Don't Miss!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- News
ವಿಚ್ಛೇದನ ಪ್ರಕರಣ: ಪತ್ನಿಯ ಜೀವನಾಂಶ ₹40 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್
- Technology
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೃತಿ ಶೆಟ್ಟಿಯನ್ನು ತಿರಸ್ಕರಿಸಿದ ತೆಲುಗು ಸ್ಟಾರ್ ನಟರು: ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ!
ಸಾಮಾಜಿಕ ಜಾಲತಾಣದಲ್ಲಿ ಹೆಸರುವಾಸಿಯಾಗಿದ್ದ ಯುವ ನಟಿ ಕೃತಿ ಶೆಟ್ಟಿ ಚೊಚ್ಚಲ ಚಿತ್ರ 'ಉಪ್ಪೆನ' ಮೂಲಕ ಖ್ಯಾತಿ ಗಳಿಸಿದ್ದಾರೆ. 'ಉಪ್ಪೆನ' ಯಶಸ್ಸಿನ ನಂತರ ನಾನಿ ಜೊತೆಗೆ 'ಶ್ಯಾಮ್ ಸಿಂಗ ರಾಯ್', ಬಂಗಾರರಾಜು, ವಾರಿಯರ್ ಮತ್ತು ಮಾಚರ್ಲಾ ಚಿತ್ರಗಳು ಸೇರಿದಂತೆ ಸತತವಾಗಿ ಅನೇಕ ಸಿನಿಮಾಗಳು ಸಿಕ್ಕಿವೆ.
ಆದರೆ ಈ ಚಿತ್ರಗಳನ್ನು ಹೊರತು ಪಡಿಸಿ, ಸ್ಟಾರ್ ನಟರ ಜೊತೆಗೆ ನಟಿಸಬೇಕು ಎನ್ನುವ ಆಸೆ ಕೃತಿ ಶೆಟ್ಟಿಗೆ ಇದೆ. ಹಾಗಾಗಿ ಕೃತಿ ಶೆಟ್ಟಿ ತೆಲುಗಿನ ಸ್ಟಾರ್ ನಟರ ಜೊತೆಗೆ ಸಿನಿಮಾ ಮಾಡಬೇಕು ಎನ್ನುವ ಬಗ್ಗೆ ಮಹತ್ತರ ಆಸೆಯನ್ನು ಹೊಂದಿದ್ದಾರಂತೆ. ಹಾಗಾಗಿ ತಮ್ಮ ಮ್ಯಾನೇಜರ್‌ಗೆ ಸ್ಟಾರ್ ನಟರ ಸಿನಿಮಾಗಳನ್ನು ಹಿಡಿಯುಂತೆ ತಾಕೀತು ಮಾಡಿದ್ದಾರಂತೆ.
'ಕೆಜಿಎಫ್
2'
ನಿಂದ
'ಪುಷ್ಪ
2'
ಕಥೆ
ಬದಲಾಗುತ್ತಾ?
ಏನಂತಾರೆ
ನಿರ್ಮಾಪಕರು?
ಈ ಬಗ್ಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಹಬ್ಬಿದ್ದು, ಕೃತಿ ಮ್ಯಾನೇಜರ್ ಅರಸಿ ಹೋದ ಸ್ಟಾರ್ ನಿರ್ದೇಶಕ, ನಟರು ಆಕೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ. ಯಾಕೆ ತಿರಸ್ಕರಿಸಲಾಗಿದೆ ಎನ್ನುವ ಬಗ್ಗೆಯೂ ಸುದ್ದಿ ಹಬ್ಬಿದೆ.

ಕೃತಿ ಶೆಟ್ಟಿಯನ್ನು ತಿರಸ್ಕರಿಸಿದರಾ ರಾಮ್ ಚರಣ್, ಮಹೇಶ್ ಬಾಬು, ಪ್ರಭಾಸ್!
ಹೀಗೊಂದು ಗಾಸಿಪ್ ಟಾಲಿವುಡ್‌ನಲ್ಲಿ ಜೋರಗಿ ಹರಿದಾಡುತ್ತಾ ಇದೆ. ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಪ್ರಭಾಸ್, ಮಹೇಶ್ ಮತ್ತು ಇತರ ದೊಡ್ಡ ಸ್ಟಾರ್ ಚಿತ್ರಗಳಲ್ಲಿ ಅವಕಾಶ ಪಡೆಯುವಂತೆ ತನ್ನ ಮ್ಯಾನೇಜರ್‌ಗೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಸ್ಟಾರ್ ಹೀರೋಗಳಿಂದ ತಿರಸ್ಕಾರದ ಉತ್ತರ ಸಿಕ್ಕಿದೆ ಎಂದು ಟಾಲಿವುಡ್ ಅಂಗಳದಲ್ಲಿ ವರದಿ ಆಗಿದೆ. ಇದರಿಂದ ಕೃತಿ ಶೆಟ್ಟಗೆ ಶಾಕ್ ಆಗಿದೆಯಂತೆ.

ಮತ್ತಷ್ಟು ಗ್ಲಾಮರಸ್ ಆಗಬೇಕಂತೆ ಕೃತಿ ಶೆಟ್ಟಿ!
ಇನ್ನು ಈ ತಿರಸ್ಕಾರಕ್ಕೆ ಟಾಲಿವುಡ್‌ನಲ್ಲಿ ಹಲವು ಕಾರಣಗಳು ಹುಟ್ಟಿಕೊಂಡಿವೆ. ಸ್ಟಾರ್ ನಟರ ಜೊತೆಗೆ ನಟಿಸ ಬೇಕು ಎಂದರೆ ಕಾಜಲ್ ಅಗರ್ವಾಲ್ ಅಥವಾ ಪೂಜಾ ಹೆಗ್ಡೆ ಅವರಂತೆ ತೆರೆಯ ಮೇಲೆ ಗ್ಲಾಮರ್ ಆಗಿರಬೇಕು, ಇಲ್ಲವೇ ಕೀರ್ತಿ ಸುರೇಶ್ ಅವರಂತಹ ಅದ್ಭುತ ನಟಿಯಾಗಬೇಕು. ಅಥವಾ ಅವರು ಸಮಂತಾ ಮತ್ತು ರಶ್ಮಿಕಾ ಮಂದಣ್ಣ ಅವರಂತೆ ಎರಡರ ಮಿಶ್ರಣವಾಗಬೇಕು ಈ ಮಾನದಂಡಗಳನ್ನು ಕೃತಿ ಪೂರೈಸುವುದು ಬಾಕಿ ಎನ್ನಲಾಗುತ್ತಿದೆ.

ಕೃತಿ ಶೆಟ್ಟಿ ಬಗ್ಗೆ ಹೀಗೊಂದು ಗಾಳಿ ಸುದ್ದಿ!
ಈ ಎಲ್ಲಾ ಕಾರಣಗಳಿಂದ ನಟಿ ಕೃತಿಗೆ ತೆಲುಗಿನ ಸ್ಟಾರ್ ನಟರು, ನಿರ್ದೇಶಕರು ಸಿಗುತ್ತಾ ಇಲ್ಲ ಎನ್ನುವ ಗಾಳಿ ಸುದ್ದಿ ಹಬ್ಬಿದೆ. ಹಾಗಂತ ಕೃತಿ ಖಾಲಿ ಕೈಯಲ್ಲಿ ಕೂತಿಲ್ಲ. ಸಾಕಷ್ಟು ಸಿನಿಮಾಗಳು ಆಕೆಯನ್ನು ಅರಸಿ ಬರುತ್ತಿವೆ. ಅಂತೆಯೇ ಕೃತಿ ಹಲವು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ಶಾಮ ಸಿಂಗ ರಾಯ್, ಉಪ್ಪೇನ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕೃತಿ ಕಾಣಿಸಿಕೊಂಡಿದ್ದಾರೆ.

ಗಾಸಿಪ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದ ಕೃತಿ!
ಈ ಹಿಂದೆ ಕೃತಿ ತಮ್ಮ ಬಗ್ಗೆ ಚಿತ್ರರಂಗದಲ್ಲಿ ಹಬ್ಬುತ್ತಿರುವ ಗಾಸಿಪ್ ಸುದ್ದಿಗಳಿಗೆ ಬೇಸರ ವ್ಯಕ್ತಪಡಿಸಿದ್ದರು. ಇಲ್ಲ ಸಲ್ಲದ ರೂಮರ್‌ಗಳನ್ನು ಹಬ್ಬಿಸ ಬೇಡಿ ಎಂದಿದ್ದರು. ಏನು ಇಲ್ಲದಿದ್ದರು ತಮ್ಮ ಬಗ್ಗೆ ಗಾಸಿಪ್‌ಗಳು ಹಬ್ಬುತ್ತಿವೆ ಎಂದು ಬೇಸರಗೊಂಡಿದ್ದರು. ಅದು ಬಿಟ್ಟರೆ ನಟ ಬಾಲಯ್ಯನ ಚಿತ್ರವನ್ನು ತಿರಸ್ಕರಿಸಿ ಸುದ್ದಿ ಆಗಿದ್ದರು. ಬಾಲಯ್ಯನ ವಯಸ್ಸಿನ ಕಾರಣಕ್ಕೆ ಕೃತಿ ಚಿತ್ರವನ್ನು ತಿರಸ್ಕರಿಸಿದ್ದಾರೆ ಎಂದು ಸುದ್ದಿ ಆಗಿತ್ತು.