»   » ರವಿಚಂದ್ರನ್ ಪುತ್ರ ಮನೋರಂಜನ್ ಮುಂದಿನ ಚಿತ್ರದ ಹೆಸರೇನು.?

ರವಿಚಂದ್ರನ್ ಪುತ್ರ ಮನೋರಂಜನ್ ಮುಂದಿನ ಚಿತ್ರದ ಹೆಸರೇನು.?

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವರ ಚೊಚ್ಚಲ ಸಿನಿಮಾ 'ಸಾಹೇಬ' ಬಿಡುಗಡೆಯ ಹೊಸ್ತಿಲಲ್ಲಿದೆ. ಅಷ್ಟಾರಲ್ಲಾಗಲೇ, 'ವಿ.ಐ.ಪಿ' ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿರುವ ಮನೋರಂಜನ್ ಇದೀಗ ಮೂರನೇ ಸಿನಿಮಾದ ಬಗ್ಗೆ ಗಮನ ಹರಿಸಿದ್ದಾರೆ. ಮೂಲಗಳ ಪ್ರಕಾರ, ಮನೋರಂಜನ್ ರವರ ಮೂರನೇ ಚಿತ್ರ 'ರಾಕ್ ಸ್ಟಾರ್'.

'ರಾಕ್ ಸ್ಟಾರ್' ಚಿತ್ರದ ಕಥೆ ಕೇಳಿದ್ಮೇಲೆ, ಸಿನಿಮಾಗೆ ಮನೋರಂಜನ್ ಓಕೆ ಕೊಟ್ಟಿದ್ದಾರೆ ಎನ್ನಲಾಗಿದೆ. ಗೌರಿ-ಗಣೇಶ ಹಬ್ಬದಂದು ಈ ಸಿನಿಮಾ ಅನೌನ್ಸ್ ಆಗುವ ಸಾಧ್ಯತೆ ಇದೆ.

manoranjan-s-third-film-is-titled-as-rock-star

ಅಂದ್ಹಾಗೆ, 'ರಾಕ್ ಸ್ಟಾರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವವರು ಯಾರು ಎಂಬ ಮಾಹಿತಿ ತಿಳಿದು ಬಂದಿಲ್ಲ. ಅಷ್ಟಕ್ಕೂ, 'ರಾಕ್ ಸ್ಟಾರ್' ಟೈಟಲ್ ಈಗಾಗಲೇ ಫಿಲ್ಮ್ ಚೇಂಬರ್ ನಲ್ಲಿ ರಿಜಿಸ್ಟರ್ ಆಗ್ಬಿಟ್ಟಿದೆ. ಶೀರ್ಷಿಕೆ ತಮ್ಮ ಹೆಸರಿಗೆ ಬಂದ್ಮೇಲೆ, ಸಿನಿಮಾ ಅನೌನ್ಸ್ ಮಾಡುವ ಪ್ಲಾನ್ ನಿರ್ಮಾಪಕ ಹಾಗೂ ನಿರ್ದೇಶಕರದ್ದು.

ಮನೋರಂಜನ್ ಹಾಗೂ ಶಾನ್ವಿ ಅಭಿನಯಿಸಿರುವ 'ಸಾಹೇಬ' ಸೆನ್ಸಾರ್ ಅಂಗಳದಿಂದ ಪಾಸ್ ಅದ ಕೂಡಲೆ ತೆರೆಗೆ ಬರಲಿದೆ.

English summary
Crazy Star Ravichandran's son Manoranjan's third film is tentatively titled as 'Rock Star'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada