For Quick Alerts
  ALLOW NOTIFICATIONS  
  For Daily Alerts

  ಮೇ 31ಕ್ಕೆ ಮಹೇಶ್ ಬಾಬು ಅಭಿಮಾನಿಗಳಿಗೆ ಸಿಗುತ್ತಾ ಭರ್ಜರಿ ಗಿಫ್ಟ್?

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಿರ್ದೇಶಕ ರಾಜಮೌಳಿ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಎಸ್. ರಾಜಮೌಳಿ ಸದ್ಯ ಬಹು ನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಸೆಟ್ಟೇರಿ ಎರಡು ವರ್ಷಗಳಾಗಿದ್ದು, ಸಾಕಷ್ಟು ಚಿತ್ರೀಕರಣ ಸಹ ಮಾಡಿದೆ. ಆರ್ ಆರ್ ಆರ್ ಸಿನಿಮಾವನ್ನು ಮುಂದಿನ ವರ್ಷ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಬೆಳಿಗ್ಗೆ 4:30ಕ್ಕೆ ಶುರುವಾಯ್ತು ಅಪ್ಪು ಪವರ್ ಫುಲ್ ವರ್ಕೌಟ್..! | Puneeth Rajkumar

  ಆರ್ ಆರ್ ಆರ್ ಸಿನಿಮಾ ಚಿತ್ರೀಕರಣದ ನಡುವೆಯೂ ರಾಜಮೌಳಿ ಮತ್ತ ಮಹೇಶ್ ಬಾಬು ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈ ನಡುವೆ ಈಗ ಮೇ 31ಕ್ಕೆ ಪ್ರಿನ್ಸ್ ಮತ್ತು ರಾಜಮೌಳಿ ಸಿನಿಮಾದ ಬಗ್ಗೆ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

  ಮುಂದಿನ ಸಿನಿಮಾ ಸೂಪರ್ ಸ್ಟಾರ್ ಜತೆ: ಖಚಿತಪಡಿಸಿದ ನಿರ್ದೇಶಕ ರಾಜಮೌಳಿಮುಂದಿನ ಸಿನಿಮಾ ಸೂಪರ್ ಸ್ಟಾರ್ ಜತೆ: ಖಚಿತಪಡಿಸಿದ ನಿರ್ದೇಶಕ ರಾಜಮೌಳಿ

  ಮಹೇಶ್ ಬಾಬುಗೆ ರಾಜಮೌಳಿ ನಿರ್ದೇಶನ ಮಾಡುವುದು ಖಚಿತ

  ಮಹೇಶ್ ಬಾಬುಗೆ ರಾಜಮೌಳಿ ನಿರ್ದೇಶನ ಮಾಡುವುದು ಖಚಿತ

  ರಾಜಮೌಳಿ ಅವರ ಮುಂದಿನ ಚಿತ್ರದಲ್ಲಿ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ನಟಿಸುವುದು ಖಚಿತವಾಗಿದೆ. ದುರ್ಗಾ ಆರ್ಟ್ಸ್ ಬ್ಯಾನರ್‌ನಲ್ಲಿ ಕೆ.ಎಲ್ ನಾರಾಯಣ ಸಿನಿಮಾ ನಿರ್ಮಿಸಲಿದ್ದು, ಇದರಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ ಎಂದು ರಾಜಮೌಳಿ ದೃಢಪಡಿಸಿದ್ದಾರೆ.

  ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್‌ಗಾಗಿ ಮಹೇಶ್ ಬಾಬು, ಜೂ. ಎನ್ ಟಿಆರ್ ಪೈಪೋಟಿಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್‌ಗಾಗಿ ಮಹೇಶ್ ಬಾಬು, ಜೂ. ಎನ್ ಟಿಆರ್ ಪೈಪೋಟಿ

  ಮೇ 31ಕ್ಕೆ ಸಿನಿಮಾ ಬಗ್ಗೆ ಮಾಹಿತಿ ಬಹಿರಂಗ ಸಾಧ್ಯತೆ

  ಮೇ 31ಕ್ಕೆ ಸಿನಿಮಾ ಬಗ್ಗೆ ಮಾಹಿತಿ ಬಹಿರಂಗ ಸಾಧ್ಯತೆ

  ಮೇ 31ಕ್ಕೆ ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾದ ಬಗ್ಗೆ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಅಷ್ಟಕ್ಕೂ ಮೇ 31ರಂದು ಯಾಕೆ ಅಂತೀರಾ? ಮೇ 31 ಮಹೇಶ್ ತಂದೆ ಕೃಷ್ಣ ಅವರ ಹುಟ್ಟುಹಬ್ಬ. ತಂದೆಯ ಹುಟ್ಟುಹಬ್ಬದ ದಿನ ಹೊಸ ಸಿನಿಮಾದ ಬಗ್ಗೆ ಅಪ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  ವಿಜಯ್ ದೇವರಕೊಂಡ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬುವಿಜಯ್ ದೇವರಕೊಂಡ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು

  ಮಹೇಶ್ ಬಾಬು ಅಭಿಮಾನಿಗಳಲ್ಲಿ ಸಂತಸ

  ಮಹೇಶ್ ಬಾಬು ಅಭಿಮಾನಿಗಳಲ್ಲಿ ಸಂತಸ

  ಟ್ರೆಂಡ್ ಸೆಟ್ಟರ್ ಆಗಿರುವ ರಾಜಮೌಳಿ ಜೊತೆ ಮಹೇಶ್ ಬಾಬು ಸಿನಿಮಾ ಮಾಡಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಅದರಂತೆ ಈಗ ರಾಜಮೌಳಿ ಮತ್ತು ಮಹೇಶ್ ಸಿನಿಮಾ ಸಿದ್ಧವಾಗುತ್ತಿದೆ. ಮುಂದಿನ ವರ್ಷ ಆರ್ ಆರ್ ಆರ್ ಸಿನಿಮಾ ರಿಲೀಸ್ ನಂತರ ಪ್ರಿನ್ಸ್ ಮತ್ತು ರಾಜಮೌಳಿ ಸಿನಿಮಾ ಸೆಟ್ಟೇರಲಿದೆ. ಈಗಾಗಲೇ ಇಬ್ಬರ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಅಭಿಮಾನಿಗಳು ರೋಮಾಂಚನ ಗೊಂಡಿದ್ದಾರೆ.

  ಮಹೇಶ್ ಬಾಬು ಬಳಿ ಇರುವ ಸಿನಿಮಾ

  ಮಹೇಶ್ ಬಾಬು ಬಳಿ ಇರುವ ಸಿನಿಮಾ

  ಮಹೇಶ್ ಬಾಬು ಗೀತಾ ಗೋವಿಂದಂ ಖ್ಯಾತಿಯ ನಿರ್ದೇಶಕ ಪರಶುರಾಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಲಾಕ್‌ಡೌನ್ ಮುಗಿದ ಬಳಿಕ ಚಿತ್ರೀಕರಣ ಆರಂಭಿಸಲಿದೆ. ಮಹೇಶ್ ಬಾಬು 'ಶ್ರೀಮಂತುಡು' ಚಿತ್ರದ ಖ್ಯಾತಿಯ ನಿರ್ದೇಶಕ ಕೊರಟಲಾ ಶಿವ ಜತೆಗೆ ಮತ್ತೊಂದು ಮನರಂಜನಾ ಪ್ರಧಾನ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ.

  English summary
  Telugu Actor mahesh Babu may Announce of his film with Rajamouli on May 31.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X