»   » ಬೆಂಗಳೂರು ಮಾಲ್ ನಲ್ಲಿ 'ಸ್ಟಾರ್' ನಟನ ಮಗನ ಕಿಡ್ನ್ಯಾಪ್ ಯತ್ನ?

ಬೆಂಗಳೂರು ಮಾಲ್ ನಲ್ಲಿ 'ಸ್ಟಾರ್' ನಟನ ಮಗನ ಕಿಡ್ನ್ಯಾಪ್ ಯತ್ನ?

Posted By: ಹರಾ
Subscribe to Filmibeat Kannada

ಶ್ರೀಮಂತರ ಮಕ್ಕಳನ್ನು ಕಿಡ್ನ್ಯಾಪ್ ಮಾಡುವುದು. ನಂತರ ಬ್ಲಾಕ್ ಮೇಲ್ ಮಾಡುವುದು. ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಅವರ ಹತ್ತಿರ ದುಡ್ಡು ಕೀಳುವುದು....ಇದನ್ನೆಲ್ಲಾ ನಾವು ಸಿನಿಮಾದಲ್ಲಿ ನೋಡಿರ್ತೀವಿ.

ಕಿಡ್ನ್ಯಾಪ್ ಸನ್ನಿವೇಶವನ್ನು ನಾವೀಗ ನಿಮಗೆ ನೆನಪಿಸುತ್ತಿರುವುದಕ್ಕೆ ಕಾರಣ ಕಳೆದ ಭಾನುವಾರ ಬೆಂಗಳೂರಿನ ಮಾಲ್ ವೊಂದರಲ್ಲಿ ನಡೆದ ಘಟನೆ. ಕನ್ನಡದ ಪ್ರಖ್ಯಾತ ನಟರೊಬ್ಬರ ಮಗನ ಕಿಡ್ನ್ಯಾಪ್ ಯತ್ನ ಸಿಲಿಕಾನ್ ಸಿಟಿಯ ಪ್ರತಿಷ್ಟಿತ ಮಾಲ್ ವೊಂದರಲ್ಲಿ ನಡೆದಿದೆ.

ಅರೇ...ಹೌದಾ ಅಂತ ಹುಬ್ಬೇರಿಸುವ ಮುನ್ನ ಅಲ್ಲಿ ಏನೇನಾಯ್ತು ಅಂತ ಸಂಪೂರ್ಣ ವಿವರ ಹೇಳ್ತೀವಿ...ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

ಮಾಲ್ ನಲ್ಲಿ ಕಿಡ್ನ್ಯಾಪ್ ಯತ್ನ

ಅವತ್ತು ಭಾನುವಾರ. ಶಾಪಿಂಗ್ ಗೆ ಅಂತ ಕನ್ನಡ ಚಿತ್ರರಂಗದ ನಟರೊಬ್ಬರ ಫ್ಯಾಮಿಲಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ಪ್ರತಿಷ್ಟಿತ ಮಾಲ್ ಗೆ ತೆರಳಿತ್ತು. ಶಾಪಿಂಗ್ ಸಂಭ್ರಮದಲ್ಲಿ ಎಲ್ಲರೂ ಮುಳುಗಿದ್ದರು. ಆಗಲೇ ಅವಾಂತರ ಆಗಿದ್ದು.

ಮೂವರು ಮಹಿಳೆಯರಿಂದ ಕಿಡ್ನ್ಯಾಪ್ ಯತ್ನ?

ಕನ್ನಡ ನಟನ ಫ್ಯಾಮಿಲಿಯನ್ನು ಫಾಲೋ ಮಾಡುತ್ತಿದ್ದ ಮೂವರು ಮಹಿಳೆಯರು, ನಟನ ಪತ್ನಿಯೊಂದಿಗೆ ಮಾತಿಗಿಳಿದಿದ್ದಾರೆ. ಮಾತಿನ ಸೋಗಿನಲ್ಲಿ ಅಮ್ಮನನ್ನು ಪಕ್ಕಕ್ಕೆ ತಳ್ಳಿ, ಮಗನನ್ನು ಅಪಹರಿಸುವುದಕ್ಕೆ ಮೂವರು ಮಹಿಳೆಯರು ಯತ್ನಿಸಿದ್ದಾರೆ.

ಯಾಮಾರಲಿಲ್ಲ ನಟನ ಪತ್ನಿ

ಮೂವರು ಮಹಿಳೆಯರ ಬಗ್ಗೆ ಅನುಮಾನ ಹೊಂದಿದ್ದ ನಟನ ಪತ್ನಿ ಜಾಗರೂಕವಾಗಿದ್ದರು. ಮಗನ ಅಪಹರಣಕ್ಕೆ ಯತ್ನಿಸಿದಾಗ, ಜೋರಾಗಿ ಕೂಗಾಡಿದ್ದಾರೆ. ಆಗ ಮಗನನ್ನು ಅಲ್ಲೇ ಬಿಟ್ಟು, ಮೂವರು ಮಹಿಳೆಯರು ಎಸ್ಕೇಪ್ ಆಗಿದ್ದಾರೆ.

ಸಿಕ್ಯುರೆಟಿ ಸಹಾಯ ಸಿಗಲಿಲ್ಲ

ಮೂವರು ಮಹಿಳೆಯರನ್ನು ಹಿಡಿಯುವುದಕ್ಕೆ ನಟನ ಪತ್ನಿ ಯತ್ನಿಸಿದ್ದಾರೆ. ಆದ್ರೆ, ಅವರಿಗೆ ಮಾಲ್ ನ ಸೆಕ್ಯುರಿಟಿಗಳು ಸಹಕಾರ ನೀಡಲಿಲ್ಲ ಅಂತ ನಟ ಹಾಗು ಅವರ ಪತ್ನಿ ಬೇಸರ ವ್ಯಕ್ತಪಡಿಸುತ್ತಾರೆ.

ಸಿಸಿಟಿವಿ ಫುಟೇಜ್ ನಲ್ಲಿ ಗೊತ್ತಾಗಿದ್ದೇನು?

ನಂತರ ಮಾಲ್ ನ ಸಿಸಿಟಿವಿ ಫುಟೇಜ್ ನೋಡಿದ ನಟನ ದಂಪತಿಗೆ ಶಾಕ್ ಆಗಿದೆ. ಆ ಮೂವರು ಮಹಿಳೆಯರು ಮಾಲ್ ನಲ್ಲಿ ಬಹುಕಾಲದಿಂದ ರೌಂಡ್ ಹೊಡೆಯುತ್ತಿದ್ದರು. ಅನೇಕ ಮಕ್ಕಳ ಮೇಲೆ ಅವರು ಕಣ್ಣಿಟ್ಟಿದ್ದು ಸಿಸಿಟಿವಿ ಫುಟೇಜ್ ನಲ್ಲಿ ಸ್ಪಷ್ಟವಾಗಿದೆ.

ಸೆಕ್ಯುರಿಟಿಗಳಿಗೆ ಭಾಷೆ ಬರುವುದಿಲ್ಲ.!

ಅನೇಕ ಮಾಲ್ ಗಳಲ್ಲಿರುವ ದೊಡ್ಡ ಸಮಸ್ಯೆ ಇದು. ನಟನ ಪತ್ನಿ ಹಾಗು ಮಗು ಅಪಾಯದಲ್ಲಿ ಸಿಲುಕಿದ್ದಾಗ ಸೆಕ್ಯುರಿಟಿಗಳಿಗೆ ಏನಾಗುತ್ತಿದೆ ಅಂತ ಅರ್ಥವಾಗ್ಲಿಲ್ಲ. ಕಾರಣ ಅವರಿಗೆ ಕನ್ನಡ ಬರಲ್ಲ. ಕನ್ನಡ ಇರಲಿ, ಅಸ್ಸಾಂ, ಮೇಘಾಲಯದಿಂದ ಇಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಅಂತ ಬಂದಿರುವ ಅನೇಕರಿಗೆ ಇಂಗ್ಲೀಷ್ ಭಾಷೆ ಕೂಡ ಬರೋದಿಲ್ಲ. ಹೀಗಾಗಿ, ಸೆಕ್ಯುರಿಟಿಗಳ ನಡವಳಿಕೆ ಕಂಡು ಕನ್ನಡ ನಟ ಬೇಸರಗೊಂಡಿದ್ದಾರೆ.

ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರಾ?

ಅಪಹರಣ ಯತ್ನದ ಬಗ್ಗೆ ಕನ್ನಡ ನಟ ಪೊಲೀಸ್ ಕಂಪ್ಲೇಂಟ್ ಕೊಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಯಾರು ಆ ಕನ್ನಡ ನಟ?

ಘಟನೆ ಬಗ್ಗೆ ಕನ್ನಡ ಚಿತ್ರರಂಗದ 'ಖ್ಯಾತ' ನಟ ಅಪ್ ಸೆಟ್ ಆಗಿದ್ದಾರೆ. ಹೀಗಾಗಿ ತಮ್ಮ ಐಡೆಂಡಿಟಿಯನ್ನು ಬಹಿರಂಗಗೊಳಿಸುವುದು ಅವರಿಗೆ ಇಷ್ಟವಿಲ್ಲ.

ಓದುಗರೇ ಹುಷಾರಾಗಿರಿ.!

ಹೈಫೈ ಮಾಲ್ ನಲ್ಲೂ, ಸೆಕ್ಯೂರಿಟಿ ಚೆಕ್ ಟೈಟ್ ಆಗಿದ್ದರೂ, ಎಲ್ಲೆಡೆ ಸಿಸಿಟಿವಿ ಹಾಕಿದ್ದರೂ, ಕಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ. ದುಡ್ಡಿಗಾಗಿ ಕಿಡ್ನ್ಯಾಪ್ ಕೂಡ ಮಾಡ್ತಾರೆ. ನಿಮ್ಮ ನಿಮ್ಮ ಹುಷಾರಲ್ಲಿ ನೀವಿದ್ದರೆ ಒಳಿತು. (Source : Times of India)

English summary
Three women tried to kidnap a son of Kannada Actor (Identity is kept under wraps) at a mall in Rajajinagar, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada