವನೆಯನ್ನು ನಿರ್ಮಾಪಕರ ಮುಂದಿಟ್ಟಿದ್ದಾರೆ, ಅದಕ್ಕೆ ನಿರ್ಮಾಪಕ ಸೆಲ್ವಕುಮಾರ್ ಮತ್ತು ಶಿಬು ತಮೀನ್ ಮುಲಾಜಿಲ್ಲದೇ ಒಪ್ಪಿಕೊಂಡಿದ್ದಾರಂತೆ ಅನ್ನುವ ಅಂತೆಕಂತೆ ಸುದ್ದಿ ಚಾಲ್ತಿಯಲ್ಲಿದೆ.

ಚಿತ್ರತಂಡದ ಮೂಲದ ಪ್ರಕಾರ

ಚಿತ್ರತಂಡದ ಮೂಲದ ಪ್ರಕಾರ ಸುದೀಪ್ ಈ ಚಿತ್ರದಲ್ಲಿ ರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ದಳಪತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಲಿಪ್ ಲಾಕ್ ಸನ್ನಿವೇಶಗಳಿಲ್ಲ. ಈಗ ಹರಿದಾಡುತ್ತಿರುವ ಸುದ್ದಿ ಬರೀ ವದಂತಿ ಅಷ್ಟೇ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪುಲಿ ಚಿತ್ರ

90 ಕೋಟಿ ಭಾರೀ ಬಜೆಟಿನ ಪುಲಿ ಚಿತ್ರವನ್ನು ಸೆಲ್ವಕುಮಾರ್ ಮತ್ತು ಶಿಬು ತಮೀನ್ ನಿರ್ಮಿಸುತ್ತಿದ್ದಾರೆ. ಚಿಂಬು ದೇವನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್, ಸುದೀಪ್, ಶ್ರೀದೇವಿ, ಹಂಸಿಕಾ, ಶೃತಿ, ಪ್ರಭು, ನಂದಿತಾ ಮುಂತಾದ ಭಾರೀ ತಾರಾಗಣವೇ ಇದೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.

English summary
Kichcha Sudeep and Senior actress Sridevi in Lip lock scene in Tamil movie 'Puli', rumour.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada