»   » ಡಬ್ಬಿಂಗ್, ಕನ್ನಡಕ್ಕೆ ಪೂರಕವೇ ಮಾರಕವೇ ಜನರೇ ನಿರ್ಧರಿಸಲಿ

ಡಬ್ಬಿಂಗ್, ಕನ್ನಡಕ್ಕೆ ಪೂರಕವೇ ಮಾರಕವೇ ಜನರೇ ನಿರ್ಧರಿಸಲಿ

Posted By:
Subscribe to Filmibeat Kannada

ಡಬ್ಬಿಂಗ್ ಕನ್ನಡಕ್ಕೆ ಪೂರಕವೇ ಹೊರತು ಮಾರಕವಲ್ಲ. ತನ್ನ ನಾಡಿನಲ್ಲಿ ತನ್ನ ನುಡಿಯಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬನ ಹಕ್ಕು. ಡಬ್ಬಿಂಗ್ ನಿಷೇಧ ಎಂಬ ಗುಮ್ಮ ಕನ್ನಡಿಗರಿಗೆ ಮನರಂಜನೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವ ಈ ಹಕ್ಕನ್ನು ಕಸಿದುಕೊಳ್ಳುತ್ತಲಿದೆ ಎಂದು ಡಬ್ಬಿಂಗ್ ಪರ ಇರುವವರು ಹೇಳುತ್ತಿದ್ದಾರೆ. ಡಬ್ಬಿಂಗ್ ಬಂದರೆ ಕಾರ್ಮಿಕರಿಗೆ ತೊಂದರೆ, ಸಂಸ್ಕೃತಿಗೆ ತೊಂದರೆ, ಆದರೆ, ಇದರೆ, ಹೋದರೆ, ಎಂಬ ಮಾತುಗಳು ಸಿನಿಕರ್ಮಿಗಳಿಂದ ಕೇಳಿ ಬಂದಿದೆ.

ಯಾಕ್ರಿ ಈ ಕಿತ್ತಾಟ, ವ್ಯಾಜ್ಯ ನಮ್ಮ ನಮ್ಮೊಡನೆ ಈ ಬಗ್ಗೆ ಜನರೇ ನಿರ್ಧರಿಸಲಿ, ಚೆನ್ನಾಗಿರುವ ಚಿತ್ರಗಳು ಬಂದಾಗ ಕನ್ನಡ ಸಿನಿರಸಿಕರು ಕೈ ಹಿಡಿದು ಮುನ್ನಡೆಸಿದ್ದಾರೆ. ಸಾರ್ವಜನಿಕರೇ ಖುದ್ದು ಹಣ ತೊಡಗಿಸಿ ಚಿತ್ರ ಗೆಲ್ಲಿಸಿದ್ದಕ್ಕೆ ಲೂಸಿಯಾಗಿಂತ ದೊಡ್ಡ ಉದಾಹರಣೆ ಬೇಡ. [ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ]

ನಮಗೆ ಬೇಕಾಗಿರುವುದು ಅಪ್ಪಟ ಸದಭಿರುಚಿಯ ಚಿತ್ರ ಮಾತ್ರ. ಡಬ್ಬಿಂಗ್, ರಿಮೇಕ್, ಸ್ವಮೇಕ್, ರೀಮಿಕ್ಸ್, ಸ್ಪೂರ್ತಿ ಪಡೆದ ಚಿತ್ರಗಳು ಹೀಗೆ ಏನೇ ಬರಲಿ ಚಿತ್ರದಲ್ಲಿ ಗಟ್ಟಿತನ ಇದ್ದರೆ ಮಾತ್ರ ಉಳಿಯುತ್ತದೆ. ಜೊಳ್ಳು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತದೆ. ['ಸಿದ್ದರಾಮಯ್ಯ ಅವರೇ, ಡಬ್ಬಿಂಗ್ ನಿಷೇಧ ತೆರವು ಮಾಡಿ']

ಅಪ್ಪ ಹಾಕಿದ ಆಲದ ಮರ ಎಂದು ನೇಣು ಹಾಕಿಕೊಳ್ಳುವ ಬದಲು ಆಲದ ಮರ ಉಳಿಸಿ ಬೆಳೆಸಲು ಎಲ್ಲರೂ ಒಂದಾದರೆ ಒಳ್ಳೆಯದು. ಇಲ್ಲದಿದ್ದರೆ ಅಕ್ಕ ಪಕ್ಕದ ರಾಜ್ಯದವರು ಆಡಿಕೊಂಡು ನಗುತ್ತಾರೆ ಅಷ್ಟೇ.[ಡಬ್ಬಿಂಗ್ ಬೇಕೋ ಬೇಡವೋ : ಚರ್ಚೆ ಮುಂದುವರಿಯಲಿ]

ಸಿಸಿಐ ಕೊಟ್ಟ ನಿರ್ಣಯದ ಬಗ್ಗೆ ಇಲ್ಲಿ ಓದಿರುತ್ತೀರಿ. ಮುಂದೇನು? ಸಾಹಿತ್ಯ ವಲಯದ ಅಭಿಪ್ರಾಯ, ಎಂದೂ ಮುಗಿಯದ ಈ ಸಮರಕ್ಕೆ ಸಂಧಾನ ಸಾಧ್ಯವೇ? ಮುಂದೆ ಓದಿ...

ಜ್ಞಾನಪೀಠ ವಿಜೇತ ಸಾಹಿತಿಗಳ ಅಭಿಪ್ರಾಯ
  

ಜ್ಞಾನಪೀಠ ವಿಜೇತ ಸಾಹಿತಿಗಳ ಅಭಿಪ್ರಾಯ

ಭಾರತದಲ್ಲಿ ಸಾವಿರಾರು ಚಿತ್ರಗಳು ತೆರೆ ಕಾಣುತ್ತವೆ. ಸಾವಿರಾರು ಕಥೆಗಳನ್ನು ಹೆಕ್ಕಿ ತೆಗೆಯುವುದು ಕಷ್ಟದ ಕೆಲಸ. ಉತ್ತಮ ಚಿತ್ರಗಳನ್ನು ರಿಮೇಕ್ ಮಾಡುವುದರಲ್ಲಿ ತಪ್ಪೇನಿಲ್ಲ. ಇದನ್ನು ತಪ್ಪಿಸಲೂ ಸಾಧ್ಯವಿಲ್ಲ. ರಿಮೇಕ್ ಚಿತ್ರಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಡಬ್ಬಿಂಗ್ ಚಿತ್ರವನ್ನು ನಾನು ವಿರೋಧಿಸುತ್ತೇನೆ ಎಂದು ಗಿರೀಶ್ ಕಾರ್ನಾಡ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಅಫ್ ಕೋರ್ಸ್ ಎಸ್ ಎಲ್ ಭೈರಪ್ಪ ಅವರು ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದರು.

ರಿಮೇಕ್ -ಡಬ್ಬಿಂಗ್ ಎರಡೂ ಬೇಡ : ಎಸ್ ಎಲ್ ಭೈರಪ್ಪ
  

ರಿಮೇಕ್ -ಡಬ್ಬಿಂಗ್ ಎರಡೂ ಬೇಡ : ಎಸ್ ಎಲ್ ಭೈರಪ್ಪ

ರೀಮೇಕ್‌ ಅಥವಾ ಡಬ್ಬಿಂಗ್‌ ಮಾಡುವುದೆಂದರೆ, ಒಂದು ಸಂಸ್ಕೃತಿಯನ್ನು ಕೊಂದಂತೆ. ಡಬ್ಬಿಂಗ್‌ ಕೇವಲ ನಮ್ಮ ತಂತ್ರಜ್ಞರ ಕೆಲಸವನ್ನಷ್ಟೇ ಕಿತ್ತುಕೊಳ್ಳುವುದಿಲ್ಲ. ಬದಲಾಗಿ, ನಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುವ ಅವಕಾಶವನ್ನೇ ಕೊಲ್ಲುತ್ತದೆ'

ಒಂದು ಸಾಹಿತ್ಯದ ಕೃತಿಯನ್ನು ಬೇರೆ ಭಾಷೆಗೆ ಅನುವಾದ ಮಾಡಿದಾಗ ಅಲ್ಲಿ ಸಂಸ್ಕೃತಿಗಿಂತ ಹೆಚ್ಚಾಗಿ ಕಥೆಯ ಅನುವಾದವಾಗುತ್ತದೆ. ಆದರೆ, ಸಿನಿಮಾ ಹಾಗಲ್ಲ. ಅದು ನಟನೆ, ಸಂಗೀತ, ಸಾಹಿತ್ಯ, ಪರಿಸರ ಇತ್ಯಾದಿಗಳಿಂದ ಒಂದು ಭಾಷೆಗೆ ಹೊಂದಿಕೊಂಡಿರುತ್ತದೆ. ಇದನ್ನು ಬೇರೊಂದು ಭಾಷೆಗೆ ತರ್ಜುಮೆ ಮಾಡುವಾಗ ಅಲ್ಲಿರುವ ಮೂಲ ಸಂಸ್ಕೃತಿಯನ್ನು ನಾಶಪಡಿಸಿದಂತಾಗುತ್ತದೆ.

ಡಬ್ಬಿಂಗ್ ಎಂಬುದು ಸಂತೆಯ ಸೂಳೆ ಇದ್ದಂತೆ
  

ಡಬ್ಬಿಂಗ್ ಎಂಬುದು ಸಂತೆಯ ಸೂಳೆ ಇದ್ದಂತೆ

ಪಾಪು ಅವರು ಒಂದು ಮಾತನ್ನು ಹೇಳಿದರು. ಡಬ್ಬಿಂಗ್ ಎಂಬುದು ಸಂತೆಯ ಸೂಳೆ ಇದ್ದಂಗೆ. ನಮ್ಮನೆ ಹೆಣ್ಮಕ್ಕಳನ್ನು ಆ ಕಡೆ ತಳ್ಳಬೇಡಿ ಎಂಬಂತಹ ಒಂದು ಮಾತನ್ನು ಇಂದು ಪುಟ್ಟಪ್ಪನವರು ಹೇಳಿದ್ದರು. ಇದೇ ಅರ್ಥ ಬರುವಂಥ ಮಾತುಗಳನ್ನು ನಿನ್ನೆ ದಿನ ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ಚಿತ್ರಕರ್ಮಿ ಬಿ ಸುರೇಶ ಅವರು ಆಡಿದ್ದಾರೆ.

ಸಿಸಿಐ ಮುಂದೆ ಗಣೇಶ್ ಚೇತನ್ ತಂಡದ ವಾದ
  

ಸಿಸಿಐ ಮುಂದೆ ಗಣೇಶ್ ಚೇತನ್ ತಂಡದ ವಾದ

ಕನ್ನಡ ಗ್ರಾಹಕರ ಒಕ್ಕೂಟ ಹಾಗೂ ಗಣೇಶ್ ಚೇತನ್ ಅವರು ಮಂಡಿಸಿದ ವಾದ ಪುರಸ್ಕರಿಸಿದ ಸಿಸಿಐ, ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಸಂಘಟನೆ, ಸಂಘ, (ಒಂದು ಕೂಡಾ ಕಾನೂನು ಬದ್ಧ ಸಂಸ್ಥೆ ಅಲ್ಲ) ಗಳಿಗೆ ದಂಡ ವಿಧಿಸಿದೆ. ಸಿಸಿಐ ಹೇಳಿದ್ದೇ ಅಂತಿಮವಲ್ಲ ಎಂದು ನಿರ್ದೇಶಕ, ನಿರ್ಮಾಪಕ, ಕಲಾವಿದರು ಹೀಗೆ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಬಹುದು. ಸರ್ಕಾರ ಮಧ್ಯೆ ಪ್ರವೇಶಿಸಿದರೆ ಮಾತ್ರ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಬಹುದು. ಇಲ್ಲದಿದ್ದರೆ ವಾದ ವಿವಾದ ಕೋರ್ಟಿನಲ್ಲಿ ಕಾಣಬಹುದು.

ಡಬ್ಬಿಂಗ್ ಗಾಗಿ ಕಾದು ಸೋತ ಚಿತ್ರ, ಸೀರಿಯಲ್ಸ್
  

ಡಬ್ಬಿಂಗ್ ಗಾಗಿ ಕಾದು ಸೋತ ಚಿತ್ರ, ಸೀರಿಯಲ್ಸ್

ಡಬ್ಬಿಂಗ್ ಗಾಗಿ ಕಾದು ಸೋತ ಚಿತ್ರ, ಸೀರಿಯಲ್ಸ್ ಪಟ್ಟಿಯಲ್ಲಿ 1999ರಲ್ಲಿ ಪ್ರಸಾರವಾದ ಟಿಪ್ಪು ಸುಲ್ತಾನ್, 1990 ರ ಶ್ರೀರಾಮಾಯಣ, 2011ರ ನಾರಿ ಝಾನ್ಸಿ ರಾಣಿ, 2012ರ ರಿಯಾಲಿಟಿ ಶೋ ಸತ್ಯಮೇವ ಜಯತೇ, 1963ರ ಚಿತ್ರ ಲವ ಕುಶ, ಭಾರತ್ 2000, ಆ ಮರ್ಮ, ನಮಿತಾ ಐ ಲವ್ ಯೂ, ಶ್ವೇತನಾಗ ಮುಂತಾದವುಗಳು ಚರ್ಚೆಯಾಗಿವೆ.

ಸಿಸಿಐ ಆದೇಶ ಯಥಾವತ್ತು ಪಾಲಿಸಿದರೆ ತೊಂದರೆ
  

ಸಿಸಿಐ ಆದೇಶ ಯಥಾವತ್ತು ಪಾಲಿಸಿದರೆ ತೊಂದರೆ

ಡಬ್ಬಿಂಗ್ ಬಂದರೆ ಬರಲಿ ಎಂದು ಅದಕ್ಕೆ ಕಾನೂನಿನ ತೊಡಕೇನಿಲ್ಲ ಎಂದರೆ ತೊಂದರೆಯಾಗಲಿದೆ. ಟಿವಿಯಲ್ಲಿ ಕನಿಷ್ಠ ಇಷ್ಟು ಗಂಟೆಗಳ ಕಾಲ ಕನ್ನಡ ಭಾಷೆ ಆಧಾರಿತ ಕಾರ್ಯಕ್ರಮ ಇರಬೇಕು ಎನ್ನುವ ಹಕ್ಕು ಮಾಯವಾಗಲಿದೆ.ಬೇರೆ ಭಾಷೆ ಕಾರ್ಯಕ್ರಮ ಪ್ರಸಾರವನ್ನು ತಡೆಯಂತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟೇ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ಅಥವಾ ಪರಭಾಷೆ ಸಿನಿಮಾ ಪ್ರದರ್ಶನವಾಗಲಿ ಎಂದು ಕೇಳುವ ಹಕ್ಕು ಇರುವುದಿಲ್ಲ.

ಹೀಗೊಂದು ಪರಿಹಾರ ಮಾಡಿಕೊಳ್ಳಿ
  

ಹೀಗೊಂದು ಪರಿಹಾರ ಮಾಡಿಕೊಳ್ಳಿ

* ಹೀಗೊಂದು ಪರಿಹಾರ ಮಾಡಿಕೊಳ್ಳಿ ಸದ್ಯಕ್ಕೆ ಭಾರಿ ಬಜೆಟ್ ಚಿತ್ರ ಉದಾ: ಬಾಹುಬಲಿ ಅಥವಾ ಕನ್ನಡ ಚಿತ್ರರಂಗದಿಂದ ಮಾಡಲು ಸಾಧ್ಯವೇ ಇಲ್ಲ ಎಂಬಂಥ ಚಿತ್ರಕ್ಕೆ ಡಬ್ಬಿಂಗ್ ಅವಕಾಶ ನೀಡಲಿ.
* ಶೈಕ್ಷಣಿಕ ಕಾರ್ಯಕ್ರಮ, ಡಿಸ್ಕವರಿ, ಎನ್ ಜಿಸಿ ಚಾನೆಲ್ ಪೋಗ್ರಾಂಗೆ ಅಡ್ಡಿ ಬೇಡ.
* ಎಲ್ಲಾ ಚಿತ್ರಗಳನ್ನು ಡಬ್ ಮಾಡುವುದು ಬೇಡ.
* ರಿಮೇಕ್ ಚಿತ್ರಗಳ ಸಂಖ್ಯೆ ಗಣನೀಯವಾಗಿ ತಗ್ಗಿಸಿ.
* ಸ್ವಮೇಕ್ ಚಿತ್ರಗಳನ್ನು ಮಾಡಲು ಮನಸ್ಸು ಮಾಡಿ.
* ಇಲ್ಲ ನಮಗೆ ಗಿಟ್ಟಲ್ಲ ಎಂಬುದಾದರೆ ಬೇರೆ ಉದ್ಯಮಕ್ಕೆ ಹೋಗಿ ಹಾಯಾಗಿ ದುಡಿಮೆ ಮಾಡಿ. ಸಂಸ್ಕೃತಿ ಪಾಲಕರಂತೆ ದಯವಿಟ್ಟು ಯಾರೂ ಪೋಸ್ ನೀಡಬೇಡಿ.

English summary
Dubbing does not necessarily destroy the local industry. The option of dubbing can be used to increase our knowledge base says Anand G., Proponent of dubbing culture With CCI order one can conclude let audiences pr cine lovers decide what to watch what not to.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada