For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸ್ಟಾರ್ ನಟನನ್ನು ವಿಲನ್ ಮಾಡಲು ಚಿಂತನೆ!

  |

  'ಸರಿಲೇರು ನೀಕೆವ್ವರು' ಚಿತ್ರದ ಸೂಪರ್ ಸಕ್ಸಸ್ ಬಳಿಕ ಪ್ರಿನ್ಸ್ ಮಹೇಶ್ ಬಾಬು ಮತ್ತೊಂದು ಮೆಗಾ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಪರಶುರಾಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ 'ಸರ್ಕಾರು ವಾರಿ ಪಾಟ' ಎಂದು ಹೆಸರಿಟ್ಟಿದ್ದು, ಒಂದೊಂದೆ ಮಾಹಿತಿಗಳು ಬಹಿರಂಗವಾಗುತ್ತಿದೆ.

  Siddharaj kalyankar , ಹಿರಿಯ ಧಾರವಾಹಿ ಹಾಗು ಚಲನಚಿತ್ರ ನಟ ಇನ್ನಿಲ್ಲ | Filmibeat Kannada

  ಈ ಹಿಂದೆ ನಾಯಕಿ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದ್ದ ಈ ಚಿತ್ರ ಈಗ ಖಳನಾಯಕರ ಕುರಿತಾಗಿ ಭಾರಿ ಕುತೂಹಲ ಮೂಡಿಸಿದೆ. 'ಸರ್ಕಾರು ವಾರಿ ಪಾಟ' ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಅದಕ್ಕಾಗಿ ಬೇರೆ ಇಂಡಸ್ಟ್ರಿಯ ಪ್ರಮುಖ ನಟರನ್ನು ಈ ಚಿತ್ರಕ್ಕಾಗಿ ಕರೆತರಲು ಚಿಂತನೆ ನಡೆದಿದೆಯಂತೆ. ಮುಂದೆ ಓದಿ....

  ಅನಿಲ್ ಕಪೂರ್ ಮೇಲೆ ಕಣ್ಣು

  ಅನಿಲ್ ಕಪೂರ್ ಮೇಲೆ ಕಣ್ಣು

  ಸರ್ಕಾರು ವಾರಿ ಪಾಟ ಚಿತ್ರದ ಕಥೆಯನ್ನು ಪ್ಯಾನ್ ಇಂಡಿಯಾ ಪ್ರೇಕ್ಷಕರಿಗಾಗಿ ಮಾಡಲಾಗಿದ್ದು, ಹಿಂದಿ ಇಂಡಸ್ಟ್ರಿಯಿಂದ ಅನಿಲ್ ಕಪೂರ್ ಅವರನ್ನು ಕರೆತರಲು ಚಿತ್ರತಂಡ ನಿರ್ಧರಿಸಿದೆ. ಇದು ನೆಗಿಟಿವ್ ಪಾತ್ರ ಆಗಿರಲಿದೆ. ಸದ್ಯಕ್ಕೆ ಈ ಬಗ್ಗೆ ಚಿತ್ರತಂಡ ಮಾತ್ರ ಚಿಂತಿಸಿದ್ದು, ಯಾವುದೇ ಮಾತುಕತೆ ಆಗಿಲ್ಲ.

  ಮಹೇಶ್ ಬಾಬು ಹೊಸ ಚಿತ್ರಕ್ಕೆ ಬಾಲಿವುಡ್‌ನ ನವ ನಟಿ ನಾಯಕಿ?ಮಹೇಶ್ ಬಾಬು ಹೊಸ ಚಿತ್ರಕ್ಕೆ ಬಾಲಿವುಡ್‌ನ ನವ ನಟಿ ನಾಯಕಿ?

  ಕನ್ನಡದಿಂದ ಸುದೀಪ್!

  ಕನ್ನಡದಿಂದ ಸುದೀಪ್!

  ಇನ್ನು ಕನ್ನಡ ಇಂಡಸ್ಟ್ರಿಯಿಂದ ಕಿಚ್ಚ ಸುದೀಪ್ ಅವರನ್ನು ಪ್ರಮುಖ ಪಾತ್ರವೊಂದಕ್ಕೆ ಕರೆತರುವ ಬಗ್ಗೆಯೂ ಚಿತ್ರತಂಡ ಚಿಂತಿಸಿದೆಯಂತೆ. ಇದು ಸಹ ನೆಗಿಟಿವ್ ಪಾತ್ರವೇ ಆಗಿರಲಿದೆ ಎನ್ನುವುದು ವಿಶೇಷ. ಈ ಕುರಿತು ಯಾರ ಬಳಿಯೂ ಚರ್ಚಿಸಿಲ್ಲ ಎಂಬ ಮಾಹಿತಿ ಇದೆ.

  ನಾಯಕಿಯರ ಬಗ್ಗೆಯೂ ಕುತೂಹಲ

  ನಾಯಕಿಯರ ಬಗ್ಗೆಯೂ ಕುತೂಹಲ

  ಸರ್ಕಾರು ವಾರಿ ಪಾಟ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ಹೇಳಲಾಗಿದೆ. ಕೀರ್ತಿ ಸುರೇಶ್ ಪ್ರಮುಖ ನಾಯಕಿ ಹಾಗೂ ನಿವೇತಾ ಥಾಮಸ್ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೂ ಮುಂಚೆ ಅನನ್ಯ ಪಾಂಡೆ ಹೆಸರು ಸಹ ಚರ್ಚೆಯಾಗಿದೆ.

  ನವೆಂಬರ್‌ನಲ್ಲಿ ಚಿತ್ರೀಕರಣ!

  ನವೆಂಬರ್‌ನಲ್ಲಿ ಚಿತ್ರೀಕರಣ!

  ಕೊರೊನಾ ವೈರಸ್ ಭೀತಿಯಿಂದ ಸುಮ್ಮನಿದ್ದು ಚಿತ್ರತಂಡ ನವೆಂಬರ್‌ ತಿಂಗಳಿನಿಂದ ರೆಗ್ಯುಲರ್ ಆಗಿ ಶೂಟಿಂಗ್ ಆರಂಭಿಸಲಿದೆ. ಈ ಚಿತ್ರದ ಬಳಿಕ ಅನಿಲ್ ರವಿಪುಡಿ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಪ್ರಿನ್ಸ್ ಮಹೇಶ್ ಬಾಬು.

  English summary
  Telugu actor Mahesh babu upcoming movie sarkar vaari paata movie will start shoot at november.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X